ಶ್ರೀನಗರ: ಭಾರತೀಯರು ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ವಿಶ್ವದ ದೊಡ್ಡಣ್ಣ ಎಂದೆನಿಸಿಕೊಳ್ಳುವ ಅಮೆರಿಕದ ರಾಜಕೀಯ ವ್ಯವಸ್ಥೆಯ ಭಾಗವಾಗಿ ಹೊರಹೊಮ್ಮಿತ್ತಿದ್ದಾರೆ.
ಕಾಶ್ಮೀರದಲ್ಲಿ ಜನಿಸಿದ ಆಯಿಷಾ ಷಾ ಅವರನ್ನು ಬಿಡೆನ್ ಆಡಳಿತವು ಶ್ವೇತಭವನದ ಡಿಜಿಟಲ್ ಸ್ಟ್ರಾಟಜಿ ಕಚೇರಿಯಲ್ಲಿ ಹಿರಿಯ ಸ್ಥಾನಕ್ಕೆ ಸೇರಿಸಿಕೊಂಡಿದೆ. ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ತಮ್ಮ ಶ್ವೇತಭವನದ ಆಫೀಸ್ ಆಫ್ ಡಿಜಿಟಲ್ ಸ್ಟ್ರಾಟಜಿ ಸದಸ್ಯರ ಹೆಸರನ್ನು ಘೋಷಣೆ ಮಾಡಿದರು. ಅದರಲ್ಲಿ ಷಾ ಅವರನ್ನು ಪಾಲುದಾರಿಕೆ ವ್ಯವಸ್ಥಾಪಕರಾಗಿ ನೇಮಕ ಮಾಡಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಜನಿಸಿದ ಆಯಿಷಾ ಯುಎಸ್ನ ಲೂಯಿಸಿಯಾನದಲ್ಲಿ ಬೆಳೆದರು. ಕಾರಣ ಅವರ ಕುಟುಂಬವು 90 ರ ದಶಕದ ಆರಂಭದಲ್ಲಿ ಕಾಶ್ಮೀರದಿಂದ ಸ್ಥಳಾಂತರಗೊಂಡಿತ್ತು. ಪ್ರಸ್ತುತ ಸ್ಮಿತ್ಸೋನಿಯನ್ ಸಂಸ್ಥೆಯ ಪ್ರಗತಿ ತಜ್ಞರಾಗಿ ಷಾ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕಾಶ್ಮೀರದ ಜನರು ಷಾ ರವರ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿರುವ ಆಕೆಯ ಮನೆಯ ಸಮೀಪದವರಾದ ಅಲ್ತಾಫ್ ಬಜಾಜ್, ಆಯೆಷಾ ಸುಶಿಕ್ಷಿತ ಕುಟುಂಬಕ್ಕೆ ಸೇರಿದವಳು. ಇಂದು ಅವಳು ಕಾಶ್ಮೀರವನ್ನು ಉನ್ನತ ಎತ್ತರಕ್ಕೆ ಏರುವಂತೆ ಮಾಡಿದ್ದಾಳೆ. ಆಕೆಯ ಕಠಿಣ ಪರಿಶ್ರಮ ಯಶಸ್ಸಿಗೆ ಪ್ರಮುಖವಾಗಿದೆ ಎಂದು ನಾವು ಹೆಮ್ಮೆ ಪಡುತ್ತೇವೆ ಎಂದಿದ್ದಾರೆ.
ಕಾಶ್ಮೀರಿ ಹುಡುಗಿಗೆ ಬಿಡನ್ ಸರ್ಕಾರದಲ್ಲಿ ಹಿರಿಯ ಸ್ಥಾನ ಆಯಿಷಾ ತಮ್ಮ ತಂದೆ ಸೈಯದ್ ಅಮೀರ್ ಷಾ ಅವರೊಂದಿಗೆ ಅಮೆರಿಕಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಹೋದರು. ಪ್ರತಿವರ್ಷ ಅವರು ಇಲ್ಲಿ ಸಮಯ ಕಳೆಯಲು ಕಾಶ್ಮೀರಕ್ಕೆ ಬರುತ್ತಾರೆ. ಹಾಗೆಯೇ ಆಕೆಯ ತಂದೆ ಯಾವಾಗಲೂ ಇಲ್ಲಿನ ನೆರೆಹೊರೆಯವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೊಗಳಿದರು. ಯುಎಸ್ ಅಧ್ಯಕ್ಷರೊಂದಿಗಿನ ಆಯಿಷಾ ಅವರ ನಿಕಟ ಒಡನಾಟವು ಕಾಶ್ಮೀರ ಸಮಸ್ಯೆಗೆ ಶೀಘ್ರ ಪರಿಹಾರವನ್ನು ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ. ಅವರು ಕಾಶ್ಮೀರದ ಮಗಳು. ಇಲ್ಲಿನ ಜನರು ಎದುರಿಸುತ್ತಿರುವ ತೊಂದರೆಗಳು ಮತ್ತು ಸಮಸ್ಯೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಬಜಾಜ್ ಹೇಳಿದ್ದಾರೆ.
ಈ ಹುದ್ದೆ ಪಡೆಯುವ ಮುನ್ನ ಆಯಿಷಾ ಅವರು, ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರದ ಡಿಜಿಟಲ್ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ.