ಬೆಂಗಳೂರು:ಭಾರತದ ವಿರುದ್ಧ ಅಮೆರಿಕ ವಿಧಿಸಿದ್ದ CAATSA ನಿರ್ಬಂಧಗಳನ್ನು ತೆರವುಗೊಳಿಸುವ ಭಾರತೀಯ-ಅಮೆರಿಕನ್ ಸಂಸದ ರೋ ಖನ್ನಾ ಅವರು ಮಂಡಿಸಿದ ನ್ಯಾಷನಲ್ ಡಿಫೆನ್ಸ್ ಆಥರೈಜೇಶನ್ ಆ್ಯಕ್ಟ್ (NDAA) ತಿದ್ದುಪಡಿಯನ್ನು ಅಮೆರಿಕದ ಸಂಸತ್ತು ಅಂಗೀಕರಿಸಿದೆ.
ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರುವ ಮಧ್ಯದಲ್ಲೇ ರಷ್ಯಾದಿಂದ S-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ಮಾಸ್ಕೊನೊಂದಿಗೆ ಭಾರತ ಸಹಿ ಹಾಕಿತ್ತು. ಇದರಿಂದ ಕೆರಳಿದ್ದ ಅಮೆರಿಕ ಭಾರತದ ವಿರುದ್ಧ "ನಿರ್ಬಂಧಗಳ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವ ಕಾಯ್ದೆ" (The Countering America’s Adversaries Through Sanctions Act -CAATSA) ಯಡಿ ನಿರ್ಬಂಧಗಳನ್ನು ವಿಧಿಸಿತ್ತು.