ಕರ್ನಾಟಕ

karnataka

ETV Bharat / bharat

ಕರ್ನಾಟಕದ ಮಾಜಿ ಐಎಎಸ್​​ ಅಧಿಕಾರಿ ಪುತ್ರನಿಂದ ಐಐಟಿ ಬಿಹೆಚ್​ಯುಗೆ ಒಂದು ಮಿಲಿಯನ್​ ಡಾಲರ್​ ದೇಣಿಗೆ

ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ ದೇಶ್​​ ದೇಶಪಾಂಡೆ ಅವರು ಉತ್ತರಪ್ರದೇಶದಲ್ಲಿರುವ ಐಐಟಿ ಬಿಹೆಚ್​ಯುಗೆ ಒಂದು ಮಿಲಿಯನ್​ ಡಾಲರ್​ ದೇಣಿಗೆ ನೀಡಿದ್ದಾರೆ. ಇವರ ತಂದೆ ಕರ್ನಾಟಕದಲ್ಲಿ ಐಎಎಸ್​ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

us-entrepreneur-donates-one-million-dollars-to-iit-bhu
ಐಐಟಿ ಬಿಎಚ್​ಯುಗೆ ಒಂದು ಮಿಲಿಯನ್​ ಡಾಲರ್​ ದೇಣಿಗೆ

By

Published : Jun 6, 2022, 4:31 PM IST

ವಾರಣಾಸಿ(ಉತ್ತರ ಪ್ರದೇಶ):ಕರ್ನಾಟಕದಲ್ಲಿ ಐಎಎಸ್​ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉತ್ತರಪ್ರದೇಶದ ಮೂಲದ ಶ್ರೀನಿವಾಸ್​ ದೇಶಪಾಂಡೆ ಅವರ ಪುತ್ರ ಅಮೆರಿಕದ ಬೋಸ್ಟನ್‌ನಲ್ಲಿ ನೆಲೆಸಿರುವ ಉದ್ಯಮಿ ದೇಶ್​ ದೇಶಪಾಂಡೆ ಅವರು ಐಐಟಿ ಬಿಹೆಚ್​ಯು ಫೌಂಡೇಶನ್​ಗೆ ಒಂದು ಮಿಲಿಯನ್​ ಡಾಲರ್​ ದೇಣಿಗೆ ನೀಡಿದ್ದಾರೆ.

ಪತ್ನಿ ಜಯಶ್ರೀ ದೇಶಪಾಂಡೆ ಅವರ ಜೊತೆಗೂಡಿ ಐಐಟಿ ಬಿಹೆಚ್‌ಯು ಫೌಂಡೇಶನ್‌ಗೆ ದೇಣಿಗೆ ನೀಡಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದರೂ ತಾವು ವ್ಯಾಸಂಗ ಮಾಡಿದ ವಿಶ್ವವಿದ್ಯಾಲಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ದೇಶ್​ ಅವರು ತಮ್ಮ ತಂದೆ ಶ್ರೀನಿವಾಸ ದೇಶಪಾಂಡೆ ಅವರ ಸ್ಮರಣಾರ್ಥ ಈ ದೇಣಿಗೆ ನೀಡಿದ್ದಾರೆ. ದೇಶಪಾಂಡೆ ಅವರು ಈ ಸಂಸ್ಥೆಯ 1948 ರ ಬ್ಯಾಚ್‌ನ ಪದವೀಧರರಾಗಿದ್ದಾರೆ. ಸಂಸ್ಥೆಯ ಗ್ರಂಥಾಲಯಕ್ಕೆ ಶ್ರೀನಿವಾಸ್​ ದೇಶಪಾಂಡೆ ಅವರ ಹೆಸರಿಟ್ಟು ಗೌರವ ಸೂಚಿಸಲಾಗಿದೆ.

ದೇಶ್​ ದೇಶಪಾಂಡೆ ಅವರ ತಂದೆ ಶ್ರೀನಿವಾಸ್ ದೇಶಪಾಂಡೆ ಅವರು 1980ರಲ್ಲಿ ಕರ್ನಾಟಕದಲ್ಲಿ ಜಂಟಿ ಕಾರ್ಮಿಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ಹುಬ್ಬಳ್ಳಿಯ ಚಿನ್ಮಯ ಮಿಷನ್ ಅಧ್ಯಕ್ಷ ಹಾಗೂ ಷರೀಫ್ ಟ್ರಸ್ಟ್​​ನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಬಳಿಕ ಅವರು ದೇಶಪಾಂಡೆ ಫೌಂಡೇಶನ್‌ ಆರಂಭಿಸಿದ್ದರು.

ಓದಿ:ಪ್ರಯಾಣಿಕರ ಗಮನಕ್ಕೆ.. IRCTC ಮೂಲಕ ಆನ್​ಲೈನ್​ ಬುಕ್ಕಿಂಗ್​ ಸಾಮರ್ಥ್ಯ ಹೆಚ್ಚಿಸಿದ ರೈಲ್ವೆ ಇಲಾಖೆ

ABOUT THE AUTHOR

...view details