ಕರ್ನಾಟಕ

karnataka

ETV Bharat / bharat

ವ್ಯಾಕ್ಸಿನ್​ ಪಡೆದವರು ಇನ್ಮುಂದೆ ಫುಲ್​ ರಿಲ್ಯಾಕ್ಸ್:​ ಇಲ್ಲಿದೆ ನೋಡಿ ಸಿಡಿಸಿ ಶಿಫಾರಸು - US CDC unveils guidance

ಈಗಾಗಲೇ ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಮಾಸ್ಕ್​ ಧರಿಸದೆ ಅಥವಾ ಮನೆಯೊಳಗಿನ ಸದಸ್ಯರು ತೀವ್ರ ಕಾಯಿಲೆಗೆ ಒಳಗಾಗಿ ಕಡಿಮೆ ಅಪಾಯದಲ್ಲಿದ್ದರೂ ಕೂಡಾ 6 ಅಡಿ ಅಂತರವನ್ನು ಕಾಯ್ದುಕೊಳ್ಳದೆ ಇರಬಹುದು ಹಾಗೂ ಇತರರನ್ನೂ ಸಂಪರ್ಕಿಸಬಹುದು ಎಂದು ಸಿಡಿಸಿ ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

us-cdc-unveils-guidance-for-fully-vaccinated-people
ಸಿಡಿಸಿ

By

Published : Mar 9, 2021, 10:22 PM IST

ಹೈದರಾಬಾದ್​: ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ವ್ಯಾಕ್ಸಿನ್ ಪಡೆದ ಜನರಿಗಾಗಿ (ಐಎಎನ್‌ಎಸ್) ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ತನ್ನ ಮೊದಲ ಶಿಫಾರಸುಗಳನ್ನು ನೀಡಿದ್ದು, ಇದು ಸಾರ್ವಜನಿಕ ಜೀವನದಲ್ಲಿ ಜನರು ಅನುಭವಿಸಿದ್ದ ಕಠಿಣ ಕೊರೊನಾ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದೆ.

'ಸಿಡಿಸಿ'ಯ ಶಿಫಾರಸ್ಸುಗಳು

  • ವ್ಯಾಕ್ಸಿನ್​ ಪಡೆದ ಜನರು ಯಾವುದೇ ಮಾಸ್ಕ್​ಗಳನ್ನು ಧರಿಸದೆ ಹಾಗೂ 6 ಅಡಿ ಅಂತರದಲ್ಲಿ ಉಳಿಯದೆ, ಮನೆಯೊಳಗೆ ಸಂಪೂರ್ಣ ಲಸಿಕೆ ಹಾಕಿದ ಇತರರೊಂದಿಗೂ ಸಂಪರ್ಕದಲ್ಲಿರಬಹುದು ಎಂದು ತಿಳಿಸಿದೆ.
  • ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಮಾಸ್ಕ್​ ಧರಿಸದೆ ಅಥವಾ ಮನೆಯೊಳಗಿನ ಸದಸ್ಯರು ತೀವ್ರ ಕಾಯಿಲೆಗೆ ಒಳಗಾಗಿ ಕಡಿಮೆ ಅಪಾಯದಲ್ಲಿದ್ದರೂ ಕೂಡಾ 6 ಅಡಿ ಅಂತರವನ್ನು ಕಾಯ್ದುಕೊಳ್ಳದೆ ಇರಬಹುದು ಹಾಗೂ ಇತರರನ್ನೂ ಸಂಪರ್ಕಿಸಬಹುದು ಎಂದು ಸಿಡಿಸಿ ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
  • ಈ ನಡುವೆ, ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿಲ್ಲದಿದ್ದರೆ, ಅಂತವರು ಸಂಪರ್ಕತಡೆ ಹಾಗೂ ಕೋವಿಡ್​ ಪರೀಕ್ಷೆಯಿಂದ ದೂರವಿರಬಹುದು ಎಂದಿದೆ.
  • ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಈಗ ತಮ್ಮ ಸ್ವಂತ ಮನೆಗಳಲ್ಲಿ ಪುನರಾರಂಭಿಸಲು ಪ್ರಾರಂಭಿಸುವ ಕೆಲವು ಚಟುವಟಿಕೆಗಳಿವೆ. ಪ್ರತಿಯೊಬ್ಬರೂ, ಅಂದರೆ ಲಸಿಕೆ ಹಾಕಿದವರು ಕೂಡಾ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ನಿಗದಿಯಾದ ನಿಯಮಗಳನ್ನು ಪಾಲಿಸುತ್ತಾ ಮುಂದುವರೆಯಬೇಕು ಎಂದು ಸಿಡಿಸಿ ನಿರ್ದೇಶಕ ರೋಚೆಲ್ ವಾಲೆನ್ಸ್ಕಿ ತಿಳಿಸಿದ್ದಾರೆ.
  • ವಿಜ್ಞಾನವು ವಿಕಸನಗೊಳ್ಳುತ್ತಿರುವುದರ ಜೊತೆಗೆ ಹೆಚ್ಚಿನ ಜನರು ಲಸಿಕೆ ಪಡೆಯುತ್ತಿದ್ದಾರೆ. ಹೀಗಾಗಿ, ಈಗಾಗಲೇ ಲಸಿಕೆ ಹಾಕಿಸಿಕೊಂಡ ಜನರು ಸುರಕ್ಷಿತವಾಗಿ ಹೆಚ್ಚಿನ ಚಟುವಟಿಕೆಗಳನ್ನು ಪುನರಾರಂಭಿಸುವಂತೆ ಮಾರ್ಗದರ್ಶನ ನೀಡುತ್ತೇವೆ ಎಂದಿದ್ದಾರೆ.
  • ಸಿಡಿಸಿ ಪ್ರಕಾರ, ಲಸಿಕೆ ಪಡೆದ ಜನರಿಗೆ ಲಕ್ಷಣರಹಿತ ಸೋಂಕು ಹರಡುವ ಸಾಧ್ಯತೆ ಕಡಿಮೆಯಿರುತ್ತದೆ ಮತ್ತು ಕೋವಿಡ್ -19 ಗೆ ಕಾರಣವಾಗುವ SARS-CoV-2 ಎಂಬ ವೈರಸ್ ಅನ್ನು ಇತರ ಜನರಿಗೆ ಹರಡುವ ಸಾಧ್ಯತೆ ಕಡಿಮೆ ಎಂಬುದರ ಕುರಿತ ವೈಜ್ಞಾನಿಕ ಸಾಕ್ಷಿಗಳಿವೆ ಎಂದಿದೆ.
  • ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಸಾಂಕ್ರಾಮಿಕ ರೋಗವನ್ನು ಹತ್ತಿರಕ್ಕೆ ಬಾರದಂತೆ ತಡೆಯಲು ನೆರವಾಗುವ (ಎಫ್‌ಡಿಎ)-ಅಧಿಕೃತ ಕೋವಿಡ್ -19 ಲಸಿಕೆಯನ್ನು ಪಡೆಯಲು ಸಂಸ್ಥೆ ಜನರನ್ನು ಪ್ರೋತ್ಸಾಹಿಸುತ್ತದೆ.

ಆಹಾರ ಮತ್ತು ಔಷಧ ಆಡಳಿತವು (ಎಫ್​ಡಿಎ) ಯುಎಸ್​ನಲ್ಲಿ ತುರ್ತು ಬಳಕೆಗಾಗಿ ಪ್ರಸ್ತುತ ಮೂರು ಲಸಿಕೆಗಳನ್ನು ಅಧಿಕೃತಗೊಳಿಸಿದೆ.

  • ಜರ್ಮನ್ ಕಂಪನಿ ಬಯೋಟೆಕ್ ಸಹಭಾಗಿತ್ವದಲ್ಲಿ ಅಮೆರಿಕನ್​​ ಔಷಧಿ ತಯಾರಕ ಫಿಜರ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಎಫ್​ಡಿಎ ಅಧಿಕೃತಗೊಳಿಸಿದ್ದು, ಅಮೆರಿಕಾದ ಔಷಧ ತಯಾರಕ ಮೊಡೆರ್ನಾ ಕಂಪನಿಯ ಲಸಿಕೆಯನ್ನು ಡಿಸೆಂಬರ್ 2020 ರಲ್ಲಿ ಅಧಿಕೃತಗೊಳಿಸಿದೆ.
  • ಫೆಬ್ರವರಿ 27 ರಂದು ಜಾನ್ಸನ್ ಮತ್ತು ಜಾನ್ಸನ್‌ರ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿತ್ತು. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಕೆಯ ಹಕ್ಕನ್ನು ಪಡೆದ ಲಸಿಕೆಯ ಮೊದಲ ಡೋಸ್​ ಆಗಿದೆ.

ಕೋವಿಡ್ -19 ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಮೊದಲು ಎಲ್ಲರಿಗೂ ಲಸಿಕೆ ನೀಡಲೇಬೇಕಾಗಿದೆ. ಅಲ್ಲಿಯವರೆಗೆ, ಲಸಿಕೆ ಪಡೆಯದ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸಿಡಿಸಿ ಹೇಳಿದೆ.

ಇಲ್ಲಿಯವರೆಗೆ ಯುಎಸ್​ನಾದ್ಯಂತ 116 ಮಿಲಿಯನ್ ಲಸಿಕೆಗಳನ್ನು ವಿತರಿಸಲಾಗಿದೆ ಮತ್ತು ಇದುವರೆಗೂ 92 ದಶಲಕ್ಷಕ್ಕೂ ಹೆಚ್ಚಿನ ಲಸಿಕೆಯನ್ನು ನೀಡಲಾಗಿದೆ. ಯುಎಸ್ ಜನಸಂಖ್ಯೆಯ ಕೇವಲ 9.2 ಪ್ರತಿಶತದಷ್ಟು ಜನರಿಗೆ ಕೋವಿಡ್ -19 ಲಸಿಕೆಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಸಿಡಿಸಿ ಅಂದಾಜಿಸಿದೆ.

ABOUT THE AUTHOR

...view details