ನವದೆಹಲಿ:ಅಮೆರಿಕಾ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಚುನಾಯಿತ ಅಧ್ಯಕ್ಷ ಜೋ ಬೈಡನ್ ಉದ್ಘಾಟನೆಗೆ ಮುಂಚಿತವಾಗಿ ಮಿಲಿಟರಿ ವಲಯವಾಗಿ ಪರಿವರ್ತನೆಗೊಂಡಿವೆ.
ಕ್ಯಾಪಿಟಲ್ ಹಿಲ್ನಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ವಾಷಿಂಗ್ಟನ್‌ನಲ್ಲಿ ಕಾನೂನು ಜಾರಿ ಮತ್ತು ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಸುಮಾರು 25 ಸಾವಿರ ರಾಷ್ಟ್ರೀಯ ಗಾರ್ಡ್ ಪಡೆಗಳು ಹಾಗೂ ಯುಎಸ್ ಮಾರ್ಷಲ್ಸ್ ದೇಶಾದ್ಯಂತ 4,000 ಅಧಿಕಾರಿಗಳನ್ನು ಡಿಸಿಯಲ್ಲಿ ನಿಯೋಜಿಸುವ ಸಾಧ್ಯತೆಯಿದೆ.