ವಾಷಿಂಗ್ಟನ್(ಅಮೆರಿಕ): ಪಾಕಿಸ್ತಾನದೊಂದಿಗೆ ಸಂಪರ್ಕವಿಟ್ಟುಕೊಂಡು ಅಮೆರಿಕದಲ್ಲಿರುವ ಕೆಲವೊಂದು ಸರ್ಕಾರೇತರ ಸಂಸ್ಥೆಗಳು ಭಾರತಕ್ಕೆ ಕೋವಿಡ್ ಬಿಕ್ಕಟ್ಟು ಎದುರಿಸಲು ಸಹಾಯ ಮಾಡುವ ನೆಪದಲ್ಲಿ ಹಣ ಸಂಗ್ರಹಿಸಿ ಆ ಹಣವನ್ನು ಭಾರತದಲ್ಲಿ ಪ್ರತಿಭಟನೆಗಳನ್ನು ಹುಟ್ಟುಹಾಕಲು ಮತ್ತು ಭಯೋತ್ಪಾದಕ ದಾಳಿಯನ್ನು ಪ್ರಚೋದಿಸಲು ಬಳಸಿಕೊಳ್ಳುತ್ತಿವೆ ಎಂದು ಡಿಸ್ಇನ್ಫೋ ಲ್ಯಾಬ್ (DisInfo Lab) ವರದಿ ಮಾಡಿದೆ.
ಡಿಸ್ಇನ್ಫೋ ಲ್ಯಾಬ್ ಯೂರೋಪಿಯನ್ ಯೂನಿಯನ್ ಮೂಲದ ಸ್ವತಂತ್ರ ಎನ್ಜಿಒ ಆಗಿದ್ದು, 'ಕೋವಿಡ್-19 2021ರ ಹಗರಣ' ಎಂಬ ವರದಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಹಗರಣ ಎಂದು ಈ ವಿಚಾರವನ್ನು ಡಿಸ್ಇನ್ಫೋ ಲ್ಯಾಬ್ ಕರೆದಿದೆ.
'ಹೆಲ್ಪಿಂಗ್ ಇಂಡಿಯಾ ಬ್ರೀಥ್' (Helping India Breathe) ಹೆಸರಿನಲ್ಲಿ ಲಕ್ಷಾಂತರ ಡಾಲರ್ಗಳನ್ನು ಸಂಗ್ರಹ ಮಾಡಲಾಗಿದ್ದು, ಭಾರತದ ಪರವಾಗಿ ಹಲವಾರು ಸಂಘ ಸಂಸ್ಥೆಗಳು ಧನ ಸಹಾಯ ಮಾಡಿದ್ದವು. ಆದರೆ ಈ ಹಣ ಕಾನೂನು ಬಾಹಿರವಾಗಿ ಬಳಕೆಯಾಗುತ್ತಿದೆ ಎಂದು ಡಿಸ್ಇನ್ಫೋ ಲ್ಯಾಬ್ ಬಹಿರಂಗಪಡಿಸಿದೆ.
ಇದನ್ನೂ ಓದಿ:ಹೆಲ್ಮೆಟ್ ಹಾಕಿದ್ದರೆ ವಿಜಯ್ ಜೀವ ಉಳಿಯುತ್ತಿತ್ತು: ಶಿವರಾಜ್ಕುಮಾರ್ ಕಂಬನಿ