ಕರ್ನಾಟಕ

karnataka

ETV Bharat / bharat

ಡಿ.7 ರಂದು ಕೆನಡಾ ಆಯೋಜಿಸಿರುವ ಸಭೆಯಲ್ಲಿ ಭಾಗಿಯಾಗದಿರಲು ಜೈ ಶಂಕರ್ ನಿರ್ಧಾರ - ಕೋವಿಡ್ ಸಂಬಂಧ ಕೆನಡಾ ಜತೆ ಆಯೋಜಿಸಿರುವ ಸಭೆ

ಕೆನಡಾದ ವಿದೇಶಾಂಗ ಸಚಿವ ಫ್ರಾಂಕೋಯಿಸ್- ಫಿಲಿಪ್ ಷಾಂಪೇನ್ ಆಯೋಜಿಸಿರುವ ಸಭೆಯಲ್ಲಿ ವೇಳಾ ಪಟ್ಟಿ ಸಮಸ್ಯೆಯಿಂದಾಗಿ ಸಚಿವ ಜೈ ಶಂಕರ್ ಭಾಗಿಯಾಗುತ್ತಿಲ್ಲ. ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಬೆಂಬಲಿಸಿದ್ದರಿಂದ, ಜೈ ಶಂಕರ್ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

COVID meet
ಜೈ ಶಂಕರ್

By

Published : Dec 5, 2020, 7:31 PM IST

ನವದೆಹಲಿ: ಡಿಸೆಂಬರ್ 7 ರಂದು ಕೋವಿಡ್ ನಿಯಂತ್ರಣಕ್ಕೆ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ಕೆನಡಾ ಸರ್ಕಾರ ಹಮ್ಮಿಕೊಂಡಿರುವ ಸಭೆಯಲ್ಲಿ ವಿದೇಶಾಂಗ ಸಚಿವ ಜೈ ಶಂಕರ್ ಭಾಗಿಯಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಕೆನಡಾದ ವಿದೇಶಾಂಗ ಸಚಿವ ಫ್ರಾಂಕೋಯಿಸ್- ಫಿಲಿಪ್ ಷಾಂಪೇನ್ ಆಯೋಜಿಸಿರುವ ಸಭೆಯಲ್ಲಿ ವೇಳಾ ಪಟ್ಟಿ ಸಮಸ್ಯೆಯಿಂದಾಗಿ ಸಚಿವ ಜೈ ಶಂಕರ್ ಭಾಗಿಯಾಗುತ್ತಿಲ್ಲ. ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಬೆಂಬಲಿಸಿದ್ದರಿಂದ, ಅಸಮಾಧಾನಗೊಂಡು ಜೈ ಶಂಕರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ತಿಂಗಳು ಕೆನಡಾದ ವಿದೇಶಾಂಗ ಸಚಿವ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್ ನೇತೃತ್ವದಲ್ಲಿ ನಡೆದ ವರ್ಚುವಲ್ ಮೀಟಿಂಗ್​ನಲ್ಲಿ ಜೈ ಶಂಕರ್ ಭಾಗವಹಿಸಿದ್ದರು. ಬಳಿಕ ಸಚಿವರು, ಕೋವಿಡ್ ಸಂಬಂಧಿತ ಸವಾಲುಗಳ ಬಗ್ಗೆ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ವಿದೇಶಾಂಗ ಮಂತ್ರಿಗಳ ಗುಂಪಿನಲ್ಲಿ ಭಾಗವಹಿಸಿದ್ದು ಸಂತೋಷವಾಗಿದೆ. ಸಭೆ ಕರೆದಿದ್ದಕ್ಕಾಗಿ ಕೆನಡಾದ ಎಫ್‌ಎಂ @FP_Champagne ಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

ಇದೀಗ ಟ್ರುಡೊ ಅವರು ನೀಡಿದ್ದ ಹೇಳಿಕೆಯಿಂದಾಗಿ ಜೈ ಶಂಕರ್ ಬೇಸರಗೊಂಡಿದ್ದಾರೆ. ನಿನ್ನೆ ಕೆನಡಾದ ಹೈಕಮಿಷನರ್​​ ನಾಡಿರ್ ಪಟೇಲ್ ಜತೆ ಭಾರತದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಟ್ರುಡೊ ಇಂಥ ಹೇಳಿಕೆ ನೀಡುವುದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರುಡೊ, ಕೆನಡಾ ಯಾವಾಗಲೂ ಶಾಂತಿಯುತ ಪ್ರತಿಭಟನೆ ಮತ್ತು ಮಾನವ ಹಕ್ಕುಗಳ ಪರವಾಗಿ ನಿಲ್ಲುತ್ತದೆ ಎಂದು ಪುನರುಚ್ಚರಿಸಿದ್ದಾರೆ.

ಟ್ರುಡೊ ಅವರ ಈ ಮಾತಿಗೆ ಪ್ರತಿಕ್ರಿಯಿಸಿರುವ ವಿದೇಶಿ ನೀತಿ ತಜ್ಞರು, ಭಾರತದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲು ಕೆನಡಾ ಪ್ರಧಾನಿಗೆ ಯಾವುದೇ ಹಕ್ಕಿಲ್ಲ ಎಂದಿದ್ದಾರೆ.

ABOUT THE AUTHOR

...view details