ಕರ್ನಾಟಕ

karnataka

ETV Bharat / bharat

UPSC 2023 Prelims Results : 2023ನೇ ಸಾಲಿನ ನಾಗರಿಕ ಸೇವೆಗಳ ಪ್ರಿಲಿಮ್ಸ್​ ಪರೀಕ್ಷೆ ಫಲಿತಾಂಶ ಶೀಘ್ರ ಪ್ರಕಟ: ಇಲ್ಲಿದೆ ಪೂರ್ಣ ಮಾಹಿತಿ

2023ನೇ ಸಾಲಿನ ನಾಗರಿಕ ಸೇವೆಗಳ ಪ್ರಿಲಿಮ್ಸ್​ ಪರೀಕ್ಷೆಯ ಫಲಿತಾಂಶ ಸದ್ಯದಲ್ಲೇ ಪ್ರಕಟಗೊಳ್ಳಲಿದ್ದು, ಫಲಿತಾಂಶ ಹುಡುಕಾಟ, ಡೌನ್​ಲೋಡ್​ ಸೇರಿದಂತೆ ಅದರ ಸಂಪೂರ್ಣ ಮಾಹಿತಿ ಈ ಕೆಳಗಿದೆ.

ಕೇಂದ್ರ ಲೋಕಸೇವಾ ಆಯೋಗ
ಕೇಂದ್ರ ಲೋಕಸೇವಾ ಆಯೋಗ

By

Published : Jun 10, 2023, 7:58 PM IST

ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ್ದ 2023ನೇ ಸಾಲಿನ ನಾಗರಿಕ ಸೇವೆಗಳ ಪ್ರಿಲಿಮ್ಸ್​ ಪರೀಕ್ಷೆಯ ಫಲಿತಾಂಶ ಸದ್ಯದಲ್ಲೇ ಪ್ರಕಟಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.

ಕಳೆದ ತಿಂಗಳು ಮೇ 28 ರಂದು ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಇತರ ವಿವಿಧ ನಾಗರಿಕ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲೋಕಸೇವಾ ಆಯೋಗ ಪ್ರಿಲಿಮ್ಸ್​ ಪರೀಕ್ಷೆಯನ್ನು ನಡೆಸಿತ್ತು. ಅಭ್ಯರ್ಥಿಗಳ ಆಯ್ಕೆಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಮೊದಲನೇ ಹಂತದಲ್ಲಿ ಪ್ರಿಲಿಮ್ಸ್, ಎರಡನೇ ಹಂತದಲ್ಲಿ ಮೇನ್ಸ್​ ಮತ್ತು ಮೂರನೇ ಹಂತದಲ್ಲಿ ಸಂದರ್ಶನ ಇರುತ್ತದೆ. ಇನ್ನು ಸದ್ಯದಲ್ಲೇ ಪ್ರಿಲಿಮ್ಸ್ ಫಲಿತಾಂಶ​ ಪ್ರಕಟಗೊಳ್ಳಲಿದೆ. ಆದರೆ ಅಧಿಕೃತ ದಿನಾಂಕವನ್ನು ಆಯೋಗ ತಿಳಿಸಿಲ್ಲ.

ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್​ಗಳಾದ upsc.gov.inಮತ್ತು upsconline.nic.in ನಲ್ಲಿ ನೋಡಬಹುದಾಗಿದೆ ಮತ್ತು ಡೌನ್​ಲೋಡ್​ ಮಾಡಬಹುದಾಗಿದೆ.

ಪ್ರಿಲಿಮ್ಸ್ ಫಲಿತಾಂಶವನ್ನು ಡೌನ್‌ಲೋಡ್ ಮಾಡಲು, ಈ ಹಂತಗಳನ್ನು ಅನುಸರಿಸಿ

  • ಮೊದಲಿಗೆ ಲೋಕಸೇವಾ ಆಯೋಗದ ಅಧಿಕೃತ ವೆಬ್​ಸೈಟ್​ ಆದ www.upsc.gov.inಗೆ ಭೇಟಿ ನೀಡಿ.
  • ನಂತರ ಮುಖಪುಟದಲ್ಲಿ 'ಫಲಿತಾಂಶಗಳು' ಅಥವಾ 'ಪರೀಕ್ಷೆಗಳು" ವಿಭಾಗದ ಮೇಲೆ ಕ್ಲಿಕ್​ ಮಾಡಿ.
  • 'UPSC ಫಲಿತಾಂಶ' ಅಥವಾ ಗೊತ್ತುಪಡಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಬಳಿಕ ಫಲಿತಾಂಶದ ಪುಟ ತೆರದುಕೊಳ್ಳುತದತದೆ.
  • ನಂತರ ನಿಮ್ಮ ರೋಲ್ ನಂಬರ್​, ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಇತರೆ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ.
  • ಅಗತ್ಯವಿರುವ ಕಡೆ ನಿಖರವಾಗಿ ನಿಮ್ಮ ವಿವವರಗಳನ್ನು ನಮೂದಿಸಬೇಕು.
  • ಮಾಹಿತಿಯನ್ನು ನಮೂದಿಸಿದ ನಂತರ, ಅಲ್ಲಿ ಕಾಣಸಿಗುವ 'ಸಲ್ಲಿಸು' ಅಥವಾ 'ಡೌನ್‌ಲೋಡ್' ಆಪ್ಶನ್​ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಪ್ರಿಲಿಮ್ಸ್​ ಪರೀಕ್ಷೆಯ ಫಲತಾಂಶ ಸ್ಕ್ರೀನ್​ ಮೇಲೆ ಪ್ರದರ್ಶನವಾಗುತ್ತದೆ.
  • ಒಟ್ಟಾರೆ ಅಂಕಗಳು, ಶ್ರೇಣಿ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿರುವ ನಿಮ್ಮ ಫಲಿತಾಂಶವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
  • ಬಳಿಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಅದನ್ನು ಉಳಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಫಲಿತಾಂಶದ ಹಾರ್ಡ್ ಪ್ರತಿಯನ್ನು ಮುದ್ರಿಸಲು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

UPSC ಟಾಪರ್ ಪಟ್ಟಿಯನ್ನು ಡೌನ್‌ಲೋಡ್ ಮಾಡಲು, ಈ ಹಂತಗಳನ್ನು ಅನುಸರಿಸಿ

  1. ಮೊದಲಿಗೆ ಲೋಕಸೇವಾ ಆಯೋಗದ ಅಧಿಕೃತ ವೆಬ್​ಸೈಟ್​ ಆದ www.upsc.gov.inಗೆ ಭೇಟಿ ನೀಡಿ.
  2. ನಂತರ ಮುಖಪುಟದಲ್ಲಿ ಟಾಪರ್​ ಲಿಸ್ಟ್​ ಸರ್ಚ್​ ಮಾಡಿ ಅಥವಾ ಇತ್ತೀಚಿನ ಸುದ್ದಿ ವಿಭಾಗಕ್ಕೆ ತೆರಳಿ ಅಲ್ಲಿ UPSC ಟಾಪರ್ಸ್​ 2023 ಲಿಸ್ಟ್​​ ಕಾಣಸಿಗುತ್ತದೆ.​
  3. ನಂತರ ಟಾಪರ್ ಪಟ್ಟಿ ಪ್ರವೇಶಿಸಲು ಅಲ್ಲಿ ಕಾಣಸಿಗುವ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. ಮುಖಪುಟದಲ್ಲಿ ಟಾಪರ್​ ಲಿಸ್ಟ್​ PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಲು ಲಿಂಕ್​ ಆಯ್ಕೆ ನೀಡಲಾಗಿರುತ್ತದೆ.
  5. ಟಾಪ್ಪರ್ ಪಟ್ಟಿಯನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು PDF ರೀಡರ್ ಪ್ರೋಗ್ರಾಂ ಅನ್ನು ಬಳಸಿ.
  6. ನಂತರ ಟಾಪರ್ ಪಟ್ಟಿಯನ್ನು ಉಳಿಸಲು ಮತ್ತು ಡೌನ್‌ಲೋಡ್ ಮಾಡಲು ನೀಡಿರುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಲಿಸ್ಟ್​ ಪಡೆಯಬಹುದಾಗಿದೆ.

ಇದನ್ನೂ ಓದಿ:ಬಡತನ ಮಧ್ಯೆಯೂ ಧೃತಿಗೆಡದೇ ಯಶಸ್ಸು ಸಾಧಿಸಿದ ಮುದ್ದೇಬಿಹಾಳ ತಾಂಡಾದ ಯಲಗೂರೇಶ ನಾಯಕ: ಯುಪಿಎಸ್​ಸಿಯಲ್ಲಿ 890ನೇ ರ‍್ಯಾಂಕ್

ABOUT THE AUTHOR

...view details