ಜೈಪುರ್(ರಾಜಸ್ಥಾನ): 2021ನೇ ಸಾಲಿನ ಯುಪಿಎಸ್ಸಿ ಅಂತಿಮ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಒಟ್ಟು 685 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ ರಾಜಸ್ಥಾನ ಜೈಪುರದ ತನುಶ್ರೀ ಮೀನಾ 120ನೇ ಸ್ಥಾನ ಪಡೆದುಕೊಂಡಿದ್ದು, ಮತ್ತೊಂದೆಡೆ ಗಂಗಾನಗರದ ರವಿ ಸಿಹಾಗ್ 18ನೇ ಸ್ಥಾನ ಹಾಗೂ ಬಿರಾಟ್ ನಗರದ ಸುನೀಲ್ ಧ್ವನಂತ್ 22ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ನಾಗೌರ್ ಜಿಲ್ಲೆಯ ಇಬ್ಬರು ವೈದ್ಯ ಸಹೋದರರೂ ಪರೀಕ್ಷೆಯಲ್ಲಿ ಒಟ್ಟಿಗೆ ಪಾಸ್ ಆಗಿದ್ದಾರೆ.
ಇದನ್ನೂ ಓದಿ:ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ಪ್ರಶಾಂತ್.. ರಾಜ್ಯದ ಒಂದೇ ಸಂಸ್ಥೆಯ 20 ಅಭ್ಯರ್ಥಿಗಳು ಆಯ್ಕೆ
ನಾಗೌರ್ ಜಿಲ್ಲೆಯ ಭಾವಂತ್ ಗ್ರಾಮದ ಇಬ್ಬರು ವೈದ್ಯರಾದ ಡಾ. ಕೃಷ್ಣ ಕಾಂತ್ ಕನ್ವಾಡಿಯಾ 382ನೇ ಸ್ಥಾನ ಹಾಗೂ ಡಾ. ರಾಹುಲ್ ಕನ್ವಾಡಿಯಾ 536ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಶಾಸಕ ರಾಮ್ ಪ್ರತಾಪ್ ಕಸ್ನಿಯಾ ಅವರ ಸೋದರಳಿಯ ಬಿಕಾನೇರ್ ನಿವಾಸಿ ಮೋಹಿತ್ ಕಸ್ನಿಯಾ 61ನೇ ಸ್ಥಾನ ಪಡೆದುಕೊಂಡಿದ್ದು, ಬಿಕಾನೇರ್ನ ಪ್ರಜ್ಞಾ 91ನೇ ರ‍್ಯಾಂಕ್, ದಿನೇಶ್ ಪ್ರತಾಪ್ ಸಿಂಗ್ 208ನೇ ರ‍್ಯಾಂಕ್, ಪುರಸಭೆಯ ಪಿಆರ್ಒ ಸೀತಾರಾಮ್ ಮೀನಾ ಅವರ ಪುತ್ರ ಹೇರಾಜ್ ಮೀನಾ 485ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ರಾಜಸ್ಥಾನದ ಆಕಾಶ್ ಕುಮಾರ್ ಶರ್ಮಾ 507, ಪರೀಕ್ಷಿತ್ ಸಿಹಾಗ್ 529 ಸ್ಥಾನ ಪಡೆದಿದ್ದಾರೆ.
ಈ ಸಲದ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪ್ 10 ಸ್ಥಾನಗಳ ಪೈಕಿ ಮೊದಲ ನಾಲ್ಕರಲ್ಲಿ ಮಹಿಳಾ ಅಭ್ಯರ್ಥಿಗಳು ಮೆಲುಗೈ ಸಾಧಿಸಿದ್ದು, ಶೃತಿ ಶರ್ಮಾ,ಅಂಕಿತಾ ಅಗರ್ವಾಲ್,ಗಾಮಿನಿ ಸಿಂಗ್ಲಾ ಹಾಗೂ ಐಶ್ವರ್ಯಾ ವರ್ಮಾ ಇದ್ದಾರೆ.