ಕರ್ನಾಟಕ

karnataka

ETV Bharat / bharat

ಹಿಜಾಬ್​ ತೆಗೆಯಲು ಹೇಳಿದ್ದಕ್ಕೆ ಪರೀಕ್ಷೆ ಬಿಟ್ಟು ವಿದ್ಯಾರ್ಥಿನಿಯರ ಪ್ರತಿಭಟನೆ - ಮುಜಾಫರ್‌ಪುರದಲ್ಲಿ ಹಿಜಾಬ್ ವಿವಾದ

ಈಗ ಹಿಜಾಬ್ ವಿವಾದ ಬಿಹಾರಕ್ಕೆ ತಲುಪಿದೆ. ಮುಜಾಫರ್‌ಪುರದ ಎಂಡಿಡಿಎಂ ಕಾಲೇಜಿನಲ್ಲಿ ಭಾನುವಾರ ಹಿಜಾಬ್ ತೆಗೆಯುವುದರ ಬಗ್ಗೆ ತೀವ್ರ ಗದ್ದಲ ಉಂಟಾಯಿತು. ಇಂಟರ್​ ಮೀಡಿಯೇಟ್ ಸೆಂಟ್​ ಅಪ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರ ಪರಿಶೀಲನೆ ವೇಳೆ ಈ ವಿವಾದ ಬೆಳಕಿಗೆ ಬಂದಿದೆ.

Hijab controversy in Muzaffarpur  Hijab controversy in Bihar  Uproar over Hijab in MDDM College  hijab controversy  ಹಿಜಾಬ್​ ತೆಗೆಯಲು ವಿವಾದ  ಹಿಜಾಬ್ ತೆಗೆಯುವುದರ ಬಗ್ಗೆ ತೀವ್ರ ಗದ್ದಲ  ಇಂಟರ್ ಸೆಂಟ್​ ಅಪ್ ಪರೀಕ್ಷೆ  ಹಿಜಾಬ್‌ಗೆ ಸಂಬಂಧಿಸಿದಂತೆ ತೀವ್ರ ವಿವಾದ  ಮುಜಾಫರ್‌ಪುರದಲ್ಲಿ ಹಿಜಾಬ್ ವಿವಾದ  ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಮಾತನಾಡಿದ ಆರೋಪ
ಹಿಜಾಬ್​ ತೆಗೆಯಲು ವಿವಾದ ಬಳಸಿಕೊಂಡ್ರಾ ವಿದ್ಯಾರ್ಥಿನಿಯರು

By

Published : Oct 17, 2022, 8:11 AM IST

ಮುಜಾಫರ್‌ಪುರ, ಬಿಹಾರ್​:ನಗರದ ಎಂಡಿಡಿಎಂ ಕಾಲೇಜಿನಲ್ಲಿ ಭಾನುವಾರ ಹಿಜಾಬ್‌ಗೆ ಸಂಬಂಧಿಸಿದಂತೆ ತೀವ್ರ ವಿವಾದ ಭುಗಿಲೆದ್ದಿದೆ. ಇಂಟರ್ ಮೀಡಿಯೇಟ್ ಸೆಂಟ್​ ಅಪ್ ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದಿದ್ದ ಗೊಂದಲಕ್ಕೆ ಕಾರಣವಾಯಿತು.

ಮುಜಾಫರ್‌ಪುರದಲ್ಲಿ ಹಿಜಾಬ್ ವಿವಾದ:ಕಾಲೇಜಿನಲ್ಲಿ ಸೆಂಟ್​ ಅಪ್ ಪರೀಕ್ಷೆ ನಡೆಯುತ್ತಿದೆ. ಈ ವೇಳೆ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದರು. ವಿದ್ಯಾರ್ಥಿನಿಯರು ಬ್ಲೂಟೂತ್‌ನೊಂದಿಗೆ ಬಂದಿದ್ದಾರೆ ಎಂಬ ಅನುಮಾನದಿಂದ ಶಿಕ್ಷಕ ರವಿಭೂಷಣ್ ಅವರನ್ನು ತಡೆದು ಹಿಜಾಬ್ ತೆಗೆಯುವಂತೆ ಹೇಳಿದರು. ನೀವು ಮಹಿಳಾ ಸಿಬ್ಬಂದಿಗೆ ಕರೆ ಮಾಡಿ ತಪಾಸಣೆ ಮಾಡಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರು ಹೇಳಿದ್ದರು. ಆದ್ರೂ ಸಹಿತ ಶಿಕ್ಷಕರು ತಮ್ಮ ಮಾತಿಗೆ ಕಿವಿಗೊಡಲಿಲ್ಲ, ಹಿಜಾಬ್ ತೆಗೆಯುವಂತೆ ಬಲವಂತಪಡಿಸಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಮಾತನಾಡಿದ ಆರೋಪ:ನಮ್ಮನ್ನು ದೇಶ ವಿರೋಧಿ ಎಂದೂ ಶಿಕ್ಷಕ ರವಿಭೂಷಣ್ ಕರೆದಿದ್ದಾರೆ ಅಂತಾ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ನೀವು ಇರೋದು ಇಲ್ಲಿ ಮತ್ತು ಹಾಡು ಅವರದ್ದು ಹಾಡುತ್ತೀರಿ. ಸುಮ್ಮನೆ ಪಾಕಿಸ್ತಾನಕ್ಕೆ ಹೋಗಿ ಅಂತಾ ಹೇಳಿದ್ದಾರೆ ಹೇಳಲಾಗುತ್ತಿದೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿಯರು ಗೇಟ್‌ನಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು.

ಷಡ್ಯಂತ್ರ ಆರೋಪ:ಕಾಲೇಜು ಪ್ರಾಂಶುಪಾಲೆ ಡಾ.ಕಾನು ಪ್ರಿಯಾ ಮಾತನಾಡಿ, ಇದೆಲ್ಲ ವಾತಾವರಣ ಹಾಳು ಮಾಡುವ ಷಡ್ಯಂತ್ರ. ಕಾಲೇಜಿನ ಇತಿಹಾಸ ಬಹಳ ಹಳೆಯದು. ಎಲ್ಲರೂ ಇಂಟರ್ ಮೀಡಿಯೇಟ್ ವಿದ್ಯಾರ್ಥಿಗಳಾಗಿದ್ದರು. ವಿದ್ಯಾರ್ಥಿನಿಯರಿಗೆ ಮೊಬೈಲ್ ಮತ್ತು ಬ್ಲೂಟೂತ್ ತೆಗೆಯುವಂತೆ ಹೇಳಲಾಗಿತ್ತು. ಅದನ್ನೇ ಪ್ರತ್ಯೇಕ ವಿಷಯವನ್ನಾಗಿಸಿ ಧರ್ಮದ ವಾದಕ್ಕೆ ಮುಂದಾದರು. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ವಿದ್ಯಾರ್ಥಿನಿಯರ ಹಾಜರಾತಿಯೂ ಶೇ.75ಕ್ಕಿಂತ ಕಡಿಮೆ ಇದೆ. ಈಗ ಶಿಕ್ಷಣ ಸಚಿವರು ಮತ್ತು ವಿಶ್ವವಿದ್ಯಾಲಯವು ಕಡಿಮೆ ಶೇಕಡಾವಾರು ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅನುಮತಿಸುವುದಿಲ್ಲ ಎಂದು ಆದೇಶಿಸಿದೆ. ಇವರು ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತಿದ್ದಾರೆ ಎಂದರು.

ಶಿಕ್ಷಕರು ಆ ರೀತಿ ಹೇಳಿಲ್ಲ: ಹಿಜಾಬ್ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಅವರು ಆರೋಪಿಸುತ್ತಿರುವ ಶಿಕ್ಷಕರು ದೇಶವಿರೋಧಿ ಮತ್ತು ಪಾಕಿಸ್ತಾನಕ್ಕೆ ಹೋಗುವಂತಹ ಹೇಳಿಕೆಗಳನ್ನು ಹೇಳಲಿಲ್ಲ. ಇವರು ಅನಾವಶ್ಯಕವಾಗಿ ಈ ವಿಷಯವನ್ನು ಉತ್ಪ್ರೇಕ್ಷೆ ಮಾಡುತ್ತಿದ್ದಾರೆ ಎಂದು ಪ್ರಾಂಶುಪಾಲರಾದ ಡಾ. ಕನು ಪ್ರಿಯಾ ಹೇಳಿದ್ದಾರೆ.

ಗಲಾಟೆ ಬಗ್ಗೆ ಮಾಹಿತಿ ಪಡೆದ ಮಿಥನ್‌ಪುರ ಠಾಣೆಯ ಅಧಿಕಾರಿ ಶ್ರೀಕಾಂತ್ ಪ್ರಸಾದ್ ಸಿನ್ಹಾ ಅವರು ಮಹಿಳಾ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದರು. ವಿದ್ಯಾರ್ಥಿನಿಯರ ಮನವೊಲಿಸಲು ಯತ್ನಿಸಿದರೂ ಸಹ ಪ್ರಯೋಜನಾವಾಗಲಿಲ್ಲ. ಸ್ವಲ್ಪ ಸಮಯದ ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಾನು ಪ್ರಿಯಾ ಆಗಮಿಸಿ ಎಲ್ಲರನ್ನು ಸಮಾಧಾನಪಡಿಸಿದರು.

ಓದಿ:ಕರ್ನಾಟಕ ಸರ್ಕಾರ ಆದೇಶ ಹಿಂಪಡೆದರೆ ಹಿಜಾಬ್​ ವಿವಾದವು ತಾನಾಗಿಯೇ ಅಂತ್ಯವಾಗಲಿದೆ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ

ABOUT THE AUTHOR

...view details