ಕರ್ನಾಟಕ

karnataka

ETV Bharat / bharat

ಕಾಶ್ಮೀರ ಕಣಿವೆಯಲ್ಲಿ ಹೊರ ರಾಜ್ಯದ ಕಾರ್ಮಿಕರ ಮೇಲೆ ಮತ್ತೆ ದಾಳಿ..ಆತಂಕದಲ್ಲಿ ಕೆಲಸಗಾರರು! - ಕಾಶ್ಮೀರೇತರರನ್ನು ಗುರಿಯಾಗಿಸಿಕೊಂಡು ಮತ್ತೆ ಮತ್ತೆ ದಾಳಿ

ಇದೀಗ ಮತ್ತೆ ಅಂತಹುದೇ ಘಟನೆ ಪುಲ್ವಾಮಾದಲ್ಲಿ ಮರುಕಳಿಸಿದೆ. ಇಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ದಾಳಿ ನಡೆಸಲಾಗಿದೆ. ಪುಲ್ವಾಮಾದ ಖಾರ್ಪೋರಾ ರತ್ನಿಪೋರಾದಲ್ಲಿ ಉಗ್ರರು ಇಬ್ಬರು ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದಾರೆ. ಉಗ್ರರ ದಾಳಿಯಿಂದಾಗಿ ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Update: Non local labour attacked in Pulwama
ಕಾಶ್ಮೀರ ಕಣಿವೆಯಲ್ಲಿ ಹೊರ ರಾಜ್ಯದ ಕಾರ್ಮಿಕರ ಮೇಲೆ ಮತ್ತೆ ದಾಳಿ

By

Published : Sep 24, 2022, 9:22 PM IST

ಪುಲ್ವಾಮಾ( ಜಮ್ಮು -ಕಾಶ್ಮೀರ):ಭಾರತೀಯ ಸೇನೆ ಉಗ್ರರ ಹೆಡೆಮುರಿ ಕಟ್ಟಲು ಸತತ ಕಾರ್ಯಾಚರಣೆ ನಡೆಸುತ್ತಿದ್ದರೆ, ಅತ್ತ ಕಣಿವೆ ರಾಜ್ಯದಲ್ಲಿ ಉಗ್ರರು ಕಾಶ್ಮೀರೇತರರನ್ನು ಗುರಿಯಾಗಿಸಿಕೊಂಡು ಮತ್ತೆ ಮತ್ತೆ ದಾಳಿ ಮುಂದುವರಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದತಿ ಹಾಗೂ ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಸಂಬಂಧ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಜಮ್ಮು ಕಾಶ್ಮೀರದಲ್ಲಿ ಅಲ್ಲಿನ ಸ್ಥಳೀಯರನ್ನು ಬಿಟ್ಟು ಕೆಲಸಕ್ಕೆ ಬಂದವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಈಗಾಗಲೇ ಹಲವರನ್ನು ಹತ್ಯೆ ಮಾಡಿದ್ದಾರೆ.

ಇದೀಗ ಮತ್ತೆ ಅಂತಹುದೇ ಘಟನೆ ಪುಲ್ವಾಮಾದಲ್ಲಿ ಮರುಕಳಿಸಿದೆ. ಇಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ದಾಳಿ ನಡೆಸಲಾಗಿದೆ. ಪುಲ್ವಾಮಾದ ಖಾರ್ಪೋರಾ ರತ್ನಿಪೋರಾದಲ್ಲಿ ಉಗ್ರರು ಇಬ್ಬರು ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದಾರೆ. ಉಗ್ರರ ದಾಳಿಯಿಂದಾಗಿ ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಗ್ರರ ದಾಳಿಯಿಂದ ಗಾಯಗೊಂಡಿರುವ ಹೊರ ರಾಜ್ಯದ ಕಾರ್ಮಿಕರನ್ನು ಡಿ ಹೆಚ್ ಪುಲ್ವಾಮಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಗಾಯಗೊಂಡ ಕಾರ್ಮಿಕರನ್ನು ಶಂಶಾದ್ S/O ಇಸ್ಲಾಂ ಶೇಖ್ ಮತ್ತು ಫೈಜಾನ್ ಖಾಸ್ರಿ S/O ಫಯಾಜ್ ಖಾದ್ರಿ ಎಂದು ಗುರುತಿಸಲಾಗಿದೆ. ಇವರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಬೆನ್ನಟ್ಟಿ ಹೋಗಿ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಫೈರಿಂಗ್​.. ಬುದ್ಧಿ ಹೇಳಿದ್ದೇ ತಪ್ಪಾಯ್ತಾ?

ABOUT THE AUTHOR

...view details