ಕರ್ನಾಟಕ

karnataka

ETV Bharat / bharat

Jammu Encounter: ಮೂವರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ - ಕ್ರಾಲ್ಪುರ ಪ್ರದೇಶದಲ್ಲಿ ಗುಂಡಿನ ದಾಳಿ

ಮಧ್ಯ ಕಾಶ್ಮೀರದ ಬದ್ಗಾಂ ಜಿಲ್ಲೆಯ ಕ್ರಾಲ್ಪುರ ಪ್ರದೇಶದಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Update Chadoora Kralpura encounter, one militant killed
Jammu Encounter: ಓವ್ರ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

By

Published : Jan 7, 2022, 9:06 AM IST

Updated : Jan 7, 2022, 9:57 AM IST

ಶ್ರೀನಗರ(ಜಮ್ಮು ಕಾಶ್ಮೀರ): ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಘರ್ಷಣೆ ನಡೆದಿದ್ದು, ಮಧ್ಯ ಕಾಶ್ಮೀರದ ಬದ್ಗಾಂ ಜಿಲ್ಲೆಯ ಕ್ರಾಲ್ಪುರ ಪ್ರದೇಶದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಝೋಲಾ ಸಮೀಪದ ಕ್ರಾಲ್ಪುರ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಸಿಕ್ಕಿದ್ದ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸ್​​ ಮತ್ತು ಸೇನೆ ಪಾಲ್ಗೊಂಡಿತ್ತು.

ಭದ್ರತಾ ಪಡೆಗಳ ಕಾರ್ಯಾಚರಣೆ

ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಭದ್ರತಾ ಪಡೆಗಳು ಉಗ್ರರ ಬಳಿಗೆ ಬರುತ್ತಿದ್ದಂತೆ, ಉಗ್ರರು ಭದ್ರತಾ ಪಡೆಗಳ ಮೇಲೆ ಮನ ಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಈ ವೇಳೆ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿ, ಮೂವರು ಉಗ್ರರನ್ನು ಹೊಡೆದುರುಳಿಸಿವೆ.

ಈ ಕುರಿತು ಕಾಶ್ಮೀರ ಪೊಲೀಸ್ ವಲಯವು ಈ ಕುರಿತು ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಪ್ರಿಯಕರನನ್ನು ಭೇಟಿಯಾಗಲು ವಾಘಾ ಗಡಿ ದಾಟುತ್ತಿದ್ದ ವಿವಾಹಿತ ಮಹಿಳೆ ಬಂಧನ

Last Updated : Jan 7, 2022, 9:57 AM IST

ABOUT THE AUTHOR

...view details