ಕರ್ನಾಟಕ

karnataka

ETV Bharat / bharat

ಕಾಶಿ - ತಮಿಳು ಸಂಗಮಂ : ಸನಾತನ ಧರ್ಮದ ಟೀಕೆಗೆ ಪ್ರತ್ಯುತ್ತರ ನೀಡಲು ಸಿದ್ಧತೆ - ಕಾಶಿ ತಮಿಳು ಸಂಗಮಂ

Kashi-Tamil Sangamam: ಉತ್ತರಪ್ರದೇಶದ ವಾರಣಾಸಿಯಲ್ಲಿ ಡಿಸೆಂಬರ್​ 17ರಿಂದ 30ರ ವರೆಗೆ ಕಾಶಿ -ತಮಿಳು ಸಂಗಮಂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Etv upcoming-kashi-tamil-sangamam-will-train-its-gun-on-sanatan-dharma-critics
ಕಾಶಿ - ತಮಿಳು ಸಂಗಮಂ : ಸನಾತನ ಧರ್ಮದ ಟೀಕೆಗೆ ಪ್ರತ್ಯುತ್ತರ ನೀಡಲು ಸಿದ್ಧತೆ

By ETV Bharat Karnataka Team

Published : Dec 10, 2023, 9:03 PM IST

ವಾರಣಾಸಿ (ಉತ್ತರಪ್ರದೇಶ): ಎರಡನೇ ಆವೃತ್ತಿಯ ಕಾಶಿ -ತಮಿಳು ಸಂಗಮಂ ಕಾರ್ಯಕ್ರಮದ ಮೂಲಕ ಸನಾತನ ಧರ್ಮ ವಿಮರ್ಶಕರಿಗೆ ತರಬೇತಿ ಮತ್ತು ಟೀಕಾಕಾರರಿಗೆ ಪ್ರತ್ಯುತ್ತರ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಇದೇ ಡಿಸೆಂಬರ್​ 17ರಿಂದ 30ರ ವರೆಗೆ ಕಾಶಿ -ತಮಿಳು ಸಂಗಮಂ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಮೊದಲಾಗಿ ಕಳೆದ ವರ್ಷ ಕಾಶಿ- ತಮಿಳು ಸಂಗಮಂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಕಾಶಿ - ತಮಿಳು ಸಂಗಮಂ ಸಾಂಸ್ಕೃತಿಕ ಉತ್ಸವವು ತೀರ್ಥ ಕ್ಷೇತ್ರ ಕಾಶಿ ಮತ್ತು ತಮಿಳುನಾಡಿನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಏಕ್​ ಭಾರತ್​ ಶ್ರೇಷ್ಠ್ ಭಾರತ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ.

ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ಹಲವು ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಟೀಕಾಕಾರಿಗೆ ಸೂಕ್ತ ಉತ್ತರ ನೀಡುವ ಕುರಿತು ಕಾರ್ಯಕ್ರಮದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಕಾಶಿ - ತಮಿಳು ಸಂಗಮಂ ಕಾರ್ಯಕ್ರಮದ ಮೂಲಕ ಸನಾತನ ಧರ್ಮದ ವಿಶಾಲತೆಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಲಾಗುತ್ತದೆ. ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಉತ್ತರ ಮತ್ತು ದಕ್ಷಿಣ ವಿಭಜನೆಯ ಮನಸ್ಥಿತಿ ಮುನ್ನಲೆಗೆ ಬಂದಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಶಿ - ತಮಿಳು ಸಂಗಮವು ರಾಜಕೀಯವಾಗಿಯೂ ಮಹತ್ವವನ್ನು ಪಡೆದಿದೆ. ಈ ಮೂಲಕ ಬಿಜೆಪಿಯು ಉತ್ತರ -ದಕ್ಷಿಣ ಭಾರತದ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಸಾಧಿಸಲು ಹೊರಟಿದೆ. ಇನ್ನು ಕಾಶಿಯು ತಮಿಳು ಮತ್ತು ತಮಿಳು ಭಾಷೆಯೊಂದಿಗೆ ಬಹಳ ಹಿಂದಿನಿಂದಲೂ ಅವಿನಾಭಾವ ಸಂಬಂಧವನ್ನು ಹೊಂದಿದೆ. ತಮಿಳರು ಕಾಶಿಗೆ ಬರುವುದು, ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡುವುದು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯ ಎಂದು ಪರಿಗಣಿಸುತ್ತಾರೆ.

ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ತಮಿಳುನಾಡು ಸಿಎಂ ಉದಯನಿಧಿ ಸ್ಟಾಲಿನ್​ ಅವರ ಮಗ ಉದಯನಿಧಿ ಸ್ಟಾಲಿನ್​ ಸನಾತನ ಧರ್ಮದ ನಿರ್ಮೂಲನೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಬಾರದು, ನಿರ್ಮೂಲನೆ ಮಾಡಬೇಕು. ಡೆಂಗ್ಯೂ, ಮಲೇರಿಯಾ ಮುಂತಾದವುಗಳನ್ನು ವಿರೋಧಿಸಬಾರದು, ನಿರ್ಮೂಲನೆ ಮಾಡಬೇಕು ಎಂದು ಸನಾತನಧರ್ಮವನ್ನು ಹೋಲಿಕೆ ಮಾಡಿ ಎಂದು ಹೇಳಿಕೆ ನೀಡಿದ್ದರು. ಇವರ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ತಮಿಳುನಾಡಿನ ಕುಂಭಕೋಣಂ ನಿವಾಸಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟಿ ಕೆ. ವೆಂಕಟರಾಮನ್ ಘನಪಾಠಿ ಮಾತನಾಡಿ, ಕಾಶಿ ಮತ್ತು ತಮಿಳು ಸಂಸ್ಕೃತಿ ಒಂದೇ ಆಗಿದೆ. ಅಲ್ಲಿನ ಜನರಿಗೆ ಕಾಶಿಯ ಮೇಲೆ ಅಪಾರ ನಂಬಿಕೆ. ತಮಿಳುನಾಡಿನಿಂದ ಜನರು ಬಂದಾಗಲೆಲ್ಲಾ ಗಂಗಾ ಸ್ನಾನ ಮಾಡಿ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು 51 ಶಕ್ತಿ ಪೀಠಗಳಲ್ಲಿ ಒಂದಾದ ವಿಶಾಲಾಕ್ಷಿ ದೇವಿ ದೇಗುಲಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

ಈ ದೇಗುಲದ ಪ್ರಾಮುಖ್ಯತೆಯು ಕಾಂಚೀಪುರಂನ ಕಾಮಾಕ್ಷಿ ಅಮ್ಮನ್ ದೇವಸ್ಥಾನವು ಮಧುರೈನ ಮೀನಾಕ್ಷಿ ದೇವಸ್ಥಾನಕ್ಕೆ ಹೋಲುತ್ತದೆ. ತಮಿಳುನಾಡಿನ ಪ್ರತಿಯೊಂದು ಹಳ್ಳಿಯಲ್ಲಿ ಕಾಶಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕಾವೇರಿಯಲ್ಲಿ ಗಂಗೆಯ ಸಂಗಮವಾಗುತ್ತದೆ. ಕಾಶಿಯಿಂದಲೂ ಜನರು ತಮಿಳುನಾಡಿಗೆ ಪೂಜೆ ಸಲ್ಲಿಸಲು ಹೋಗುತ್ತಾರೆ. ಎರಡೂ ಸ್ಥಳಗಳ ಸಂಸ್ಕೃತಿ ಪರಸ್ಪರ ಸಂಬಂಧ ಹೊಂದಿದೆ. ಕಾಶಿ-ತಮಿಳು ಸಮಾಗಮ ಕಾರ್ಯಕ್ರಮವು ಜನರಲ್ಲಿ ಜಾಗೃತಿ ಮೂಡಿಸಿದೆ ಎಂದು ಹೇಳಿದರು.

ಹಿರಿಯ ರಾಜಕೀಯ ವಿಶ್ಲೇಷಕ ರತನ್ಮಣಿ ಲಾಲ್ ಪ್ರತಿಕ್ರಿಯಿಸಿ, ಸನಾತನ ಧರ್ಮದ ವಿರುದ್ಧ ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರೆ, ಅದು ಖಂಡಿತವಾಗಿಯೂ ಸುದ್ದಿಯಾಗುತ್ತದೆ. ಈ ವಿಷಯವನ್ನು ಬಿಜೆಪಿ ದೊಡ್ಡ ಸುದ್ದಿಯಾಗಲು ಬಯಸುತ್ತದೆ. ಏಕೆಂದರೆ ಭವಿಷ್ಯದಲ್ಲಿ ಇದು ಅವರ ಪ್ರಚಾರಕ್ಕೆ ಸಹಾಯ ಮಾಡುತ್ತದೆ. ಇಂತಹ ಕಾರ್ಯಕ್ರಮಗಳು ಸನಾತನ ಧರ್ಮದ ಮಹತ್ವ ಮತ್ತು ಪ್ರಭಾವವನ್ನು ತೋರಿಸಲು ಹಾಗೂ ತಮಿಳುನಾಡಿನೊಂದಿಗೆ ಸಂಪರ್ಕದಲ್ಲಿರಲು ಒಂದು ಮಾರ್ಗವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಐಟಿ ಮದ್ರಾಸ್‌ನ ಹಿರಿಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ವಾರಣಾಸಿಯ ನಮೋ ಘಾಟ್‌ನಲ್ಲಿ ತಮಿಳುನಾಡು ಮತ್ತು ಕಾಶಿಯ ಸಂಸ್ಕೃತಿಗಳನ್ನು ಬೆರೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಾಹಿತ್ಯ, ಪ್ರಾಚೀನ ಗ್ರಂಥಗಳು, ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಸಂಗೀತ, ನೃತ್ಯ, ನಾಟಕ, ಯೋಗ, ಆಯುರ್ವೇದ, ಕೈಮಗ್ಗ ಮತ್ತು ಕರಕುಶಲ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಚರ್ಚೆಗಳು ಮತ್ತು ಉಪನ್ಯಾಸಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಒಡಿಶಾ ಐಟಿ ದಾಳಿ ಪ್ರಕರಣ : ರಾಹುಲ್​ ಗಾಂಧಿ ಮೌನವಹಿಸಿರುವುದೇಕೆ? ಸಚಿವ ಕಿಶನ್​ ರೆಡ್ಡಿ ಪ್ರಶ್ನೆ

ABOUT THE AUTHOR

...view details