ಮಥುರಾ(ಉತ್ತರಪ್ರದೇಶ): ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ವಿರೋಧ ವ್ಯಕ್ತಪಡಿಸಿದಕ್ಕಾಗಿ ಚಲಿಸುತ್ತಿದ್ದ ಟ್ರಕ್‌ನಿಂದ ಯುವತಿಯನ್ನು ಚಾಲಕನೊಬ್ಬ ಎಸೆದಿರುವ ಘಟನೆ ಇಲ್ಲಿನ ಛತ್ತರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ನಡೆದಿದೆ.
Uttar Pradesh crime:ಕೋಸಿಯಿಂದ ಮಥುರಾ ಕಡೆಗೆ ಟ್ರಕ್ ಅತಿವೇಗದಲ್ಲಿ ಹೋಗುತ್ತಿತ್ತು. ಈ ವೇಳೆ ಯುವತಿ ಟ್ರಕ್‌ನ ಕಿಟಕಿಯಿಂದ ಅರ್ಧಕ್ಕೆ ನೇತಾಡುತ್ತಿರುವುದನ್ನು ಕೆಲವರು ನೋಡಿ ಪ್ರಾಣ ಉಳಿಸುವುದಕ್ಕೆ ವಾಹನವನ್ನು ಹಿಂಬಾಲಿಸಿದ್ದಾರೆ. ಚೇತಕ್ ಅಕಾಡೆಮಿ ಬಳಿ ಟ್ರಕ್ ತಲುಪಿದ ತಕ್ಷಣ ಯುವತಿ ಜಿಗಿದಿದ್ದಾಳೆ. ಇದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿ ಶ್ರೀಶ್ ಚಂದ್ರ, ಚೇತಕ್ ಅಕಾಡೆಮಿ ಬಳಿ ಯುವತಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯುವತಿಯನ್ನು ಕೆಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ತಾನು ಆಗ್ರಾ ನಿವಾಸಿ ಎಂದು ಯುವತಿ ಹೇಳಿದ್ದಾಳೆ. ಮಾಹಿತಿ ಪ್ರಕಾರ, ಯುವತಿ ಟ್ರಕ್ಕರ್‌ನಿಂದ ಲಿಫ್ಟ್ ತೆಗೆದುಕೊಂಡಿದ್ದಳು.