ಶಾಮ್ಲಿ (ಉತ್ತರ ಪ್ರದೇಶ): ಊಟದ ಜೊತೆಗೆ ತಾನು ಬೇಡಿದ ಪಲ್ಯವನ್ನು ಮಾಡಿ ಬಡಿಸಲಿಲ್ಲವೆಂದು ಕುಡುಕನೊಬ್ಬ ತನ್ನ ಪತ್ನಿಯನ್ನು ಕೊಂದು ಹಾಕಿದ ಘಟನೆ ಶಾಮ್ಲಿ ಜಿಲ್ಲೆಯ ಗೋಗ್ವಾನ್ ಜಲಾಲಪುರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದಂಪತಿಯ ಮಗ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಊಟಕ್ಕೆ ಪಲ್ಯ ಮಾಡಲಿಲ್ಲ ಅಂತ ಹೆಂಡತಿಯನ್ನು ಕೊಂದೇ ಬಿಟ್ಟ! - ಮಚ್ಚು ಲಾಂಗ್
ಕುಡುಕ ಆರೋಪಿ ಪತಿಯ ಹೆಸರು ಮುರಲಿ ಎಂದು ತಿಳಿದು ಬಂದಿದ್ದು, ಆತ ತನ್ನ ಪತ್ನಿ ಸುದೇಶಾ ಹಾಗೂ ಮಗ ಅಜಯ್ (20 ವರ್ಷ) ಇವರ ಮೇಲೆ ಕುಡಿದ ನಶೆಯಲ್ಲಿ ಗುದ್ದಲಿಯಿಂದ ಹಲ್ಲೆ ಮಾಡಿದ್ದನು.
ಕುಡುಕ ಆರೋಪಿ ಪತಿಯ ಹೆಸರು ಮುರಳಿ ಎಂದು ತಿಳಿದು ಬಂದಿದ್ದು, ಆತ ತನ್ನ ಪತ್ನಿ ಸುದೇಶಾ ಹಾಗೂ ಮಗ ಅಜಯ್ (20 ವರ್ಷ) ಇವರ ಮೇಲೆ ಕುಡಿದ ನಶೆಯಲ್ಲಿ ಗುದ್ದಲಿಯಿಂದ ಹಲ್ಲೆ ಮಾಡಿದ್ದನು. ಘಟನೆಯ ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪತ್ನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಇನ್ನು ಮಗ ಅಜಯ್ ಸ್ಥಿತಿ ಸ್ಥಿರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಸದ್ಯ ಆರೋಪಿ ಮುರಲಿ ಪರಾರಿಯಾಗಿದ್ದು, ಈತನ ಪತ್ತೆಗಾಗಿ ಪೊಲೀಸ್ ತಂಡಗಳನ್ನು ರಚಿಸಿ ಶೋಧ ನಡೆಸಲಾಗುತ್ತಿದೆ ಎಂದು ಸರ್ಕಲ್ ಆಫೀಸರ್ ಅಮಿತ್ ಸಕ್ಸೇನಾ ಹೇಳಿದ್ದಾರೆ.