ಕರ್ನಾಟಕ

karnataka

ETV Bharat / bharat

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ತಾಯಿ-ಮಗಳ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ - ತಾಯಿ-ಮಗಳ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದ ಮಹಿಳೆ ಹಾಗೂ ಆಕೆಯ ಅಪ್ರಾಪ್ತೆ ಮಗಳ ಮೇಲೆ ನಾಲ್ವರು ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕನೌಜ್​ನಲ್ಲಿ ನಡೆದಿದೆ..

Woman and minor daughter gang-rape
Woman and minor daughter gang-rape

By

Published : Apr 20, 2022, 5:29 PM IST

ಕನೌಜ್​(ಉತ್ತರಪ್ರದೇಶ) :ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ತಾಯಿ ಹಾಗೂ ಆಕೆಯ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸದರ್ ಕೊತ್ವಾಲಿ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತೆ ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆ ದುಷ್ಕೃತ್ಯವೆಸಗಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಅಮಿತ್​, ರಾಮ್ ಸಿಂಗ್​, ದಿಲೀಪ್ ಮತ್ತು ಪಾವನೇಶ್​ ವಿರುದ್ಧ ದೂರು ದಾಖಲಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡ ಮಹಿಳೆ, 2020ರಲ್ಲಿ ಅಮಿತ್ ಜೊತೆ ಎರಡನೇ ಮದುವೆ ಮಾಡಿಕೊಳ್ಳಲು ಮಾತುಕತೆ ನಡೆಯುತ್ತದೆ. ಹೀಗಾಗಿ, ಇಬ್ಬರು ಪರಸ್ಪರ ಭೇಟಿಯಾಗಿದ್ದರು. ಇದಾದ ಬಳಿಕ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಯುವತಿ ಅಮಿತ್ ಜೊತೆ ಉಳಿದುಕೊಂಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದೆ.

ಇದನ್ನೂ ಓದಿ:ಮದುವೆ ಮಾಡಿಕೊಳ್ಳುವಂತೆ ಕಾನ್​ಸ್ಟೇಬಲ್ ಕಿರುಕುಳ; ಆತ್ಮಹತ್ಯೆಗೆ ಶರಣಾದ ಯುವತಿ

ಇದಾದ ಕೆಲ ದಿನಗಳ ನಂತರ, ಯುವಕ ತನ್ನೊಂದಿಗೆ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನ ನೋಯ್ಡಾಕ್ಕೆ ಕರೆತಂದಿದ್ದಾನೆ. ಇಲ್ಲಿ ಅಮಿತ್​, ಆತನ ತಂದೆ ರಾಮ್ ಸಿಂಗ್ ಮತ್ತು ಸ್ನೇಹಿತರಾದ ದಿಲೀಪ್ ಮತ್ತು ಪಾವನೇಶ್​ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆ ಅನೇಕ ಸಲ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತರನ್ನ ಬೆದರಿಸಿ, ಬ್ಲಾಕ್​ಮೇಲ್ ಮಾಡಲಾಗಿದ್ದು, ಅದರ ವಿಡಿಯೋ ಸಹ ಸೆರೆ ಹಿಡಿದಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಮಾತನಾಡಿದ್ದು, ಸಂತ್ರಸ್ತೆ ಜನವರಿಯಿಂದ ಮಾರ್ಚ್​ವರೆಗೆ ನೋಯ್ಡಾದಲ್ಲಿ ವಾಸವಾಗಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪಿಗಳು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾರೆ. 15 ವರ್ಷದ ಮಗಳಿಗೂ ಚಿತ್ರಹಿಂಸೆ ನೀಡಿದ್ದಾಗಿ ತಿಳಿಸಿದ್ದಾರೆ.

ABOUT THE AUTHOR

...view details