ಝಾನ್ಸಿ :ತನ್ನ ಮದುವೆಯ ಆಮಂತ್ರಣ ಪತ್ರಗಳನ್ನು ವಿತರಿಸಲು ಹೋದ ಯುವತಿಯನ್ನು ಮೂವರು ಅಪಹರಿಸಿ ಸಾಮೂಹಿ ಅತ್ಯಾಚಾರವೆಸಗಿರುವ ಘಟನೆ ನಗರದಲ್ಲಿ ನಡೆದಿದೆ. ಸುಮಾರು 20 ದಿನಗಳ ಬಳಿಕ ಅಜ್ಞಾತ ಸ್ಥಳದಲ್ಲಿದ್ದ ಯುವತಿ ತನ್ನ ಪೋಷಕರ ಮಡಿಲು ಸೇರಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.
18 ವರ್ಷದ ಯುವತಿಯ ಮದುವೆ ಏಪ್ರಿಲ್ 21ರಂದು ನಡೆಸಲು ಕುಟುಂಬಸ್ಥರು ಇಚ್ಛಿಸಿದ್ದರು. ಅದರಂತೆ ಯುವತಿ ತನ್ನ ಮದುವೆಯ ಕಾರ್ಡ್‌ಗಳನ್ನು ಹಂಚಲು ಏಪ್ರಿಲ್ 18ರಂದು ತನ್ನ ಸ್ನೇಹಿತರ ಮನೆಗೆ ತೆರಳಿದ್ದಾಳೆ. ದಾರಿ ಮಧ್ಯೆ ಗ್ರಾಮದ ಮೂವರು ಯುವಕರು ಆಕೆಯನ್ನು ಅಪಹರಿಸಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಓದಿ:ಪತ್ನಿಯ ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರ: ಪೊಕ್ಸೊ ಕಾಯ್ದೆಯಡಿ ಆರೋಪಿ ಬಂಧನ
ಕೆಲವು ದಿನಗಳ ಕಾಲ ಬೇರೆ ಬೇರೆ ಸ್ಥಳಗಳಲ್ಲಿ ತನ್ನನ್ನು ಇಟ್ಟು ಅತ್ಯಾಚಾರ ನಡೆಸಿದ್ದಾರೆ. ಕೆಲವು ದಿನಗಳ ಕಾಲ ಝಾನ್ಸಿಯಲ್ಲಿ ರಾಜಕೀಯ ನಾಯಕನೊಬ್ಬನಿಗೆ ಒಪ್ಪಿಸಿದ್ದಾರೆ. ನನ್ನ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬರೊಂದಿಗೆ ಇರಲು ಮಧ್ಯಪ್ರದೇಶದ ದಾಟಿಯಾ ಗ್ರಾಮಕ್ಕೆ ಕಳುಹಿಸಿದರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ದಾಟಿಯಾದಿಂದ ತನ್ನ ತಂದೆಯನ್ನು ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಂದ ಪೊಲೀಸರ ರಕ್ಷಣೆ ಪಡೆದಿದ್ದಾಳೆ. ಈ ವೇಳೆ ಯುವತಿ, ಅಪಹರಿಸಿ, ಅತ್ಯಾಚಾರ ಎಸಗಿ ಮಾರಾಟ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ಪಡೆಯಲಾಗಿದೆ. ಈ ಕುರಿತು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೆಹ್ರಾಲಿ ಸರ್ಕಲ್ ಆಫೀಸರ್ ಅನುಜ್ ಸಿಂಗ್ ತಿಳಿಸಿದ್ದಾರೆ.