ಪಿಲಿಭಿತ್ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಆಘಾತಕಾರಿ ಮತ್ತು ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ನವ ವಿವಾಹಿತನೋರ್ವ ತನ್ನ ಪತ್ನಿಯನ್ನು ಹನಿಮೂನ್‌ಗೆಂದು ಕರೆದುಕೊಂಡು ಹೋಗಿ ಅಲ್ಲಿ ಆಕೆ ಜೊತೆಗಿನ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಇದೇ ವಿಡಿಯೋ ಮತ್ತು ಫೋಟೋಗಳನ್ನು ಮುಂದಿಟ್ಟುಕೊಂಡು ಪತ್ನಿಯ ಮನೆಯವರೆಗೆ ಹಣಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿನ ಬದೌನ್‌ನ ಬಿಸೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕನೊಂದಿಗೆ ಯುವತಿಯೊಬ್ಬಳು ಇದೇ ಫೆಬ್ರವರಿ 6ರಂದು ಮದುವೆಯಾಗಿದ್ದಳು. ಆದರೆ, ಮದುವೆಯಾದ ನಂತರ ಆರೋಪಿ ಪತಿ ಎರಡು ತಿಂಗಳ ಕಾಲ ಪತ್ನಿಯ ಹತ್ತಿರಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಯವತಿಯ ಮನೆಯವರು ವಿಚಾರಿಸಿದಾಗ ಹನಿಮೂನ್ ಆಚರಿಸಲು 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಂತೆಯೇ, ಯುವತಿಯ ಮನೆಯವರು ಐದು ಲಕ್ಷ ರೂಪಾಯಿ ಹೊಂದಿಸಿ ಕೊಡಲಾಗಿತ್ತು.
ಇದನ್ನೂ ಓದಿ:ಸರ್ಕಾರಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ : ಶಾಲೆಗೆ ತೆರಳಲು ವಿದ್ಯಾರ್ಥಿನಿಯರ ಹಿಂದೇಟು
ಐದು ಲಕ್ಷ ಹಣ ಪಡೆದ ನಂತರ ಮೇ 7ರಂದು ಹನಿಮೂನ್‌ಗೆಂದು ಪತ್ನಿಯನ್ನು ನೈನಿತಾಲ್‌ಗೆ ಕರೆದುಕೊಂಡು ಹೋಗಿದ್ದ. ಆದರೆ, ಅಲ್ಲಿಯೂ ಪತಿ ಹನಿಮೂನ್ ಆಚರಿಸಿಲ್ಲ. ಬದಲಿಗೆ ಕಾಲಹರಣ ಮಾಡುತ್ತಲೇ ಮಹಿಳೆಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಪತ್ನಿ ಉಳಿದ ಐದು ಲಕ್ಷ ರೂಪಾಯಿ ತೆಗೆದುಕೊಂಡು ಬಂದ ನಂತರ ಹನಿಮೂನ್ ಆಚರಿಸುತ್ತೇನೆ. ಹಣ ಸಿಗದಿದ್ದರೆ ಅಶ್ಲೀಲ ವಿಡಿಯೋ, ಫೋಟೋಗಳನ್ನು ಹರಿಬಿಡಬೇಕಾಗುತ್ತದೆ ಎಂಬುವುದಾಗಿ ಆರೋಪಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ವಿವರಿಸಿದ್ದಾಳೆ. ಈ ದೂರಿನ ಮೇರೆಗೆ ಆರೋಪಿ ಪತಿ ವಿರುದ್ಧ ಹಲ್ಲೆ, ನಿಂದನೆ ಹಾಗೂ ವರದಕ್ಷಿಣೆಗೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ನರೇಶ್ ತ್ಯಾಗಿ ಮಾಹಿತಿ ನೀಡಿದ್ದಾರೆ.
ಲಕ್ಷಾಂತರ ಖರ್ಚು ಮಾಡಿ ಮದುವೆ: ಅಲ್ಲದೇ, ಮದುವೆಗೆಂದು ಲಕ್ಷಾಂತರ ರೂಪಾಯಿ ಹಣವನ್ನು ಯುವತಿಯ ಮನೆಯವರು ಖರ್ಚು ಮಾಡಿದ್ದರು. ಮದುವೆಗೆ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಲ್ಲದೆ, 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಹೇಳಿದ್ದಾರೆ.
ಮದುವೆಯಾದ ಬಳಿಕ ಪತ್ನಿಯ ಹತ್ತಿರ ಹೋಗುವ ವಿಷಯವಾಗಿ ಯುವತಿ ಮನೆಯವರು ಮೊದಲೇ ವಿಚಾರಿಸಿದ್ದರು. ಜೊತೆಗೆ ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ, ಚಿಕಿತ್ಸೆ ಕೊಡಿಸುವುದಾಗಿಯೂ ತಿಳಿಸಿದ್ದರು. ಆದರೆ, ಹಣಕ್ಕಾಗಿ ಈ ರೀತಿಯ ಮೋಸ ಮಾಡಿದ್ದಾನೆ. ಈ ವಿಷಯವನ್ನು ಆತನ ಕುಟುಂಬಸ್ಥರಿಗೂ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ನೊಂದು ಯುವತಿ ಮೇ 13ರಂದು ತನ್ನ ತಾಯಿಯ ಮನೆಗೆ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅಮೆರಿಕದ ಒಕ್ಲಹೋಮ್ನಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು: ತನಿಖೆ ಚುರುಕು