ಕರ್ನಾಟಕ

karnataka

ETV Bharat / bharat

ಪಕ್ಕದ ಮನೆಯ ಬಾಲಕಿಗೆ ಚಾಕು ಇರಿದ ಕಿರಾತಕ: ಆರೋಪಿ ಅರೆಸ್ಟ್​ - ಉತ್ತರ ಪ್ರದೇಶ

ಪಕ್ಕದ ಮನೆಯ ಬಾಲಕಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ್ದ ಎನ್ನಲಾಗ್ತಿದೆ.

UP man arrested for molesting a gir
ಬಾಲಕಿಗೆ ಚಾಕು ಇರಿತ

By

Published : Jul 13, 2021, 10:22 AM IST

ಬಲ್ಲಿಯಾ (ಉತ್ತರ ಪ್ರದೇಶ) : ಮನೆಗೆ ನುಗ್ಗಿ ಕಿರುಕುಳ ನೀಡಲು ಯತ್ನಿಸಿದ ವೇಳೆ ತಡೆಯಲು ಮುಂದಾದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.

ಜಿಲ್ಲೆಯ ಬನ್​ಸಿದ್ಃ ರೋಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೋಮವಾರ ನೆರೆಮನೆಯ ವ್ಯಕ್ತಿ ಹಲ್ಲೆಗೊಳಗಾದ ಬಾಲಕಿಯ ಮನೆಗೆ ನುಗ್ಗಿ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದ. ಈ ವೇಳೆ ಬಾಲಕಿ ತಡೆಯಲು ಮುಂದಾಗಿದ್ದಾಳೆ. ಆಗ, ಆರೋಪಿ ಬಾಲಕಿಯ ಮುಖಕ್ಕೆ ಹರಿತವಾದ ಚಾಕುವಿನಿಂದ ಇರಿದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಯಾದವ್ ತಿಳಿಸಿದ್ದಾರೆ.

ಓದಿ : ಮಳೆ ಅವಾಂತರ, ಐವರು ಬಲಿ: ಮಗನನ್ನು ಬಚಾವ್​ ಮಾಡಲು ಹೋದ ತಾಯಿಯೊಂದಿಗೆ ನಾಲ್ವರು ಮಕ್ಕಳು ಸಾವು

ಘಟನೆಯಲ್ಲಿ ಬಾಲಕಿಯ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಆಕೆಯನ್ನು ಮೊದಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ವಾರಣಾಸಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಾಲಕಿಯ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details