ಕರ್ನಾಟಕ

karnataka

ETV Bharat / bharat

ಅಯೋಧ್ಯೆ ಉದ್ಯಾನವನದಲ್ಲಿ ಸೌರಶಕ್ತಿ ವೃಕ್ಷಗಳ ಸ್ಥಾಪನೆ - ಅಯೋಧ್ಯೆ

ಉತ್ತರ ಪ್ರದೇಶ ಸರ್ಕಾರವು ಸೌರ ನೀತಿ-2022 ರ ಅಡಿಯಲ್ಲಿ ಅಯೋಧ್ಯೆಯನ್ನು ಮಾದರಿ ಸೌರ ನಗರವನ್ನಾಗಿ ಅಭಿವೃದ್ಧಿಪಡಿಸುತ್ತಿದೆ.

ಸೌರಶಕ್ತಿ ವೃಕ್ಷ
ಸೌರಶಕ್ತಿ ವೃಕ್ಷ

By ETV Bharat Karnataka Team

Published : Sep 28, 2023, 3:23 PM IST

ಲಕ್ನೋ (ಉತ್ತರಪ್ರದೇಶ): ರಾಮಮಂದಿರ ನಿರ್ಮಾಣದಿಂದ ಉತ್ತರ ಪ್ರದೇಶದ ಅಯೋಧ್ಯೆ ಸದಾ ಸುದ್ದಿಯಲ್ಲಿದೆ. ಇದೀಗ ಅಲ್ಲಿ ಕೈಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಶೇಷತೆ ಸಹ ಗಮನ ಸೆಳೆಯುತ್ತಿದೆ.

ಹೌದು, ಜನವರಿ 2024ಕ್ಕೆ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಮಂದಿರ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿವೆ. ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರವು ಅಯೋಧ್ಯೆ ನಗರವನ್ನು ಅತ್ಯಂತ ಸುಂದರವಾಗಿಸಲು ಹೆಚ್ಚಿನ ಗಮನಹರಿಸಿದೆ. ಇದಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ರೈಲು, ಬಸ್ ನಿಲ್ದಾಣ ಜೊತೆಗೆ ವಿಮಾನ ನಿಲ್ದಾಣದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇವುಗಳ ಜತೆಗೆ ಅಯೋಧ್ಯೆಯಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಸುಧಾರಿಸಲು ಇಂಧನ ಇಲಾಖೆ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.

ಇದರ ನಡುವೆಯೇ ಉತ್ತರಪ್ರದೇಶ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಯುಪಿಎನ್‌ಇಡಿಎ)ಯೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಉತ್ತರ ಪ್ರದೇಶ ಸರ್ಕಾರವು ಸೌರ ನೀತಿ-2022 ರ ಅಡಿಯಲ್ಲಿ ಅಯೋಧ್ಯೆಯನ್ನು ಮಾದರಿ ಸೌರ ನಗರವನ್ನಾಗಿ ಅಭಿವೃದ್ಧಿಪಡಿಸುತ್ತಿದೆ. ಅದಕ್ಕಾಗಿ ಉತ್ತರ ಪ್ರದೇಶ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆ ನಗರದ ಪ್ರಮುಖ ರಸ್ತೆಗಳು ಮತ್ತು ಮಾರ್ಗಗಳನ್ನು ಸೌರಶಕ್ತಿ ದೀಪಗಳ ಮೂಲಕ ಝಗಮಗಿಸುವಂತೆ ಮಾಡಲಾಗುತ್ತಿದೆ. ಅಯೋಧ್ಯೆ ನಗರವನ್ನು ಸೌರಶಕ್ತಿಯ ವಿದ್ಯುತ್​ ದೀಪಗಳಿಂದ ಬೆಳಗಿಸುವ ಮತ್ತು ಸೌರಶಕ್ತಿಯನ್ನು ಉತ್ತೇಜಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಇದಕ್ಕಾಗಿ ಅಯೋಧ್ಯೆಯ ಪ್ರಮುಖ ಉದ್ಯಾನವನಗಳಲ್ಲಿ ಸೌರ ಮರಗಳನ್ನು ನೆಡಲಾಗುತ್ತಿದೆ. ಈ ಮರಗಳ ಸಹಾಯದಿಂದ ಅಲ್ಲಿನ ದೀಪಗಳು ಬೆಳಗಲಿವೆ.

ಪ್ರಸ್ತುತ, ಅಯೋಧ್ಯೆಯ ಪ್ರಮುಖ ಉದ್ಯಾನವನಗಳಲ್ಲಿ 2.5 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಮರಗಳನ್ನು ಸ್ಥಾಪಿಸಲು ಯುಪಿಎನ್‌ಇಡಿಎ ಮತ್ತು ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (ಎನ್​ಹೆಚ್​ಪಿಸಿ) ನೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಎನ್​ಹೆಚ್​ಪಿಸಿ ಸಹಕಾರದೊಂದಿಗೆ ಈ ಸ್ಥಾವರವನ್ನು ಸ್ಥಾಪಿಸಲಾಗುವುದು. ಯುಪಿಎನ್‌ಇಡಿಎ ಸಂಸ್ಥೆ ರಾಜ್ಯದ ಇತರ ಅನೇಕ ನಗರಗಳಲ್ಲಿ ಸೌರ ಮರಗಳನ್ನು ನೆಡುವ ಕೆಲಸ ಮಾಡುತ್ತಿದೆ.

ಸಂಸ್ಥೆಯ ನಿರ್ದೇಶಕ ಅನುಪಮ್ ಶುಕ್ಲಾ, ಹಿರಿಯ ಯೋಜನಾ ಅಧಿಕಾರಿ ಆರ್‌ಪಿ ಸಿಂಗ್, ಅಜಯ್ ಕುಮಾರ್ ಮತ್ತು ಎನ್‌ಎಚ್‌ಪಿಸಿ ಜನರಲ್ ಮ್ಯಾನೇಜರ್ ಆರ್‌ಪಿ ಸಿಂಗ್ ಸೌರಶಕ್ತಿ ಯೋಜನಾ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ರಾಮಭಕ್ತರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಅಯೋಧ್ಯೆಯಲ್ಲಿ ದೇಶೀಯ ವಿಮಾನಗಳ ಹಾರಾಟ ಶುರು

ABOUT THE AUTHOR

...view details