ಕರ್ನಾಟಕ

karnataka

ETV Bharat / bharat

ಕುಡಿದ ಮತ್ತಿನಲ್ಲಿ ಕಾಮುಕನ ಅಟ್ಟಹಾಸ.. ಹಸುಳೆ ಮೇಲೆ ಅತ್ಯಾಚಾರವೆಸಗಿದ ವೃದ್ಧ.. - ಹಸುಳೆ ಮೇಲೆ ಅತ್ಯಾಚಾರವೆಸಗಿದ ವೃದ್ಧ

60 ವರ್ಷದ ಪಾನಮತ್ತ ವ್ಯಕ್ತಿಯೋರ್ವ ಒಂದೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ..

Drunk elderly man rapes toddler girl in Bareilly
Drunk elderly man rapes toddler girl in Bareilly

By

Published : Mar 26, 2022, 4:45 PM IST

ಬರೇಲಿ(ಉತ್ತರ ಪ್ರದೇಶ) :ಕುಡಿದ ಮತ್ತಿನಲ್ಲಿ ಕಾಮುಕನೋರ್ವ ನೆರೆ ಮನೆಯ ಒಂದೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಹಸುಳೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಕೆಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಉತ್ತರಪ್ರದೇಶದ ಬರೇಲಿಯಲ್ಲಿ ಈ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಾಲಕಿ ಆಟವಾಡಲು ಹೊರಗಡೆ ತೆರಳಿದ್ದು, ಬಹಳ ಸಮಯವಾದರೂ ಮನೆಗೆ ವಾಪಸ್​ ಆಗಿರಲಿಲ್ಲ. ಹುಡುಕಾಟ ನಡೆಸಿರುವ ಪೋಷಕರು ಕೊನೆಯದಾಗಿ ವೃದ್ಧನ ಮನೆಯ ಬಾಗಿಲು ತಟ್ಟಿದ್ದಾರೆ. ಕೆಲ ಸಮಯದ ನಂತರ ಬಾಗಿಲು ತೆಗೆದಿರುವ ಆತ, ಅಲ್ಲಿಂದ ಓಡಿ ಹೋಗಿದ್ದಾನೆ. ಪೋಷಕರು ಒಳಗೆ ಹೋಗಿ ನೋಡಿದಾಗ ಮಂಚದ ಮೇಲೆ ಬಾಲಕಿ ಪತ್ತೆಯಾಗಿದ್ದು, ರಕ್ತಸ್ರಾವವಾಗುತ್ತಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಹೆಂಡ್ತಿ,ಅತ್ತೆ,ಮಾವನ ಮೇಲೆ ಮಾರಣಾಂತಿಕ ಹಲ್ಲೆ.. ಗಂಡನ ಮೃಗೀಯ ವರ್ತನೆ ಸಿಸಿಟಿವಿಯಲ್ಲಿ ಸೆರೆ

ತಕ್ಷಣವೇ ಬಾಲಕಿಯನ್ನ ಆಸ್ಪತ್ರೆಗೆ ದಾಖಲು ಮಾಡಿರುವ ಪೊಲೀಸರು, ವೃದ್ಧನನ್ನ ತಡರಾತ್ರಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬರೇಲಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ರೋಹಿತ್ ಸಿಂಗ್ ಸಜ್ಜಾನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಾಲಕಿ ಸ್ಥಿತಿ ಚಿಂತಾಜನಕವಾಗಿದೆ. 60 ವರ್ಷದ ಪಾನಮತ್ತ ವ್ಯಕ್ತಿ ಈ ದುಷ್ಕೃತ್ಯವೆಸಗಿದ್ದಾನೆಂದು ತಿಳಿಸಿದ್ದಾರೆ.

ABOUT THE AUTHOR

...view details