ಲಖನೌ (ಉತ್ತರ ಪ್ರದೇಶ):ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿರುವ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಸಾಗಿಸುತ್ತಿದ್ದ ಸ್ಯಾಟಲೈಟ್ ಫೋನ್ಅನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ವಶಪಡಿಸಿಕೊಂಡಿದೆ.
ಉನ್ನಾವೋ ಜಿಲ್ಲೆಯ ಖೇಡಾ ದೌಡಿಯಾ ನಿವಾಸಿ ಕುಲದೀಪ್ ವೃಂದಾವನ ಎಂಬಾತ ಲಖನೌದಿಂದ ಮುಂಬೈಗೆ ಹೋಗಲೆಂದು ಏರ್ ಇಂಡಿಯಾ ವಿಮಾನ (AI-626) ಹತ್ತುತ್ತಿದ್ದರು. ಈ ವೇಳೆ, ಸಿಐಎಸ್‌ಎಫ್ ಸಿಬ್ಬಂದಿ ತಪಾಸಣೆ ನಡೆಸಿದ್ದು, ಆಗ ಬ್ಯಾಗ್ನಲ್ಲಿ ಸ್ಯಾಟಲೈಟ್ ಫೋನ್ ಆಗಿದೆ. ಹೀಗಾಗಿ ಈ ಬಗ್ಗೆ ಪೊಲೀಸರು ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಆರೋಪಿ ಕುಲದೀಪ್ ಮುಂಬೈ ಮೂಲಕ ಅಬುಧಾಬಿಗೆ ಪ್ರಯಾಣಿಸಬೇಕಿತ್ತು. ಈತ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಮತ್ತು ಮುಂಬೈ ಸಿಟಿ ಫುಟ್ಬಾಲ್ ಕ್ಲಬ್‌ನ ಅಧ್ಯಕ್ಷ ಖಾಲ್ದೂನ್ - ಅಲ್-ಮುಬಾರಕ್ ಅವರ ಅಬುಧಾಬಿ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸ್ಯಾಟಲೈಟ್ ಫೋನ್ ಮುಬಾರಕ್ಗೆ ಸೇರಿದ್ದು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಜೂನ್ 20ರಂದು ಆಕಸ್ಮಿಕವಾಗಿ ತನ್ನ ಮುಬಾರಕ್ ಫೋನ್ ಭಾರತಕ್ಕೆ ತಂದಿದ್ದರು. ಈ ಫೋನ್ ಭಾರತಕ್ಕೆ ನಿಜವಾಗಿಯೂ ಆಕಸ್ಮಿಕವಾಗಿಯೇ ತರಲಾಗಿದೆಯೋ ಅಥವಾ ಉದ್ದೇಶಪೂರ್ವಕವಾಗಿ ತರಲಾಗಿದೆಯೋ ಎಂಬ ಬಗ್ಗೆಯೂ ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಜೊತೆಗೆ ಕಳೆದ ಒಂದು ತಿಂಗಳಲ್ಲಿ ಭಾರತದಲ್ಲಿ ತಂಗಿದ್ದಾಗ ಉಪಗ್ರಹ ಫೋನ್ ಬಳಸಿದ್ದಾರೆಯೇ ಎಂಬ ಕುರಿತೂ ತನಿಖೆ ಮಾಡಲಾಗುತ್ತಿದೆ ಎಂದು ಡಿಸಿಪಿ ಅಪರ್ಣಾ ರಜತ್ ಕೌಶಿಕ್ ತಿಳಿಸಿದ್ದಾರೆ.
ಇದನ್ನೂ ಓದಿ:ಪನ್ನಾದಲ್ಲಿ ಕೋಟ್ಯಂತರ ಮೌಲ್ಯದ ವಜ್ರಗಳು ಪತ್ತೆ.. ಹರಾಜು ಹಾಕಲು ನಿರ್ಧಾರ