ವಾರಣಾಸಿ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಮಾರ್ಚ್ 7ರಂದು ನಡೆಯಲಿದ್ದು, ಆ ಕ್ಷೇತ್ರಗಳಲ್ಲಿ ಇದೀಗ ಬಿರುಸಿನ ಮತಬೇಟೆ ಕಾರ್ಯ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು.
ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ಅನೇಕ ದೇಶಗಳು ಸಾಂಕ್ರಾಮಿಕ ರೋಗ, ಗಡಿ ಬಿಕ್ಕಟ್ಟು ಸೇರಿದಂತೆ ಅನಿಶ್ಚಿತತೆಯಿಂದ ಸಮಸ್ಯೆಗೊಳಗಾಗಿವೆ. ಆದರೆ, ಈ ಎಲ್ಲ ಬಿಕ್ಕಟ್ಟು ಎದುರಿಸಲು ಭಾರತ ಸಜ್ಜಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷ ಉಲ್ಲೇಖಿಸಿರುವ ನಮೋ, ಈ ಯುದ್ಧ ಜಾಗತಿಕತೆ ವ್ಯವಸ್ಥೆಯನ್ನು ಅಸ್ಥಿರಗೊಳಿಸಿದೆ. ಯುದ್ಧಪೀಡಿತ ದೇಶದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ನಡೆಯುತ್ತಿದ್ದು, 'ಆಪರೇಷನ್ ಗಂಗಾ' ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ ಎಂದರು.
ಇದನ್ನೂ ಓದಿ:ಉಕ್ರೇನ್ನಲ್ಲಿ ಸಮರ: ಆಶ್ರಯ ತಾಣವಾಗಿರುವ ಬಂಕರ್ ಬಗ್ಗೆ ಮಾಹಿತಿ ನೀಡಿದ ಭಾರತೀಯ ವಿದ್ಯಾರ್ಥಿ