ಕರ್ನಾಟಕ

karnataka

ETV Bharat / bharat

ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನನ್ನ ಗ್ರಾಮದಿಂದ ಓಡಿಸಿದ ಜನರು.. ವಿಡಿಯೋ - ಬಿಜೆಪಿ ಶಾಸಕ ವಿಕ್ರಮ್​ ಸಿಂಗ್​ ಸೈನಿ

ಮತಯಾಚನೆ ಮಾಡಲು ತೆರಳಿರುವ ವೇಳೆ ಬಿಜೆಪಿ ಶಾಸಕನಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದು, ಅಲ್ಲಿಂದ ಓಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

BJP MLA Chased Away By Villagers
BJP MLA Chased Away By Villagers

By

Published : Jan 20, 2022, 4:42 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಟಿಕೆಟ್​ ಖಚಿತಗೊಂಡಿರುವ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆ ಮತಯಾಚನೆಗೆ ಆಗಮಿಸಿದ್ದ ಬಿಜೆಪಿ ಶಾಸಕನೋರ್ವನನ್ನ ಗ್ರಾಮಸ್ಥರು ಓಡಿಸಿರುವ ಘಟನೆ ನಡೆದಿದೆ.

ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನನ್ನ ಗ್ರಾಮದಿಂದ ಓಡಿಸಿದ ಜನರು

ಉತ್ತರ ಪ್ರದೇಶದ ಮುಜಾಫರನಗರದ ಖತೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್​ ಸಿಂಗ್​ ಸೈನಿ ಮತಯಾಚನೆ ಮಾಡಲು ಗ್ರಾಮವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ಶಾಸಕರ ಕಾರು ತಡೆದು ವಾಪಸ್​ ಕಳುಹಿಸಿದ್ದು, ಅವರ ವಿರುದ್ಧ ಘೋಷಣೆ ಸಹ ಕೂಗಿದ್ದಾರೆ. ಬೇರೆ ಯಾವುದೇ ಆಯ್ಕೆಯಿಲ್ಲದೇ ಅವರು ವಾಪಸ್​ ಹೋಗಿದ್ದಾರೆ.

ಘಟನೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​​ ಆಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿವಾದಿತ ಕೃಷಿ ಕಾನೂನುಗಳಿಂದ ಇಲ್ಲಿಂದ ಜನರು ಅಸಮಾಧಾನಗೊಂಡಿದ್ದು, ಅದೇ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಅನೇಕ ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಶಾಸಕ

ಬಿಜೆಪಿ ಶಾಸಕರಾಗಿರುವ ವಿಕ್ರಮ್​ ಸಿಂಗ್​ ಸೈನಿ ಹಿಂದಿನಿಂದಲೂ ಅನೇಕ ರೀತಿಯ ವಿವಾದಿತ ಹೇಳಿಕೆ ನೀಡಿದ್ದು, ಟೀಕೆಗೆ ಗುರಿಯಾಗಿದ್ದಾರೆ. 'ಭಾರತ ಅಸುರಕ್ಷಿತವಾಗಿದೆ ಎಂದು ಭಾವಿಸುವವರಿಗೆ ಬಾಂಬ್ ಹಾಕುವ ಬೆದರಿಕೆ' ನೀಡಿದ್ದರು. ಇದಕ್ಕೂ ಮೊದಲು 'ನಮ್ಮ ದೇಶವನ್ನ ಹಿಂದೂಸ್ತಾನ್​ ಎಂದು ಕರೆಯಲಾಗುತ್ತದೆ. ಇದು ಹಿಂದೂಗಳ ರಾಷ್ಟ್ರ' ಎಂದು ಹೇಳಿದ್ದರು. ಜೊತೆಗೆ 'ಗೋಹತ್ಯೆ ಮಾಡುವವರ ಕೈ-ಕಾಲು ಮುರಿಯುವ ಬೆದರಿಕೆ' ಸಹ ಹಾಕಿದ್ದರು.

ಇದನ್ನೂ ಓದಿರಿ:ಪರಿಕ್ಕರ್​​ ಪುತ್ರನಿಗೆ 'ಬಿಜೆಪಿ' ಟಿಕೆಟ್ ನಿರಾಕರಣೆ.. AAP ಸೇರುವಂತೆ ಕೇಜ್ರಿವಾಲ್​ ಆಫರ್​

403 ಕ್ಷೇತ್ರಗಳ ಉತ್ತರ ಪ್ರದೇಶ ವಿಧಾನಸಭೆ ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಮೊದಲ ಲಿಸ್ಟ್ ರಿಲೀಸ್ ಮಾಡಿದೆ.

ABOUT THE AUTHOR

...view details