ಬಲ್ಲಿಯಾ, ಉತ್ತರ ಪ್ರದೇಶ:ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ನಡೆಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ನಾಮಪತ್ರ ಸಲ್ಲಿಸುವ ಸಲುವಾಗಿಯೇ ಭಾರಿ 'ಕಸರತ್ತು' ನಡೆಸಿದ್ದಾರೆ. ಅದು ಬೇರಾರೂ ಅಲ್ಲ, ಉತ್ತರ ಪ್ರದೇಶ ಸರ್ಕಾರ ಕ್ರೀಡಾ ಸಚಿವರಾದ ಉಪೇಂದ್ರ ತಿವಾರಿ.
ಹೌದು, ಶುಕ್ರವಾರ ಉಪೇಂದ್ರ ತಿವಾರಿ ನಾಮಪತ್ರ ಸಲ್ಲಿಕೆಗಾಗಿ ರಸ್ತೆಯಲ್ಲಿ ಓಡಿ ಬಂದಿದ್ದಾರೆ. ಆ ದಿನದ ನಾಮಿನೇಷನ್ ಫೈಲ್ ಮಾಡಲು ಕೆಲವೇ ನಿಮಿಷಗಳು ಬಾಕಿ ಇರುವಂತೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.