ಲಖನೌ: ಉತ್ತರ ಪ್ರದೇಶದಲ್ಲಿ 2022ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶತಾಯಗತಾಯ ಮತ್ತೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ರಣತಂತ್ರಗಳನ್ನು ರೂಪಿಸುತ್ತಿರುವ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲತೆಯಿಂದ ಪ್ರಚಾರ ಮಾಡುತ್ತಿದ್ದೆ. ಮಾತ್ರವಲ್ಲದೇ, ಅಫ್ಘಾನ್‌ನಲ್ಲಿ ತಾಲಿಬಾನ್‌ಗಳು ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನು ಮುಂದಿನ ಚುನಾವಣೆಯಲ್ಲಿ ಪ್ರಸ್ತಾಪಿಸಿ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ತಾಲಿಬಾನ್ ವಿಷಯವನ್ನು ಹೇಗೆ ಪ್ರಬಲ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ ಎಂಬುದು ಆಶ್ಚರ್ಯವಾಗಬಹುದು. ವಾಸ್ತವವಾಗಿ, ಅಫ್ಘಾನಿಸ್ತಾನದ ಭಯಾನಕ ಚಿತ್ರವನ್ನು ಬಿಂಬಿಸುವ ಮೂಲಕ ಹಿಂದೂ ಮತದಾರರನ್ನು ಒಗ್ಗೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ತಳಮಟ್ಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಹಿಂದುತ್ವ ಸಂಘಟನೆಗಳ ಸಹಾಯವನ್ನೂ ಪಡೆಯುತ್ತಿದೆ.
ಮತ್ತೊಂದೆಡೆ, ಪ್ರಾದೇಶಿಕ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿಗಿಂತ ಹೆಚ್ಚು ಸಕ್ರಿಯವಾಗಿರುವಂತೆ ತೋರುತ್ತಿದ್ದರೂ, ಅವರು ಇನ್ನೂ ತಮ್ಮ ಹಳೆಯ ಜಾತಿ ಸಮೀಕರಣಗಳ ಸೂತ್ರಗಳನ್ನೇ ನಂಬಿಕೊಂಡಿದ್ದಾರೆ. ಸಮಾಜವಾದಿ ಪಕ್ಷ(ಎಸ್ಪಿ)ವು ಯಾದವ್ - ಮುಸ್ಲಿಂ ಮತಗಳ ಲೆಕ್ಕಾಚಾರವನ್ನು ಹಾಕುತ್ತದೆ.