ಕರ್ನಾಟಕ

karnataka

ETV Bharat / bharat

ಶಸ್ತ್ರಾಸ್ತ್ರ ಬಳಕೆ ಮಾಡುವುದನ್ನೇ ತಿಳಿಯದ ಉತ್ತರ ಪ್ರದೇಶದ ಪೊಲೀಸರು:ಡಿಐಜಿಯೇ ಕಕ್ಕಾಬಿಕ್ಕಿ - ಶಸ್ತ್ರಾಸ್ತ್ರ ಬಳಕೆ ಮಾಡುವುದನ್ನೇ ತಿಳಿಯದ

ಶಸ್ತ್ರಾಸ್ತ್ರ ಬಳಕೆಯನ್ನೇ ತಿಳಿಯದ ಸಿಬ್ಬಂದಿಗಳು - ವಾರ್ಷಿಕ ತಪಾಸಣೆ ವೇಳೆ ಸಿಬ್ಬಂದಿಗಳ ಲೋಪ ಬಹಿರಂಗ - ವೈಫಲ್ಯ ಸುಧಾರಿಸಲು ಕ್ರಮ

up-police-who-do-not-know-how-to-use-weapons
ಶಸ್ತ್ರಾಸ್ತ್ರ ಬಳಕೆ ಮಾಡುವುದನ್ನೇ ತಿಳಿಯದ ಉ.ಪ್ರ ಪೊಲೀಸರು; ಡಿಐಜಿಯೇ ಕಕ್ಕಾಬಿಕ್ಕಿ

By

Published : Dec 29, 2022, 5:41 PM IST

Updated : Dec 29, 2022, 6:03 PM IST

ಸಂತ್ಕಬಿರ್​ ನಗರ: ಉತ್ತರ ಪ್ರದೇಶದ ಖಲೀಲಬಾದ್​ ಪೊಲೀಸ್​ ಠಾಣೆಗೆ ದಿಢೀರ್​ ಪರಿಶೀಲನೆಗೆ ಬಂದ ಡಿಐಜಿಗೆ ಆರ್​ಕೆ ಭಾರದ್ವಾಜ್​ ಸಿಬ್ಬಂದಿ ನಡುವಳಿಕೆ ಕಂಡು ಬೆಚ್ಚಿಬಿದ್ದಿದ್ದಾರೆ. ಕಾರಣ ಹುದ್ದೆಗೆ ಸೇರಿ ಹಲವು ವರ್ಷಗಳಾದರೂ ಅವರಿಗೆ ಶಸ್ತ್ರಾಸ್ತ್ರಗಳ ಬಳಕೆ ಮಾಡುವುದು ಹೇಗೆ ಎಂಬುದು ತಿಳಿದೇ ಇಲ್ಲ.

ಠಾಣೆಗೆ ಬಂದು ಅಲ್ಲಿರುವ ಪಿಸ್ತೂಲ್​, ರೈಫಲ್​ ಮತ್ತು ಟಿಯರ್​ ಗನ್​ ಮ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಈ ವೇಳೆ, ಅನೇಕರಿಗೆ ಶಸ್ತ್ರಾಸ್ತ್ರಗಳ ಬಳಕೆ ಹೇಗೆ ಮಾಡಬೇಕು ಎಂಬುದೇ ತಿಳಿಯದೇ ಒದ್ದಾಡಿದ್ದಾರೆ. ಸಬ್​ ಇನ್ಸ್​ಪೆಕ್ಟರ್​ ಒಬ್ಬರು ರೈಫಲ್​ಗೆ ಬುಲೆಟ್​ ಅನ್ನು ಬ್ಯಾರೆಲ್​ ಒಳಗೆ ಹಾಕಿ ನಗೆಪಾಟಲಿಗೆ ಒಳಗಾಗಿದ್ದಾರೆ. ಸಬ್​ ಇನ್ಸ್​ಪೆಕ್ಟರ್​​ ಈ ವರ್ತನೆ ಕಂಡ ಅಧಿಕಾರಿ ಸಿಟ್ಟಿನ ಜೊತೆ ನಕ್ಕು ಬಿಟ್ಟಿದ್ದಾರೆ. ಈ ಎಲ್ಲ ಘಟನೆ ವೇಳೆ ಈಟಿವಿ ಭಾರತ ಪ್ರತಿನಿಧಿ ಕೂಡ ಹಾಜರಿದ್ದರು.

ಇನ್ನು ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಐಜಿ ಆರ್​ಕೆ ಭಾರಧ್ವಾಜ್​, ವಾರ್ಷಿಕ ತಪಾಸಣೆಯನ್ನು ನಾವು ಮಾಡಿದೆವು. ಎರಡು ತಿಂಗಳ ಹಿಂದೆಯೇ ತಪಾಸಣೆಗೆ ಬರುವ ಸಂಬಂಧ ತಿಳಿಸಲಾಗಿತ್ತು. ಈ ವೇಳೆ, ಸಿಬ್ಬಂದಿಗಳ ದೌರ್ಬಲ್ಯಗಳನ್ನು ಪತ್ತೆ ಮಾಡಲಾಗಿದೆ. ಈ ಲೋಪಗಳನ್ನು ಸರಿದೂಗಿಸಲು ಅವರಿಗೆ ಭವಿಷ್ಯದಲ್ಲಿ ಅವಕಾಶ ನೀಡಲಾಗುವುದು. ಅವರಿಗಾಗಿ ಗಮನ ಹರಿಸಿ ಅವರ ವೈಫಲ್ಯ ಸುಧಾರಿಸಿಕೊಳ್ಳಲು ಅವಕಾಶ ನೀಡಲಾಗುವುದು.

ತರಬೇತಿ ಮತ್ತು ಅಭ್ಯಾಸದ ಕೊರತೆ ಹಿನ್ನೆಲೆಯಲ್ಲಿ ನೌಕರರಲ್ಲಿ ವೈಫಲ್ಯತೆಗಳು ಕಂಡಿ ಬಂದಿದೆ. ಇಂತಹ ಲೋಪಗಳನ್ನು ತೆಗೆದುಹಾಕಲಾಗುವುದು. ಮುಂದಿನ ತಪಾಸಣೆ ವೇಳೆ ಇಂತಹ ತಪ್ಪನ್ನು ಕಾಣಲು ಸಾಧ್ಯವಾಗುವುದಿಲ್ಲ ಎಂದರು

ಇದನ್ನೂ ಓದಿ: ಕಿರುಕುಳ ವಿರುದ್ಧ ದೂರು ನೀಡಿದ್ದಕ್ಕೆ ಮತ್ತೆ ಕಿರುಕುಳ.. ಗ್ರಾಪಂನಿಂದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ

Last Updated : Dec 29, 2022, 6:03 PM IST

ABOUT THE AUTHOR

...view details