ವಾರಣಾಸಿ: ವಾಟ್ಸ್ಆ್ಯಪ್ ಮತ್ತು ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾನಹಾನಿ ಮಾಡುವ ವಿಡಿಯೋ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಇತರ ಮೂವರು ಗೂಗಲ್ ಇಂಡಿಯಾ ಅಧಿಕಾರಿಗಳ ಹೆಸರನ್ನು ಎಫ್‌ಐಆರ್‌ನಿಂದ ತೆಗೆದುಹಾಕಲಾಗಿದೆ.
ಇತ್ತೀಚೆಗೆ ವಾರಣಾಸಿಯ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯವರ ಮಾನಹಾನಿ ಮಾಡುವ ವಿಡಿಯೋವನ್ನು ಮೊದಲು ವಾಟ್ಸ್ಆ್ಯಪ್ ಗುಂಪುಗಳಲ್ಲಿ, ನಂತರ ಯೂಟ್ಯೂಬ್‌ನಲ್ಲಿ ವೀಕ್ಷಿಸಿದರು. ಅದರ ಮೇಲೆ ಆಕ್ಷೇಪ ವ್ಯಕ್ತಪಡಿಸಿದಾಗ ಅವರಿಗೆ 8 ಸಾವಿರಕ್ಕೂ ಅಧಿಕ ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನೆಲೆ ಆ ವ್ಯಕ್ತಿ ಫೆಬ್ರವರಿ 6 ರಂದು ಭೆಲ್ಪುರ್ ಪೊಲೀಸರಿಗೆ ದೂರು ನೀಡಿದ್ದರು.