ಗೊಂಡಾ(ಉತ್ತರ ಪ್ರದೇಶ):ಶುಕ್ರವಾರ ತಡರಾತ್ರಿ ದಲಿತ ಯುವತಿಯೋರ್ವಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಈ ಪ್ರಕರಣ ನಡೆದಿದೆ.
ಶುಕ್ರವಾರ ರಾತ್ರಿ ಯುವತಿ ಮೇಲೆ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು ತದನಂತರ ಆಕೆಯ ಕೊಲೆ ಮಾಡಿದ್ದು, ಊರ ಹೊರಗಡೆ ಮೃತದೇಹ ಎಸೆದಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆರೋಪಿಗಳ ಸುಳಿವು ನೀಡಿದವರಿಗೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಣೆ ಸಹ ಮಾಡಿದ್ದರು. ತನಿಖೆ ಆರಂಭಿಸಿದ ಐದು ಗಂಟೆಯೊಳಗೆ ಆರೋಪಿ ಬಂಧನ ಮಾಡಲಾಗಿದೆ.