ಲಖನೌ:ಮಾಯಾವತಿಯವರ ಆಡಳಿತ ಅವಧಿಯಲ್ಲಿ ಲಖನೌ ಮತ್ತು ನೋಯ್ಡಾದಲ್ಲಿ ನಡೆದ 1,410 ಕೋಟಿ ರೂಪಾಯಿ ಸ್ಮಾರಕ ಹಗರಣ ನಡೆದಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಪ್ರಕರಣದಲ್ಲಿ 25 ಅಧಿಕಾರಿಗಳು ಮತ್ತು 32 ಒಕ್ಕೂಟದ ಮುಖ್ಯಸ್ಥರ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ ಅನ್ನು ಪರಿಗಣಿಸಿ ಸಂಸದ - ಶಾಸಕ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ರೈ ಮುಂದಿನ ವಿಚಾರಣೆಯನ್ನು ನವೆಂಬರ್ 2 ರಂದು ನಿಗದಿಪಡಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿ ಹೆಸರಿಸಲಾದ ಇಬ್ಬರು ಮಾಜಿ ಸಚಿವರಲ್ಲಿ ಬಾಬು ಸಿಂಗ್ ಕುಶ್ವಾಹಾ ಮತ್ತು ನಸಿಮುದ್ದೀನ್ ಸಿದ್ದಿಕಿ ಸೇರಿದ್ದಾರೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧಿಕಾರದಲ್ಲಿದ್ದಾಗ 2007 ಮತ್ತು 2011 ರ ನಡುವೆ ನೋಯ್ಡಾ ಮತ್ತು ಲಖನೌದಲ್ಲಿ ಸ್ಮಾರಕಗಳು ಮತ್ತು ಉದ್ಯಾನಗಳ ನಿರ್ಮಾಣಕ್ಕಾಗಿ ಮರಳುಗಲ್ಲು ಖರೀದಿಯಲ್ಲಿ ಭಾರಿ ಹಗರಣ ನಡೆದಿತ್ತು ಎಂದು ಆರೋಪಿಸಲಾಗಿತ್ತು.
ಬೆಲೆ ನಿಗದಿ ಮಾಡಲು ಅಧಿಕಾರಿಗಳೇ ಅಧಿಕಾರ ಪಡೆದಿರುವುದು ತನಿಖೆಯಲ್ಲೂ ಬಯಲಾಗಿದೆ.ಹೆಚ್ಚಿನ ಬೆಲೆ ನಿಗದಿ ಪಡಿಸಿ ಗುತ್ತಿಗೆಯನ್ನು ಪ್ರಾರಂಭಿಸಲಾಯಿತು. ಲಖನೌ ಮತ್ತು ನೋಯ್ಡಾದಲ್ಲಿ ಎರಡು ದೊಡ್ಡ ಉದ್ಯಾನವನಗಳನ್ನು ನಿರ್ಮಿಸಲಾಯಿತು, ಅದರಲ್ಲಿ ಪಕ್ಷದ ಚುನಾವಣಾ ಚಿಹ್ನೆ ಆನೆ ಮತ್ತು ಅಂದಿನ ಮುಖ್ಯಮಂತ್ರಿ ಮಾಯಾವತಿ, ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಮತ್ತು ಭಾರತರತ್ನ ಡಾ. ಸಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಸೇರಿ ನೂರಾರು ಪ್ರತಿಮೆಗಳನ್ನು ಸ್ಥಾಪಿಸಲಾಯಿತು.ಆಗ ಮಾಯಾವತಿ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷದ ನಾಯಕರು ವ್ಯಾಪಕವಾಗಿ ಟೀಕಿಸಿದರು.