ಬಸ್ತಿ( ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಬಾಲಕಿ ಪ್ರಕೃತಿ ಕರೆಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಕೆಲ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನ ನಡೆಸಿದ್ದು, ಈ ವೇಳೆ ವಿರೋಧ ವ್ಯಕ್ತಪಡಿಸಿದಾಗ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಕಪ್ತಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ಕೇವಲ 55 ಮೀಟರ್ ದೂರದಲ್ಲಿ ಬಾಲಕಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಪ್ರಕೃತಿ ಕರೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ರಾತ್ರಿ 10 ಗಂಟೆಗೆ ಹೊರಹೋಗಿದ್ದಳು. ತುಂಬಾ ಸಮಯವಾದರೂ ಆಕೆಗೆ ವಾಪಸ್ ಬರದ ಕಾರಣ ಮನೆಯವರು ಹುಡುಕಾಟದಲ್ಲಿ ಮಗ್ನರಾಗಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಆಕೆ ಸಿಕ್ಕಿದ್ದಾಳೆ. ಈ ವೇಳೆ ಅರೆಬೆತ್ತಲಾಗಿದ್ದಳು ಮತ್ತು ಬಾಯಿಯಲ್ಲಿ ಬ್ಲೇಡ್ ಹಾಕಲಾಗಿತ್ತು ಎನ್ನಲಾಗಿದ್ದು, ದೇಹದ ಕೆಲವೊಂದು ಭಾಗಗಳಲ್ಲಿ ಬ್ಲೇಡ್ನಿಂದ ಕತ್ತರಿಸಿರುವ ಗುರುತು ಪತ್ತೆಯಾಗಿವೆ.