ಉನ್ನಾವೋ:ಉತ್ತರಪ್ರದೇಶ ಕ್ಯಾಬಿನೆಟ್ ಸಚಿವೆ ಬೇಬಿ ರಾಣಿ ಮೌರ್ಯ ಅವರು ವ್ಯಕ್ತಿಯೊಬ್ಬರಿಂದ ಕಾಲಿಗೆ ಧರಿಸಿದ ಶೂ ಕವರ್ ಅನ್ನು ತೆಗೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
ಉನ್ನಾವೋ ನಗರದಲ್ಲಿರುವ ಪೌಷ್ಟಿಕ ಆಹಾರ ಘಟಕಕ್ಕೆ ಸಚಿವೆ ಬೇಬಿ ರಾಣಿ ಮೌರ್ಯ ಅವರು ಭೇಟಿ ನೀಡಿ ಹೊರಬಂದಾಗ ಕಾಲಿಗೆ ತೊಟ್ಟಿದ್ದ ಕವರ್ ಅನ್ನು ಘಟಕದ ಉದ್ಯೋಗಿಯೊಬ್ಬ ತೆಗೆದಿದ್ದಾನೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸಚಿವರ ಈ ವರ್ತನೆ ಇದೀಗ ವಿವಾದ ಎಬ್ಬಿಸಿದೆ.
ಉತ್ತರಾಖಂಡದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿರುವ ಸಚಿವರ ಬೇಬಿ ರಾಣಿ ಮೌರ್ಯ ಅವರ ಈ ವರ್ತನೆಯ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಸಚಿವರ ಈ ವರ್ತನೆ ವಸಾಹತುಶಾಹಿ ಯುಗವನ್ನು ನೆನಪಿಸುತ್ತಿದೆ ಎಂದು ಟೀಕಿಸಿವೆ.