ಕರ್ನಾಟಕ

karnataka

ETV Bharat / bharat

ಮಗಳ ತಲೆಯನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಭೂಪ - ಹಾರ್ಡೋಯಿ ಜಿಲ್ಲೆಯ ಮಜಹಿಲ್​ ಪೊಲೀಸ್ ಠಾಣೆ

ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆಯ ಮಜಹಿಲ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿವೋರ್ವ ತನ್ನ ಮಗಳ ತಲೆಯನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಭಯಾನಕ ಘಟನೆ ನಡೆದಿದೆ.

death
death

By

Published : Mar 4, 2021, 1:14 PM IST

ಹಾರ್ಡೋಯಿ(ಉತ್ತರ ಪ್ರದೇಶ): ವ್ಯಕ್ತಿವೋರ್ವ ತನ್ನ 16 ವರ್ಷದ ಮಗಳ ತಲೆಯನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಭಯಾನಕ ಘಟನೆ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಮಜಹಿಲ್​ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಡೈತರಾ ಗ್ರಾಮದ ಸರ್ವೇಶ್ ಕುಮಾರ್ ಮಗಳ ತಲೆ ಕತ್ತರಿಸಿದ ಆರೋಪಿ. ಸ್ವಂತ ಸಂಬಂಧಿಕರೊಬ್ಬರ ಜೊತೆ ತನ್ನ ಮಗಳು ಆಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಮಗಳ ತಲೆಯನ್ನೇ ಕತ್ತರಿಸಿದ್ದಾನೆ ಎನ್ನಲಾಗ್ತಿದೆ.

ಸರ್ವೇಶ್ ವೃತ್ತಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದು, ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಮಧ್ಯಾಹ್ನ ಮನೆಗೆ ಹೋದ ಸಂದರ್ಭದಲ್ಲಿ ಹರಿತವಾದ ಕತ್ತಿಯಿಂದ ಏಕಾಏಕಿ ಮಗಳ ಮೇಲೆ ಹಲ್ಲೆ ಮಾಡಿ, ತಲೆ ಕತ್ತರಿಸಿದ್ದಾನೆ. ನಂತರ ಕತ್ತರಿಸಿದ ತಲೆಯೊಂದಿಗೆ ಪೊಲೀಸ್​ ಠಾಣೆಗೆ ಬಂದಿದ್ದು, ಬಾಲಕಿಯ ತಲೆ ಹಿಡಿದುಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಸಂಬಂಧ ಆರೋಪಿ ಸರ್ವೇಶ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details