ಕರ್ನಾಟಕ

karnataka

ETV Bharat / bharat

ಸುತ್ತಿಗೆಯಿಂದ ಹೊಡೆದು ತಂದೆ, ತಾಯಿ, ಸೋದರಳಿಯನ ಹತ್ಯೆ.. ಪೊಲೀಸರ ಎದುರು ಶರಣು - ತಂದೆ ತಾಯಿ ಕೊಂದ ಮಗ

ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಗನೊಬ್ಬ ತಂದೆ, ತಾಯಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

UP MAN KILLS PARENTS
UP MAN KILLS PARENTS

By

Published : Jul 26, 2022, 3:48 PM IST

ಅಲಿಗಢ(ಉತ್ತರ ಪ್ರದೇಶ): ಹಿರಿಯ ಮಗನಿಗೆ ಹಣ ನೀಡಿದ್ದರಿಂದ ಕೋಪಗೊಂಡ ಕಿರಿಯ ಮಗನೊಬ್ಬ ಸುತ್ತಿಗೆಯಿಂದ ಹೊಡೆದು ತಂದೆ - ತಾಯಿ ಕೊಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ಅಲಿಗಢದ ಸೌರಭ್​(22) ಈ ಕೃತ್ಯವೆಸಗಿದ್ದು, ಘಟನೆಯಲ್ಲಿ ತಂದೆ ಓಂಪ್ರಕಾಶ್ (62), ತಾಯಿ ಸೋಮಾವತಿ (60) ಮತ್ತು ಸೋದರಳಿಯ ಶಿವ (4) ಸಾವನ್ನಪ್ಪಿದ್ದಾರೆ. ಸಹೋದರನಿಗೆ ಹಣ ನೀಡಿದ್ದ ಕೋಪಗೊಂಡಿರುವ ಸೌರಭ್​ ಸುತ್ತಿಗೆ ಹಾಗೂ ಇಟ್ಟಿಗೆಯಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ತದನಂತರ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಇದನ್ನೂ ಓದಿರಿ:'ಅಗ್ನಿವೀರ್​'​ಗೋಸ್ಕರ ತಯಾರಿ: ಓಡುತ್ತಿದ್ದಾಗಲೇ ಹಠಾತ್​ ಬಿದ್ದು ಸಾವನ್ನಪ್ಪಿದ ಯುವತಿ!

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಿವೃತ್ತ ಸರ್ಕಾರಿ ನೌಕರ ಓಂ ಪ್ರಕಾಶ್​​ ತಮ್ಮ ಹಿರಿಯ ಮಗನಿಗೆ ಜಿಮ್​​ಗೋಸ್ಕರ ಹಣ ನೀಡಿದ್ದನು. ಇದರಿಂದ ನಿರುದ್ಯೋಗಿ ಸೌರಭ್​​ ನಿರಾಸೆಗೊಂಡಿದ್ದರು. ಉದ್ಯಮ ಆರಂಭಿಸಲು ಆರ್ಥಿಕ ನೆರವು ನೀಡುವಂತೆ ಕೋರಿಕೊಂಡಿದ್ದರು. ಆದರೆ, ತಂದೆ ಹಣ ನೀಡಿರಲಿಲ್ಲ. ಜೊತೆಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸೌರಭ್​ ನಿನ್ನೆ ಸಂಜೆ ದಾಳಿ ನಡೆಸಿ, ಅವರನ್ನ ಕೊಲೆ ಮಾಡಿದ್ದಾನೆ.

ABOUT THE AUTHOR

...view details