ಕರ್ನಾಟಕ

karnataka

ETV Bharat / bharat

'ಪತ್ನಿ, ಮಗಳ ಮೇಲೆ ಅತ್ಯಾಚಾರಗೈದು ಮನೆಗಳ್ಳತನ': ಯುಪಿಯಲ್ಲಿ ಅಮಾನವೀಯ ಪ್ರಕರಣ - ರಾಂಪುರ ಎಸ್ಪಿ ಅಶೋಕ್ ಕುಮಾರ್ ಶುಕ್ಲಾ

ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳ ಮೇಲೆ ಅತ್ಯಾಚಾರ ನಡೆಸಿ ದುಷ್ಕರ್ಮಿಗಳು ಮನೆ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

Uttar Pradesh
ಉತ್ತರಪ್ರದೇಶ

By

Published : May 23, 2023, 12:34 PM IST

Updated : May 23, 2023, 12:45 PM IST

ರಾಂಪುರ (ಉತ್ತರ ಪ್ರದೇಶ):ದುಷ್ಕರ್ಮಿಗಳು ತನ್ನಹೆಂಡತಿ ಮತ್ತು 14 ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಮನೆಯಿಂದ ನಗದು, ಮೊಬೈಲ್ ಫೋನ್ ಕಳ್ಳತನ ಮಾಡಿರುವುದಾಗಿ ವ್ಯಕ್ತಿಯೊಬ್ಬರು ಇಲ್ಲಿನ ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಕುರಿತು ರಾಂಪುರ ಎಸ್ಪಿ ಅಶೋಕ್ ಕುಮಾರ್ ಶುಕ್ಲಾ ಮಾಹಿತಿ ನೀಡಿದ್ದು, ದೂರುದಾರರು ಮೊದಲು ತನ್ನ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ದೂರು ನೀಡಿದ್ದರು. ಆ ಬಳಿಕ ಪತ್ನಿ ಹಾಗೂ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ತಿಳಿಸಿದ್ದಾರೆ ಎಂದರು.

ದೂರು ದಾಖಲಿಸಿದ ನಂತರ ತಾಯಿ ಮತ್ತು ಮಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಶನಿವಾರ ರಾತ್ರಿ ಮನೆಯಿಂದ 5,000 ರೂಪಾಯಿ ಮತ್ತು ಮೊಬೈಲ್​ ದೋಚಿದ್ದಾರೆ ಎಂದು ದೂರು ನೀಡಿದ್ದರು. ಆದರೆ ಮಾರನೆ ದಿನ ಬೆಳಿಗ್ಗೆ, ಶನಿವಾರ ರಾತ್ರಿ ಮೂವರು ದುಷ್ಕರ್ಮಿಗಳು ತಮ್ಮ ಮನೆಗೆ ನುಗ್ಗಿ ಲೂಟಿ ಮಾಡಿದ್ದಾರೆ. ತಡೆಯುವ ವೇಳೆ ತನ್ನನ್ನು ಹಾಸಿಗೆಗೆ ಕಟ್ಟಿ ಹಾಕಿ ಕಣ್ಣೆದುರೇ ಪತ್ನಿ ಹಾಗೂ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದರು ಎಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತನ್ನೊಂದಿಗೆ ಬರಲು ನಿರಾಕರಿಸಿದ ವಿವಾಹಿತ ಮಹಿಳೆ ಮೇಲೆ ಪ್ರಿಯಕರನಿಂದ ಆ್ಯಸಿಡ್ ದಾಳಿ

ದೂರುದಾರ ಶನಿವಾರ ರಾತ್ರಿ ಕಳ್ಳತನದ ಬಗ್ಗೆ ಮಾತ್ರ ಮಾಹಿತಿ ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಇದಾದ ಬಳಿಕ ಬೆಳಗ್ಗೆ ತನ್ನ ಪತ್ನಿ ಮತ್ತು ಮಗಳ ಮೇಲಾದ ಅತ್ಯಾಚಾರದ ಕುರಿತು ತಿಳಿಸಿದ್ದಾರೆ. ಇದರಿಂದ ಪೊಲೀಸರಿಗೆ ಗೊಂದಲ ಉಂಟಾಯಿತು. ಪ್ರಕರಣ ಶಂಕಾಸ್ಪದವಾಗಿಯೂ ಇತ್ತು. ಈ ಕುರಿತು ತನಿಖೆ ತೀವ್ರಗೊಳಿಸಲಾಗಿದೆ ಎಂದು ಎಸ್ಪಿ ಅಶೋಕ್ ಕುಮಾರ್ ಶುಕ್ಲಾ ಹೇಳಿದರು.

ಇದನ್ನೂ ಓದಿ:ಚಾಕು ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಯನ್ನು ಥಳಿಸಿ ಕೊಂದ ಗ್ರಾಮಸ್ಥರು

ಇನ್ನು ತಾಯಿ ಮತ್ತು ಮಗಳು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧೀಕ್ಷಕ ಅಶೋಕ್ ಕುಮಾರ್ ಶುಕ್ಲಾ, ತಕ್ಷಣ ಸ್ಥಳಕ್ಕೆ ಆಗಮಿಸಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆ. ವಿಚಾರಣೆ ವೇಳೆ ಅತ್ಯಾಚಾರಕ್ಕೆ ಸಂಬಂಧಿಸಿ ಯಾರ ಮೇಲಾದರೂ ಅನುಮಾನದ ಕುರಿತಾಗಲಿ, ಆರೋಪಿಗಳ ಕುರಿತಾಗಲಿ ಕುಟುಂಬ ಸಂಪೂರ್ಣ ಮಾಹಿತಿ ನೀಡಿಲ್ಲ. ಹಲವು ಸುತ್ತಿನ ವಿಚಾರಣೆಯಲ್ಲಿ, ಸಂತ್ರಸ್ತ ಕುಟುಂಬದವರು ಪ್ರತಿ ಬಾರಿ ಬೇರೆ ಬೇರೆ ಹೊಸ ವಿಷಯಗಳನ್ನು ಹೇಳಿದ್ದಾರೆ. ಹೀಗಾಗಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರು ಅಪರಾಧ ಲೋಕದಲ್ಲಿ ಸಕ್ರಿಯರಾಗಿರುವ ದುಷ್ಕರ್ಮಿಗಳಿಗೆ ಖಡಕ್‌ ಕಾನೂನು ಕ್ರಮಗಳ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.

ಇದನ್ನೂ ಓದಿ:ಮೇಕಪ್ ಮಾಡಿಸಿಕೊಳ್ಳುತ್ತಿದ್ದ ವಧುವಿನ ಮೇಲೆ ಗುಂಡು ಹಾರಿಸಿದ ಭಗ್ನ ಪ್ರೇಮಿ!

ಏರ್‌ಪೋರ್ಟ್‌ನಲ್ಲಿ ಪರಿಚಯವಾದ ಮಹಿಳೆಗೆ ಲೈಂಗಿಕ ಕಿರುಕುಳ ; ಉದ್ಯಮಿ ವಿರುದ್ಧ ಎಫ್ಐಆರ್

Last Updated : May 23, 2023, 12:45 PM IST

ABOUT THE AUTHOR

...view details