ಭದೋಹಿ (ಉತ್ತರ ಪ್ರದೇಶ):ಒಂದೂವರೆ ವರ್ಷಗಳ ಹಿಂದೆ ಪಾಕಿಸ್ತಾನಿ ನೌಕಾಪಡೆಯಿಂದ ಎಂಟು ಮೀನುಗಾರರೊಂದಿಗೆ ಸಿಕ್ಕಿಬಿದ್ದ ಉತ್ತರ ಪ್ರದೇಶದ ವ್ಯಕ್ತಿ ಬಿಡುಗಡೆಗಾಗಿ ಒತ್ತಾಯಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕುಟುಂಬವು ಮನವಿ ಮಾಡಿದೆ. ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಭತೇವಾರ ಗ್ರಾಮದ ನಿವಾಸಿ ನೀರಜ್ ಬಿಂದ್ ಎಂಬಾತನನ್ನು ಫೆಬ್ರವರಿ 8, 2022 ರಂದು ಎಂಟು ಮೀನುಗಾರರೊಂದಿಗೆ ಪಾಕಿಸ್ತಾನಿ ನೌಕಾಪಡೆಯು, ಗುಜರಾತ್ ಬಳಿ ಅಂತಾರಾಷ್ಟ್ರೀಯ ಜಲ ಗಡಿ ದಾಟಿದ ಸಂದರ್ಭದಲ್ಲಿ ಬಂಧಿಸಲಾಗಿತ್ತು ಎಂದು ಅವರ ತಂದೆ ಉದಯರಾಜ್ ಬಿಂದ್ ಹೇಳಿದ್ದಾರೆ.
ಅಳಲು ತೋಡಿಕೊಂಡ ನೀರಜ್ ಪತ್ನಿ ಪೂಜಾ:ನೀರಜ್‌ನನ್ನು ಇತರ ಎಂಟು ಮಂದಿಯೊಂದಿಗೆ ಬಂಧಿಸಿದ ದಿನವೇ ನೀರಜ್‌ನ ಉದ್ಯೋಗದಾತ ಕುಟುಂಬಕ್ಕೆ ಕರೆ ಮಾಡಿದ್ದನ್ನು ನೀರಜ್ ಪತ್ನಿ ಪೂಜಾ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ''ನೀರಜ್‌ನನ್ನು ಪಾಕಿಸ್ತಾನಿ ನೌಕಾಪಡೆ ಬಂಧಿಸಿದಾಗಿನಿಂದ, ತಾನು ಫೋನ್‌ನಲ್ಲಿ ಮಾತನಾಡುವುದನ್ನು ಬಿಟ್ಟು ಅವರ ಧ್ವನಿಯನ್ನು ಕೇಳಲಿಲ್ಲ. ತನ್ನ ಗಂಡನ ಮುಂದಿನ ಭವಿಷ್ಯವೇನು ಎಂದು ಚಿಂತಿಸುವಂತಾಗಿದೆ. ಪತಿಯ ಬಂಧನದಿಂದ ತಮಗಾದ ಘೋರ ಅನುಭವವನ್ನು ವಿವರಿಸಿದ ಪೂಜಾ, ನೀರಜ್‌ನನ್ನು ಬಂಧಿಸಿದಾಗ ತಾನು ಗರ್ಭಿಣಿಯಾಗಿದ್ದೆ. ನಂತರ ನೀರಜ್ ಇಲ್ಲದ ಸಮಯದಲ್ಲಿ ತನಗೆ ಗಂಡು ಮಗುವಾಯಿತು. ತನ್ನ ಮಗನಿಗೆ ಈಗ ಸುಮಾರು ಒಂದು ವರ್ಷ. ಆದರೆ, ಅವನು ತಂದೆಯನ್ನು ನೋಡಿಲ್ಲ ಎಂದು ನೀರಜ್ ಪತ್ನಿ ಪೂಜಾ ಅಳಲು ತೋಡಿಕೊಂಡಿದ್ದಾರೆ.
ನೀರಜ್ ಬಿಡುಗಡೆಗಾಗಿ ನಿರಂತರವಾಗಿ ಅಲೆದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನೀರಜ್ ಬಿಡುಗಡೆಗೆ ಯಾವುದೇ ಕಾರ್ಯವಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.