ಕರ್ನಾಟಕ

karnataka

ETV Bharat / bharat

ಪ್ರಭಾವಿಯಿಂದ ಅಪ್ರಾಪ್ತೆಯ ಅತ್ಯಾಚಾರ: ಕೇಸು ಮುಚ್ಚಿ ಹಾಕಲು ₹1.25 ಲಕ್ಷ ಹಣದ ಆಮಿಷ! - ಉತ್ತರ ಪ್ರದೇಶ ಅಪ್ರಾಪ್ತೆ ರೇಪ್ ಪ್ರಕರಣ

ಉತ್ತರ ಪ್ರದೇಶದಲ್ಲಿ ನಡೆದಿರುವ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣವೊಂದನ್ನು ರಾಜಿ-ಪಂಚಾಯ್ತಿ ಮೂಲಕ ಇತ್ಯರ್ಥಪಡಿಸಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆದಿದೆ.

Etv BharatLocal panchayat negotiate and settle a rape case
Etv BharatLocal panchayat negotiate and settle a rape case

By

Published : Aug 4, 2022, 10:00 PM IST

ಸಂತ ಕಬೀರ್ ನಗರ(ಉತ್ತರ ಪ್ರದೇಶ):ದೇಶದಲ್ಲಿ ಪ್ರತಿದಿನ ಒಂದಿಲ್ಲೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿರುತ್ತದೆ. ಆದರೆ, ಕೆಲವೊಂದು ಪ್ರಕರಣಗಳು ಪೊಲೀಸ್ ಠಾಣೆಗೆ ಬರುವ ಮೊದಲೇ ಮುಚ್ಚಿ ಹೋಗುತ್ತವೆ. ಸದ್ಯ ಅಂತಹದ್ದೊಂದು ಪ್ರಕರಣ ಉತ್ತರ ಪ್ರದೇಶದ ಸಂತ ಕಬೀರ್​ ನಗರದಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಪ್ರಕರಣ ಇದಾಗಿದೆ. ಕೆಲಸಕ್ಕಾಗಿ ಹೊರಗಡೆ ತೆರಳಿದ್ದ ಅಪ್ರಾಪ್ತೆ ಮೇಲೆ ಗ್ರಾಮದ ಪ್ರಭಾವಿ ಕುಟುಂಬದ ಯುವಕನೋರ್ವ ಅತ್ಯಾಚಾರವೆಸಗಿದ್ದ. ಇದರ ನಂತರ ಪಂಚಾಯ್ತಿ ನಡೆಸಿ, ಹೆಣ್ಣು ಮಗುವಿಗೆ 1.25 ಲಕ್ಷ ರೂ. ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ.

ಸಂಪೂರ್ಣ ವಿವರ: ಸೋಮವಾರ ಸಂಜೆ ಗ್ರಾಮದ 16 ವರ್ಷದ ಅಪ್ರಾಪ್ತೆಯ ಮೇಲೆ ಅದೇ ಗ್ರಾಮದ 18ರ ಯುವಕನೋರ್ವ ಅತ್ಯಾಚಾರವೆಸಗಿದ್ದ. ಘಟನೆಗೆ ಸಂಬಂಧಿಸಿದಂತೆ ಬಾಲಕಿ ಪೋಷಕರಿಗೆ ವಿವರಿಸಿದ್ದಾಳೆ. ಮಂಗಳವಾರ ಬೆಳಗ್ಗೆ ಸಂತ್ರಸ್ತೆಯ ಜೊತೆ ಠಾಣೆಗೆ ಬಂದಿರುವ ತಂದೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಕಾರ್ಯಾಚರಣೆಗಳಿದಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:70ರ ಅಜ್ಜಿಯ ಮೇಲೆ ಮೊಮ್ಮಗನಿಂದ ಅತ್ಯಾಚಾರ; ವೃದ್ಧೆಯ ಸ್ಥಿತಿ ಚಿಂತಾಜನಕ

ಗ್ರಾಮಸ್ಥರಿಂದ ಪಂಚಾಯ್ತಿ: ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಗ್ರಾಮದಲ್ಲಿ ಪಂಚಾಯ್ತಿ ನಡೆಸಲಾಗಿದೆ. ಬಂಧಿತ ಯುವಕ ಪ್ರಭಾವಿ ಕುಟುಂಬದವನಾಗಿದ್ದರಿಂದ ಗ್ರಾಮದ ಅನೇಕರು ಸೇರಿ ಸಂತ್ರಸ್ತೆಗೆ 1.25 ಲಕ್ಷ ರೂ. ನೀಡುವಂತೆ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಆರೋಪಿಯ ವಿರುದ್ಧ ನೀಡಲಾಗಿದ್ದ ದೂರು ಸಹ ವಾಪಸ್ ಪಡೆದುಕೊಳ್ಳಲಾಗಿದ್ದು, ಆತನ ರಿಲೀಸ್ ಮಾಡಲಾಗಿದೆ ಎನ್ನಲಾಗಿದೆ.

ABOUT THE AUTHOR

...view details