ಲಖನೌ(ಉತ್ತರಪ್ರದೇಶ) :ಮಹಿಳೆಗೆ ಅವಕಾಶ, ಪ್ರೋತ್ಸಾಹ ದೊರೆತರೆ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ತಾನು ಏನೆಂಬುದನ್ನು ನಿರೂಪಿಸುತ್ತಾಳೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಉತ್ತರಪ್ರದೇಶದ ಲಖನೌನಲ್ಲಿ 3ನೇ ಹಂತದ ಮಿಷನ್ ಶಕ್ತಿ ಉದ್ಘಾಟಿಸುವ ಮುನ್ನ ಅವರು ಮಾತನಾಡಿದರು. ಸಮಾರಂಭದಲ್ಲಿ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಜರಿದ್ದರು.