ಲಖನೌ :ಆತ ನೋಡಲು ಚೆನ್ನಾಗಿ ಕಾಣುತ್ತಿದ್ದ. ಎತ್ತರ, ಮುಗ್ಧತೆ, ಮೈಬಣ್ಣ, ಆತನ ಕಣ್ಣುಗಳು ಯಾವುದೇ ಸಿನಿಮಾ ತಾರೆಗಿಂತ ಕಡಿಮೆಯಾಗಿದ್ದಿಲ್ಲ. ಈ ಸಿಂಪಲ್ಲಾಗಿ ಕಾಣುವ ಯುವಕ ಭೂಗತ ಲೋಕಕ್ಕೆ ಕಾಲಿಟ್ಟಿದ್ದು ಹೇಗೆ?, ಈತನ ಜೀವನದಲ್ಲಿ ಬದಲಾವಣೆ ಎಲ್ಲಿ ಆಯಿತು ಎಂಬುದು ತಿಳಿಯೋಣಾ ಬನ್ನಿ..
ಪಕ್ಕಾ ಹಳ್ಳಿ ಹುಡುಗ :ಉತ್ತರಪ್ರದೇಶದ ಮುಜಾಫರ್‌ನಗರದ ಸರ್ನಾವಲಿ ಗ್ರಾಮದಲ್ಲಿ ಯಶಪಾಲ್ ಮಲಿಕ್‌ಗೆ ಮಗ ಜನಿಸಿದಾಗ ಇಡೀ ಕುಟುಂಬವೇ ಸಂತೋಷದಲ್ಲಿತ್ತು. ಮಗನಿಗೆ ಅಮಿತ್ ಮಲಿಕ್ ಎಂದು ಹೆಸರಿಟ್ಟರು. ಮಗನ ಪೋಷಣೆಯಲ್ಲಿ ಪೋಷಕರು ಯಾವುದು ಕಡಿಮೆ ಮಾಡಿರಲಿಲ್ಲ. ಆದರೆ, ಕಂಪನಿಯೊಂದು ಅಮಿತ್‌ನನ್ನು ತಪ್ಪು ದಾರಿಯಲ್ಲಿ ತೆಗೆದುಕೊಂಡು ಹೋಯ್ತು. ಅಮಿತ್ ಮಲಿಕ್‌ನಿಂದ ಭೂರಾ ಆದನು. ಅಮಿತ್ ಮಲಿಕ್ನ ಸುಂದರ ಮೈಬಣ್ಣದಿಂದಾಗಿ ಭೂರಾ ಎಂಬ ಹೆಸರು ಬಂದಿತು.
ಹುಡುಗಿಯರಿಗಾಗಿ ಲೂಟಿ ಮಾಡುತ್ತಿದ್ದ ಮಾಫಿಯಾ ಡಾನ್ ಅಮಿತ್ ಭೂರಾ 16ನೇ ವಯಸ್ಸಿನಲ್ಲೇ ಮೊದಲ ಕಳ್ಳತನ : ಪಕ್ಕಾ ಹಳ್ಳಿ ಹುಡುಗ ಆಗಿದ್ದ ಭೂರಾ 16ನೇ ವಯಸ್ಸಿನಲ್ಲಿ ಮೊಬೈಲ್ ಅಂಗಡಿ ಮಾಲೀಕನ ಬೈಕ್ ಕದ್ದು ಸಿಕ್ಕಿಬಿದ್ದಿದ್ದನು. 2002ರಲ್ಲಿ ಭೂರಾ ಜೈಲಿನಿಂದ ಹೊರ ಬಂದು ಮುಜಾಫರ್‌ನಗರದ ಕುಖ್ಯಾತ ದರೋಡೆಕೋರ ಸಹೋದರರಾದ ನೀತು ಕೈಲ್ ಮತ್ತು ಬಿಟ್ಟು ಕೈಲ್ ಜೊತೆ ಸೇರಿಕೊಂಡನು. ಅವರೊಂದಿಗೆ ಭೂರಾ ಮೆಡಿಕಲ್ ಸ್ಟೋರ್ ಮಾಲೀಕ ವಿನೀತ್ನನ್ನು ಕೊಲೆ ಮಾಡಿದ. ಈ ಘಟನೆಗೆ ಸಾಕ್ಷ್ಯ ಸಿಕ್ಕಿದ್ದರಿಂದ ಭೂರಾಗೆ ಜೈಲು ಶಿಕ್ಷೆಯಾಗಿತ್ತು.
ಮಾಫಿಯಾಗೆ ಎಂಟ್ರಿ :ಅಪರಾಧ ಜಗತ್ತಿನಲ್ಲಿ ಹೊಸ ಹೆಜ್ಜೆಯಿಡುತ್ತಿದ್ದ ಭೂರಾ ಪಶ್ಚಿಮ ಯುಪಿಯ ಅಪಾಯಕಾರಿ ಮಾಫಿಯಾ ಸುನೀಲ್ ರಾಠಿಯೊಂದಿಗೆ ಕೈ ಜೋಡಿಸಿದನು. ಆಗಿನಿಂದಲೂ ಆತನೊಳಗೆ ರುದ್ರಪ್ರತಾಪ ಮತ್ತಷ್ಟು ಹೆಚ್ಚಾಯ್ತು. ರಾಠಿಯ ಆಜ್ಞೆಯ ಮೇರೆಗೆ 2002ರಲ್ಲಿ ವಂಚಕ ಉದಯ್ ವೀರ್ ಕಾಲಾನನ್ನು ಅಮಿತ್ ಭೂರಾ ಕೊಲೆ ಮಾಡಿದನು. 2004ರಲ್ಲಿ ಬಾಗ್‌ಪತ್‌ನ ದೊಡ್ಡ ಕ್ರಿಮಿನಲ್ ಧರ್ಮೇಂದ್ರ ಕಿರ್ತಾಲ್ ಮೇಲೆ ಭೂರಾ ದಾಳಿ ನಡೆಸಿದ್ದನು. ಈ ದಾಳಿಯಲ್ಲಿ ಧರ್ಮೇಂದ್ರ ಕಿರ್ತಾಲ್ ಬದುಕುಳಿದಿದ್ದನು. ಆದರೆ, ಅವರ ತಂದೆ, ಚಿಕ್ಕಪ್ಪ ಸೇರಿದಂತೆ 3 ಜನರು ಸಾವನ್ನಪ್ಪಿದ್ದರು. ಈ ಘಟನೆ ಯುಪಿ ಪೊಲೀಸರು ಬೆಚ್ಚಿ ಬಿದ್ದಿದ್ದರು.
ಹುಡುಗಿಯರಿಗಾಗಿ ಲೂಟಿ ಮಾಡುತ್ತಿದ್ದ ಮಾಫಿಯಾ ಡಾನ್ ಅಮಿತ್ ಭೂರಾ ಆರೋಪಿಗಳನ್ನು ಮುಗಿಸುವಂತೆ ಐಪಿಎಸ್ಗೆ ತಾಕೀತು :ಆಗಿನ ಸಮಯದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ನವನೀತ್ ಸೆಕೆರಾಗೆ ಕೊಲೆಯಲ್ಲಿ ಭಾಗಿಯಾದ ತಂಡವನ್ನು ನಿರ್ಮೂಲನೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅದರಂತೆ ಅವರು ಆರೋಪಿಗಳಾದ ಪುಷ್ಪೇಂದ್ರ, ಅನಿಲ್, ರಾಜೀವ್ ಸೇರಿದಂತೆ ಮೂವರನ್ನು ನವನೀತ್ ಸೆಕೆರಾ ಎನ್ಕೌಂಟರ್ ಮಾಡಿ ಬಿಸಾಕಿದ್ದರು. ಆದ್ರೆ, ಅಮಿತ್ ಭೂರಾ ಮಾತ್ರಾ ಎಸ್ಕೇಪ್ ಆಗಿದ್ದನು.
ಹುಡುಗಿಯರ ಹವ್ಯಾಸ : ಅಮಿತ್ ಭೂರಾನ ಕ್ರೈಮ್ ಗ್ರಾಫ್ ಎಷ್ಟು ವೇಗದಲ್ಲಿ ಹೆಚ್ಚುತ್ತಿತ್ತೋ ಅದೇ ವೇಗದಲ್ಲಿ ಅವನ ಹವ್ಯಾಸಗಳು ಹೆಚ್ಚಾಗುತ್ತಿದ್ದವು. ಹಣದ ಹಸಿವು ಮತ್ತು ಬ್ರಾಂಡೆಡ್ ಬಟ್ಟೆಗಳು, ದುಬಾರಿ ಕಾರುಗಳ ಜೊತೆಗೆ ಹೊಸ ಗೆಳತಿಯರನ್ನು ಪರಿಚಯ ಮಾಡಿಕೊಳ್ಳುವುದು ಕೂಡ ಭೂರಾನ ಹವ್ಯಾಸಗಳಲ್ಲಿ ಒಂದಾಗಿತ್ತು. ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಹೆದ್ದಾರಿಯಲ್ಲೂ ಲೂಟಿ ಮಾಡತೊಡಗಿದ.
ಹುಡುಗಿಯರಿಗಾಗಿ ಲೂಟಿ ಮಾಡುತ್ತಿದ್ದ ಮಾಫಿಯಾ ಡಾನ್ ಅಮಿತ್ ಭೂರಾ ಹುಡುಗಿಯರಿಗಾಗಿ ಲೂಟಿ : ಅಮಿತ್ ಭೂರಾ ಹೆದ್ದಾರಿಯಲ್ಲಿ ದುಬಾರಿ ಕಾರುಗಳಿಗೆ ಡಿಕ್ಕಿ ಹೊಡೆದು ದರೋಡೆ ಮಾಡುತ್ತಿದ್ದನು. ಅಮಿತ್ ಭೂರಾ ಹೆದ್ದಾರಿಯಲ್ಲಿ ಹಾದು ಹೋಗುವ ದುಬಾರಿ ಕಾರುಗಳನ್ನು ಗುರಿಯಾಗಿಸಿಕೊಂಡಿದ್ದನು. ಇದಕ್ಕಾಗಿ ಹಳೆಯ ಕಾರಿನೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಚು ಹಾಕುತ್ತಿದ್ದನು. ಐಷಾರಾಮಿ ಕಾರು ಕಂಡ ತಕ್ಷಣ ಆ ಕಾರಿಗೆ ಡಿಕ್ಕಿ ಹೊಡೆಯುತ್ತಿದ್ದ. ಡಿಕ್ಕಿ ಹೊಡೆದು ಕಾರು ಮಾಲೀಕ ಕೆಳಗಿಳಿದ ಕೂಡಲೇ ಭೂರಾ ಪಿಸ್ತೂಲ್ ತೋರಿಸಿ ಕಾರನ್ನು ಕಸಿದುಕೊಳ್ಳುತ್ತಿದ್ದ. ವಿಶೇಷವೆಂದರೆ ಭೂರಾ ಹೆದ್ದಾರಿಯಲ್ಲಿ ಏಕಾಂಗಿಯಾಗಿ ಕಾರನ್ನು ದರೋಡೆ ಮಾಡುತ್ತಿದ್ದನು.
ಕದ್ದ ಕಾರಿನಲ್ಲೇ ಹುಡುಗಿಯರೊಂದಿಗೆ ಮಜಾ : ಭೂರಾ ದರೋಡೆ ಮಾಡಿದ ಐಷಾರಾಮಿ ಕಾರಿನಲ್ಲೇ ತನ್ನ ಗೆಳತಿಯರ ಜೊತೆ ಎಂಜಾಯ್ ಮಾಡುತ್ತಿದ್ದನು. ಹುಡುಗಿಯರಿಗೂ ತಾವು ತಿರುಗಾಡುತ್ತಿದ್ದ ಕಾರು ಕದ್ದಿದ್ದು ಎಂಬುದು ಗೊತ್ತಿತ್ತು. ಆ ಯುವತಿಯರು ಭೂರಾ ವ್ಯವಹಾರದ ಬಗ್ಗೆ ತಿಳಿದ ನಂತರವೂ ಆತನೊಂದಿಗೆ ಸಂಬಂಧ ಹೊಂದಿದ್ದರು ಎಂದು ತನಿಖೆ ಮೂಲಕ ತಿಳಿದು ಬಂದಿದೆ.
ಹುಡುಗಿಯರ ವಾಟ್ಸ್‌ಆ್ಯಪ್ ಡಿಪಿಯಲ್ಲಿ ಭೂರಾ :ಈ ಹುಡುಗಿಯರೆಲ್ಲ ತಮ್ಮ ವಾಟ್ಸ್‌ಆ್ಯಪ್ ಡಿಪಿಯಲ್ಲಿ ಭೂರಾ ಫೋಟೋ ಹಾಕಿದ್ದರು. ಈ ಎಲ್ಲಾ ಹುಡುಗಿಯರನ್ನು ಮೀರತ್, ನೋಯ್ಡಾ, ಡೆಹ್ರಾಡೂನ್ ಮತ್ತು ದೆಹಲಿಯ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಹುಡುಗಿಯರಿಗಾಗಿ ಲೂಟಿ ಮಾಡುತ್ತಿದ್ದ ಮಾಫಿಯಾ ಡಾನ್ ಅಮಿತ್ ಭೂರಾ ಟೋಲ್ ಪ್ಲಾಜಾ ದರೋಡೆ :ಹುಡುಗಿಯರ ಮೇಲೆ ಭೂರಾ ನೀರಿನಂತೆ ಹಣ ಸುರಿಯುತ್ತಿದ್ದನು. ಹಣದ ಕೊರತೆ ಉಂಟಾದಗೆಲ್ಲ ಆತ ಟೋಲ್ ಪ್ಲಾಜಾ ದರೋಡೆಗೆ ಯೋಜನೆ ರೂಪಿಸುತ್ತಿದ್ದ. 2009 ಡಿಸೆಂಬರ್ 2ರಂದು ಭೂರಾ ತನ್ನ ಸಹಚರರೊಂದಿಗೆ ಹೆದ್ದಾರಿಯಲ್ಲಿರುವ ಟೋಲ್ ಸಂಗ್ರಹಿಸುವ ಕಂಪನಿಯಾದ ಬಿಕೆ ಎಸ್‌ಎಸ್‌ನ ವಲಯ ಕಚೇರಿಯ ಮೇಲೆ ದಾಳಿ ಮಾಡಿ 19 ಲಕ್ಷ ದರೋಡೆ ಮಾಡಿದ್ದನು.
ಪೊಲೀಸರಿಗೆ ತಲೆನೋವಾದ ಭೂರಾ:ಟೋಲ್ ಪ್ಲಾಜಾ ದರೋಡೆ ಮಾಡುವ ಮೂಲಕ ಭೂರಾ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದನು. ಪೊಲೀಸರಿಗೆ ಯಾವುದೇ ಸ್ಥಿತಿಯಲ್ಲಾದ್ರೂ ಭೂರಾ ಬೇಕಾಗಿತ್ತು. ಪೊಲೀಸರು ಭೂರಾ ಗ್ಯಾಂಗ್‌ನ ಸದಸ್ಯನೊಬ್ಬನನ್ನು ಮಾಹಿತಿದಾರನನ್ನಾಗಿ ಮಾಡಿದರು. ದೆಹಲಿಯ ಕರ್ಕರ್ಡೂಮಾದಲ್ಲಿ ಭುರಾ ಟೋಲ್ ದರೋಡೆ ಮಾಡಲು ಹೊರಟಿದ್ದಾರೆ ಎಂದು ಮಾಹಿತಿದಾರರಿಂದ ಸುದ್ದಿ ಸಿಕ್ಕಿತ್ತು.
ಪೊಲೀಸರಿಗೆ ಸಿಕ್ಕಿ ಬಿದ್ದ ಭೂರಾ : 2 ಫೆಬ್ರವರಿ 2010ರಂದು ಭೂರಾ ಟೋಲ್ ದರೋಡೆ ಮಾಡಲು ಕರ್ಕರ್ಡೂಮಾ ತಲುಪಿದ ತಕ್ಷಣ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದನು. ಇದು ಪೊಲೀಸರಿಗೆ ದೊಡ್ಡ ಯಶಸ್ಸು ಆಗಿತ್ತು. ಆದರೆ, ಅವರ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ.
ಹುಡುಗಿಯರಿಗಾಗಿ ಲೂಟಿ ಮಾಡುತ್ತಿದ್ದ ಮಾಫಿಯಾ ಡಾನ್ ಅಮಿತ್ ಭೂರಾ ಪೊಲೀಸರಿಗೆ ಲಂಚ ಕೊಟ್ಟು ಎಸ್ಕೇಪ್ ಆದ ಡಾನ್ : 2011ರಲ್ಲಿ ಭೂರಾನನ್ನು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಯಿತು. ಭುರಾ ಜೊತೆಗೆ ಒಬ್ಬ ಕಾನ್‌ಸ್ಟೇಬಲ್ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಇದ್ದರು. ರೋಹಿಣಿ ನ್ಯಾಯಾಲಯದ ನಂತರ ಭೂರಾನನ್ನು ಗಾಜಿಯಾಬಾದ್ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿತ್ತು. ಇದೇ ಸಮಯ ಬಳಸಿಕೊಂಡ ಭೂರಾ ತನ್ನ ಗೆಳತಿಯರನ್ನು ಕಾನ್ಸ್ಟೇಬಲ್ಗೆ ಪರಿಚಯಿಸಲು ಮುಂದಾದ. ಹೆಣ್ಣ, ಹಣದ ಆಸೆಗೆ ಬಿದ್ದ ಕಾನ್ಸ್ಟೇಬಲ್ಗಳು ಭೂರಾನನ್ನು ಓಡಿಸಿದರು ಎಂದು ತಿಳಿದು ಬಂದಿದೆ.
ಹೆಚ್ಚಾದ ಭೂರಾ ಫೀವರ್ :ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಮೂಲಕ ಅಮಿತ್ ಭೂರಾ ಮತ್ತಷ್ಟು ದರೋಡೆಗಳು ಹೆಚ್ಚಾದ ತೊಡಗಿದವು. ಡೆಹ್ರಾಡೂನ್‌ನ ಶಾಪಿಂಗ್ ಮಾಲ್‌ನಲ್ಲಿ ಅಮಿತ್ ದರೋಡೆ ಮಾಡಿದ. 14 ಜೂನ್ 2008ರಲ್ಲಿ ಫರಿದಾಬಾದ್ ಬಳಿಯ ಹೆದ್ದಾರಿಯಲ್ಲಿ ಎಲ್ಇಡಿ ಟಿವಿಗಳನ್ನು ತುಂಬಿದ ಟ್ರಕ್ ಅನ್ನು ದರೋಡೆ ಮಾಡಿದ್ದ. ಇದರಿಂದಾಗಿ ಪೊಲೀಸರಿಗೆ ಮತ್ತಷ್ಟು ತಲೆನೋವು ಹೆಚ್ಚಾಯಿತು.
ಹುಡುಗಿಯರಿಗಾಗಿ ಲೂಟಿ ಮಾಡುತ್ತಿದ್ದ ಮಾಫಿಯಾ ಡಾನ್ ಅಮಿತ್ ಭೂರಾ ಭೂರಾ ನಾನಾ ಕಡೆ ಕೇಸ್ ದಾಖಲು :ಅಮಿತ್ ವಿರುದ್ಧ ಮಧು ಬಿಹಾರ, ಮಾಳವೀಯ ನಗರ, ಜನಕ್‌ಪುರಿ, ನ್ಯೂ ಫ್ರೆಂಡ್ಸ್ ಕಾಲೋನಿ, ಕೀರ್ತಿ ನಗರ ಪೊಲೀಸ್ ಠಾಣೆಗಳು, ಗಾಜಿಯಾಬಾದ್‌ನ ಇಂದಿರಾಪುರಂ, ಮುಜಾಫರ್‌ನಗರ ಸಿಟಿ, ಶಾಮ್ಲಿ, ಫಗುನಾ, ಬಾಗ್‌ಪತ್, ಗುರುದಾಸ್‌ಪುರ ಮತ್ತು ಡೆಹ್ರಾಡೂನ್ ಪೊಲೀಸ್ ಠಾಣೆಗಳಲ್ಲಿ ಇದುವರೆಗೆ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪಂಜಾಬ್‌ದಲ್ಲೂ ಪ್ರಕರಣ ನೋಂದಾಯಿಸಲಾಗಿದೆ. ಈ ಪೈಕಿ ಬರೇಲಿಯ ಸಕ್ಕರೆ ಕಾರ್ಖಾನೆಯಿಂದ 15 ಲಕ್ಷ ರೂಪಾಯಿ ದರೋಡೆ ಪ್ರಕರಣವೂ ದಾಖಲಾಗಿದೆ.
ಮತ್ತೊಮ್ಮೆ ಭೂರಾ ಬಂಧನ :ಜೂನ್ 2011ರಲ್ಲಿ ದೆಹಲಿಯ ವಿಶೇಷ ತಂಡ ಭೂರಾನನ್ನು ಮತ್ತೆ ಬಂಧಿಸಿತು. ಭೂರಾ ಬಂಧನದಿಂದಾಗಿ 4 ರಾಜ್ಯಗಳ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ 3 ವರ್ಷಗಳ ನಂತರ ಡಿಸೆಂಬರ್ 15, 2014 ರಂದು ಡೆಹ್ರಾಡೂನ್ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಗಂಗಾರಾಮ್, ಕಾನ್ಸ್ಟೆಬಲ್ಗಳಾದ ಪ್ರದೀಪ್ ಕುಮಾರ್, ಇಳಂ ಚಂದ್ರ, ಧರ್ಮೇಂದ್ರ ಮತ್ತು ರವೀಂದ್ರ ಅವರು ಸೈಲಾನ ಗ್ರಾಮದ ಮುಖ್ಯಸ್ಥನನ್ನು ಕೊಲೆ ಮಾಡಿದ ಆರೋಪದ ಮೇಲೆ ಭೂರಾನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆ ತರುತ್ತಿದ್ದರು.
ಹುಡುಗಿಯರಿಗಾಗಿ ಲೂಟಿ ಮಾಡುತ್ತಿದ್ದ ಮಾಫಿಯಾ ಡಾನ್ ಅಮಿತ್ ಭೂರಾ ಮತ್ತೆ ಎಸ್ಕೇಪ್ :ಆರೋಪಿಯನ್ನು ಕೋರ್ಟ್ಗೆ ಹಾಜರು ಪಡಿಸಲು ಕರೆತರುವ ಸಂಗತಿ ಭೂರಾ ಸ್ನೇಹಿತರಿಗೆ ತಿಳಿದಿತ್ತು. ಅವರು ಬಾಗ್‌ಪತ್‌ನಿಂದ ಹೊರಟ ತಕ್ಷಣ ದುಷ್ಕರ್ಮಿಗಳು ಟೆಂಪೋವನ್ನು ಸುತ್ತುವರೆದು ಗುಂಡು ಹಾರಿಸಲು ಪ್ರಾರಂಭಿಸಿದರು. ಅಮಿತ್‌ನನ್ನು ಪೊಲೀಸರ ಹಿಡಿತದಿಂದ ಬಿಡಿಸಿದರು. ದಾಳಿಯಿಂದ ಭಯಭೀತರಾದ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳನ್ನು ಎಸೆದು ಪರಾರಿಯಾಗಿದ್ದನು. ಅಮಿತ್ ಮತ್ತು ಆತನ ಸಹಚರರು ದಾರಿಯಲ್ಲಿ ಎರಡು ಎಕೆ-47 ಮತ್ತು ಎಸ್‌ಎಲ್‌ಆರ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದರು.
ಭೂರಾ ತಲೆಗೆ 10 ಲಕ್ಷ ಬಹುಮಾನ :ಡೆಹ್ರಾಡೂನ್‌ನಲ್ಲಿ ಮೋಸ್ಟ್ ವಾಂಟೆಡ್ ಅಮಿತ್ ಭೂರಾ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಾಗ ಯುಪಿ, ಹರಿಯಾಣ, ದೆಹಲಿ ಮತ್ತು ಉತ್ತರಾಖಂಡದ ಪೊಲೀಸರ ನಿದ್ದೆಗೆ ಭಂಗ ಉಂಟಾಯಿತು. ಈ ಘಟೆಯಿಂದಾಗಿ ಉತ್ತರಾಖಂಡದಲ್ಲಿ ಹಲವು ಅಧಿಕಾರಿಗಳಿಗೆ ಶಿಕ್ಷೆಯೂ ಆಗಿದೆ. ಬಳಿ ಅಧಿಕಾರಿಗಳು ತಲೆಮರೆಸಿಕೊಂಡ ಆರೋಪಿ ಭೂರಾನನ್ನು ಹುಡುಕಿಕೊಟ್ಟವರಿಗೆ 50 ಸಾವಿರ ನಗದು ಬಹುಮಾನ ಘೋಷಿಸಲಾಯಿತು. ದಿನದಿಂದ ದಿನಕ್ಕೆ ಭೂರಾ ಕೌರ್ಯ ಹೆಚ್ಚಾಗಿ ತೊಡಗಿತು. ಇದರಿಂದಾಗಿ ಪೊಲೀಸರು ಭೂರಾ ಜೀವಂತವಾಗಲಿ ಅಥವಾ ಸಾವಾಗಲಿ.. ಹಿಡಿದವರಿಗೆ ಯುಪಿ ಮತ್ತು ಉತ್ತರಾಖಂಡ್ ಸರ್ಕಾರಗಳು ಒಟ್ಟಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿತು.
ಅಮಿತ್ ಸೆರೆಗಾಗಿ ವಿಶೇಷ ತಂಡ: ಅಮಿತ್ ಭೂರಾನ ಹಿಡಿಯಲು ನೋಯ್ಡಾದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ಕಂಟ್ರೋಲ್ ರೂಂನಲ್ಲಿ ದೆಹಲಿ, ಯುಪಿ ಮತ್ತು ಉತ್ತರಾಖಂಡದ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅವರು ಭುರಾನ ಹಿಡಿಯಲು ಬಲೆ ಹಾಕುತ್ತಾರೆ. ಮೂರು ರಾಜ್ಯಗಳ ಪೊಲೀಸರ ಮುತ್ತಿಗೆಯನ್ನು ಮುರಿದು ಅಮಿತ್ ತನ್ನ ಪಾಲುದಾರ ಸಚಿನ್ ಖೋಖರ್ ಜೊತೆ ಪಂಜಾಬ್ ತಲುಪಿದ್ದನು. 2015ರ ಏಪ್ರಿಲ್ 4 ರಂದು 10 ಲಕ್ಷ ಬಹುಮಾನ ಮೊತ್ತದ ಆರೋಪಿ ಭುರಾನನ್ನು ಪಂಜಾಬ್ ಪೊಲೀಸರು ಸೆರೆ ಹಿಡಿದಿದ್ದರು. ಈ ಸುದ್ದಿ ಪಂಜಾಬ್‌ನಿಂದ ಬಂದಾಗ ಮೂರು ರಾಜ್ಯಗಳ ಪೊಲೀಸರು ಅಚ್ಚರಿಗೊಂಡಿದ್ದರು.
ಭೂರಾ ಫೇಸ್ಬುಕ್ನಲ್ಲಿ ಸಕ್ರಿಯ :ಸದ್ಯ ಅಮಿತ್ ಭೂರಾ ಪಟಿಯಾಲ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಬೆ. ಫೇಸ್ಬುಕ್ನಲ್ಲಿ ಅಮಿತ್ ಮಲಿಕ್ ಭೂರಾ ಎಂಬ ಹೆಸರಿನ ಖಾತೆಯಿದೆ, ಅದರಲ್ಲಿ ಆಗಾಗ ಹೊಸ ಪೋಸ್ಟ್ ಗಳು ಬರುತ್ತಲೇ ಇರುತ್ತವೆ. ಭೂರಾನೇ ಜೈಲಿನೊಳಗಿಂದ ಫೇಸ್‌ಬುಕ್ ಖಾತೆಗೆ ಫೋಸ್ಟ್ ಹಾಕುತ್ತಿರುತ್ತಾನೆ ಎನ್ನಲಾಗಿದೆ. ಜೈಲಿನ ಹೊರಗೆ ಯೋಗಿ ರಾಜ್‌ಗೆ ಎದುರಾಗುವ ಅಪರಾಧಿಗಳ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾನೆ. 30ರ ಹರೆಯದಲ್ಲಿ ಪಟಿಯಾಲ ಜೈಲಿನಲ್ಲಿ ಬಂಧಿಯಾಗಿದ್ದ ಭೂರಾಗೆ ಈಗ 37 ವರ್ಷ. ಇಂದಿಗೂ ಅವನ ವರ್ತನೆ ಬದಲಾಗಿಲ್ಲ ಎಂಬುದನ್ನು ಅವನ ನಡೆಯಿಂದ ತಿಳಿಯುತ್ತದೆ.