ಲಖನೌ(ಉತ್ತರಪ್ರದೇಶ) :ಬಾಂಗ್ಲಾದೇಶದಿಂದ ವಲಸೆ ಬಂದ 63 ನಿರಾಶ್ರಿತ ಹಿಂದೂ ಬೆಂಗಾಳಿ ಕುಟಂಬಗಳಿಗೆ ಉತ್ತರಪ್ರದೇಶದ ಸರ್ಕಾರ ಕೃಷಿ ಭೂಮಿ ಮತ್ತು ವಾಸಕ್ಕೆ ನಿವೇಶನವನ್ನು ನೀಡಿದೆ. ಮಂಗಳವಾರ ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 63 ಜನರಿಗೆ ನಿವೇಶನ ಹಂಚಿಕೆಯ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ.
1970ರಲ್ಲಿ ಆಗಿನ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದಿಂದ ಹಿಂದೂ ಬೆಂಗಾಳಿ ಕುಟುಂಬಗಳು ವಲಸೆ ಬಂದಿದ್ದವು. ಇದರಲ್ಲಿ 63 ಕುಟುಂಬಗಳಿಗೆ ಕಾನ್ಪುರದ ರಸೂಲ್ಬಾದ್ನಲ್ಲಿ ಪ್ರತಿ ಎರಡು ಎಕರೆ ಕೃಷಿ ಭೂಮಿ ಮತ್ತು 200 ಚದರ ಗಜಗಳ ನಿವೇಶನ ಭೂಮಿ ನೀಡಲಾಗಿದೆ.
ಎಲ್ಲ ಸಹೋದರ-ಸಹೋದರಿಯರನ್ನು ನಾವು ಸ್ವಾಗತಿಸುತ್ತಿದ್ದೇವೆ. ಇವರಿಗಾಗಿ 130 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ವಾಸಕ್ಕೆ ಭೂಮಿ ಒದಗಿಸಲಾಗಿದೆ. ಅಲ್ಲದೇ, ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಆವಾಸ್ ಯೋಜನೆಯಡಿ 1.20 ಲಕ್ಷ ರೂ. ನೆರವು ನೀಡಲಾಗುವುದು ಎಂದು ಸಿಎಂ ಯೋಗಿ ತಿಳಿಸಿದ್ದಾರೆ.