ಲಖನೌ( ಉತ್ತರ ಪ್ರದೇಶ):ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ನೆರವಾಗುವ ಸಲುವಾಗಿ ಉಚಿತ ತರಬೇತಿ ನೀಡಲು 'ಅಭ್ಯುದಯ' ಯೋಜನೆ ಫೆಬ್ರವರಿ 16ರಂದು ಜಾರಿಗೊಳಿಸಿರುವ ಉತ್ತರ ಪ್ರದೇಶ ಸರ್ಕಾರ ಮತ್ತೊಂದು ಘೋಷಣೆ ಮಾಡಿದೆ.
ಈ ಅಭ್ಯುದಯ ಯೋಜನೆಯಡಿಯಲ್ಲಿ ಕೆಲವು ಆಯ್ದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ಗಳನ್ನು ನೀಡುವುದಾಗಿ ಈಗ ಘೋಷಣೆ ಮಾಡಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಿಗೆ ಡಿಜಿಟಲ್ ಸಂಪನ್ಮೂಲಗಳನ್ನು ಪಡೆಯಲು ಮತ್ತಷ್ಟು ನೆರವಾಗಲಿದೆ.
ಟ್ಯಾಬ್ಲೆಟ್ಗಳನ್ನು ನೀಡಲು ಶೀಘ್ರದಲ್ಲೇ ಅರ್ಹತಾ ಮಾನದಂಡಗಳನ್ನು ಸರ್ಕಾರ ನಿರ್ಧರಿಸಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದ್ದು, ಸುಮಾರು 20 ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ಟ್ಯಾಬ್ಲೆಟ್ಗಳ ಖರೀದಿಗಾಗಿ ಮೀಸಲಿಡಲಾಗಿದೆ.
ಮುಖ್ಯಮಂತ್ರಿ ಅಭ್ಯುದಯ ಯೋಜನೆ ಅನುಷ್ಠಾನಕ್ಕಾಗಿ ರಚಿಸಲಾದ ರಾಜ್ಯಮಟ್ಟದ ಸಮಿತಿಯ ಸದಸ್ಯರಾದ ಲಖನೌ ವಿಭಾಗೀಯ ಆಯುಕ್ತ ರಂಜನ್ ಕುಮಾರ್ ಅವರು ಟ್ಯಾಬ್ಲೆಟ್ ವಿತರಣೆಯ ಅರ್ಹತಾ ಮಾನದಂಡಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ ಅವರ ಪ್ರಕಾರ, ಮುಖ್ಯಮಂತ್ರಿ ಅಭ್ಯುದಯ ಯೋಜನೆ ಬಗ್ಗೆ ಯುವಕರಲ್ಲಿ ಅಪಾರ ಉತ್ಸಾಹವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ವಿವಿಧ ಸ್ಪರ್ಧಾತ್ಮಕ ಹಿನ್ನೆಲೆಯ ಸುಮಾರು ಐದು ಲಕ್ಷ ವಿದ್ಯಾರ್ಥಿಗಳು ಈಗಾಗಲೇ ಅಭುದ್ಯಯ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.