ಲಕ್ನೋ: ಯುಪಿಯಲ್ಲಿ ಇನ್ಮುಂದೆ ಸಿನಿಮಾ ತೆಗೆಯಲು ಸುಲಭವಾದ ಅನುಕೂಲವನ್ನು ಸರ್ಕಾರ ಮಾಡಿಕೊಡಲಿದೆ.
ಚಲನಚಿತ್ರ ನಿರ್ಮಾಪಕರಿಗೆ ಆನ್‌ಲೈನ್ ಪೋರ್ಟಲ್ ಸ್ಥಾಪಿಸಲು ಮುಂದಾದ ಯುಪಿ ಸರ್ಕಾರ - ಲಕ್ನೋ
ಸರ್ಕಾರದ ವ್ಯವಹಾರವನ್ನು ಸುಲಭಗೊಳಿಸಲು ರಾಜ್ಯ ಸರ್ಕಾರವು ಚಲನಚಿತ್ರ ನಿರ್ಮಾಪಕರಿಗಾಗಿ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪರಿಚಯಿಸಲಿದೆ.
ಯುಪಿ ಸರ್ಕಾರ
ರಾಜ್ಯ ಸರ್ಕಾರವು ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿದೆ. ಇದು ಚಲನಚಿತ್ರ ನಿರ್ಮಾಪಕರಿಗೆ ಆನ್‌ಲೈನ್ ಮೂಲಕ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಚಲನಚಿತ್ರ ನಿರ್ಮಾಪಕರು ಸರ್ಕಾರದಿಂದ ಅಗತ್ಯವಾದ ಅನುಮತಿಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಯೋಗಿ ಅದಿಯನಾಥ್ ಸರ್ಕಾರದ ವ್ಯವಹಾರವನ್ನು ಸುಲಭಗೊಳಿಸುವ ಭಾಗವಾಗಿ ಈ ಕ್ರಮವನ್ನು ಜಾರಿಗೆ ತರಲಾಗಿದೆ ಎನ್ನಲಾಗಿದೆ.