ಕರ್ನಾಟಕ

karnataka

ETV Bharat / bharat

ಮನೆ ಮನೆಗೆ ರಾಷ್ಟ್ರ ಧ್ವಜ ಹಂಚಿದ ಉತ್ತರ ಪ್ರದೇಶದ ಕುಟುಂಬಕ್ಕೆ ಜೀವ ಬೆದರಿಕೆ - death threat

ಮನೆ ಮನೆಗೆ ಭಾರತದ ಧ್ವಜ ಹಂಚಿದ್ದಾನೆ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಆತನ ಮನೆಗೆ ಜೀವ ಬೆದರಿಕೆಯ ಪೋಸ್ಟರ್ ಅಂಟಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

UP family receives death threat for distributing flags
ಮನೆ ಮೆನೆಗೆ ಧ್ವಜ ಹಂಚಿದನಿಗೆ ಜೀವ ಬೆದರಿಕೆ

By

Published : Aug 15, 2022, 10:59 PM IST

ಬಿಜ್ನೋರ್(ಉತ್ತರ ಪ್ರದೇಶ): ಜಿಲ್ಲೆಯ ಕಿರಾತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ತ್ರಿವರ್ಣ ಧ್ವಜವನ್ನು ಹಂಚಿದ ವ್ಯಕ್ತಿಯ ಮನೆಗೆ ಜೀವ ಬೆದರಿಕೆ ಪತ್ರ ಅಂಟಿಸಿದ ಘಟನೆ ನಡೆದಿದೆ. ಅರುಣ್ ಕುಮಾರ್ ಎಂಬವರ ಪತ್ನಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಧ್ವಜ ವಿತರಣಾ ಕಾರ್ಯಕ್ರಮದಲ್ಲಿ ಪತ್ನಿಯ ಸಹಕಾರ ಪಡೆದು ಮನೆ ಮನೆಗೆ ತೆರಳಿ ತ್ರಿವರ್ಣ ಧ್ವಜ ಹಂಚುವ ಕಾರ್ಯ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಇವರ ಮನೆಯ ಹೊರಗಿನ ಗೋಡೆಗೆ ಜೀವ ಬೆದರಿಕೆ ಪತ್ರ ಅಂಟಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.

ABOUT THE AUTHOR

...view details