ಕರ್ನಾಟಕ

karnataka

ETV Bharat / bharat

ಯುಪಿ ಚುನಾವಣೆ: ಸ್ಟ್ರಾಂಗ್‌ ರೂಮ್‌ ಹಿಂಬದಿ ವಿವಿಪ್ಯಾಟ್‌ ಚೀಟಿಗಳು ಪತ್ತೆ - ಉತ್ತರ ಪ್ರದೇಶದ ಮಂಡಿಯ ಸ್ಟ್ರಾಂಗ್‌ ರೂಮ್‌ ಹಿಂಬದಿ ವಿವಿಪ್ಯಾಟ್‌ ಚೀಟಿಗಳು ಪತ್ತೆ

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮಂಡಿ ಸ್ಟ್ರಾಂಗ್‌ ರೂಂ ಪಕ್ಕದಲ್ಲಿ ವಿವಿಪ್ಯಾಟ್‌ನ ಸ್ಲಿಪ್‌ಗಳು ಪತ್ತೆಯಾಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

UP elections VVPAT slips found behind the strongroom in Basti
ಯುಪಿ ಚುನಾವಣೆ: ಸ್ಟ್ರಾಂಗ್‌ ರೂಮ್‌ ಹಿಂಬದಿ ವಿವಿಪ್ಯಾಟ್‌ ಚೀಟಿಗಳು ಪತ್ತೆ...

By

Published : Mar 4, 2022, 7:17 PM IST

ಲಖನೌ: ಉತ್ತರ ಪ್ರದೇಶದಲ್ಲಿ ನಿನ್ನೆಯಷ್ಟೇ 6ನೇ ಹಂತದ ಮತದಾನ ಮುಗಿದಿದ್ದು, ಮಾರ್ಚ್‌ 7ಕ್ಕೆ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಇದೇ 10 ರಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮಂಡಿಯ ಸ್ಟ್ರಾಂಗ್‌ ರೂಂ ಪಕ್ಕದಲ್ಲಿ ವಿವಿಪ್ಯಾಟ್‌ನ ಸ್ಲಿಪ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದು ಚುನಾವಣಾ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದು, ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಯುಪಿ ಚುನಾವಣೆಯ 6ನೇ ಹಂತದ ಮತದಾನ ಪೂರ್ಣಗೊಂಡ ನಂತರ, ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಮಂಡಿ ಸಮಿತಿಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿತ್ತು.

ಸ್ಟ್ರಾಂಗ್‌ ರೂಂ ಪಕ್ಕದಲ್ಲಿ ವಿವಿಪ್ಯಾಟ್‌ ಚೀಟಿಗಳು ಪತ್ತೆಯಾಗುತ್ತಿದ್ದಂತೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಾಯಕರು ಮಂಡಿ ಸಮಿತಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ನಿರತ ಮುಖಂಡರನ್ನು ಸಮಾಧಾನಪಡಿಸಿದ ಅಧಿಕಾರಿಗಳು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪತ್ತೆಯಾಗಿರುವ ವಿವಿಪ್ಯಾಟ್‌ಗಳಲ್ಲಿ 1000 ಕ್ಕಿಂತ ಹೆಚ್ಚಿನ ಕ್ರಮಸಂಖ್ಯೆಯನ್ನು ಮುದ್ರಿಸಲಾಗಿದೆ. ಹಲವಾರು ಚೀಟಿಗಳು ಬೆಂಕಿಯಲ್ಲಿ ಸುಟ್ಟಿರುವ ರೀತಿಯಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ 6ನೇ ಹಂತದ ಮತದಾನ ಮುಕ್ತಾಯ: ಶೇ 55.8ರಷ್ಟು ವೋಟಿಂಗ್​​

ABOUT THE AUTHOR

...view details