ಕರ್ನಾಟಕ

karnataka

ETV Bharat / bharat

Murder: ಲಖನೌದಲ್ಲಿ ಮಗಳನ್ನೇ ಕೊಂದ ತಾಯಿ: ಸುಲ್ತಾನ್​​ಪುರದಲ್ಲಿ ಮಹಿಳೆ ಹೂತುಹಾಕಿದ ನೆರೆಹೊರೆಯವರು - ಮಹಿಳೆಯನ್ನು ಕೊಂದು ಹೂತಾಕಿದ ನೆರೆಹೊರೆಯವರು

ಉತ್ತರಪ್ರದೇಶದಲ್ಲಿ ಅಮಾನವೀಯ ಘಟನೆಗಳು ವರದಿಯಾಗಿವೆ. ಒಂದೆಡೆ ತಾಯಿ ಮಗಳನ್ನು ಕೊಲೆ ಮಾಡಿದ್ರೆ, ಇನ್ನೊಂದೆಡೆ ಪಕ್ಕದ ಮನೆಯ ಮಹಿಳೆಯನ್ನು ಕೊಂದು ಹೂತಾಕಿರುವುದು ಬೆಳಕಿಗೆ ಬಂದಿದೆ. ಆ ಘಟನೆಗಳ ವಿವರ ಇಲ್ಲಿದೆ ನೋಡಿ..

Neighbour kills elderly woman  woman arrested for killing minor daughter  UP crime  ಮಗಳನ್ನು ಕೊಂದ ತಾಯಿ  ಮಹಿಳೆಯನ್ನು ಹೂತಾಕಿದ ನೆರೆಹೊರೆಯವರು  ಉತ್ತರಪ್ರದೇಶದಲ್ಲಿ ಅಮಾನವೀಯ ಘಟನೆ  ತಾಯಿ ಮಗಳನ್ನು ಕೊಲೆ  ಮಹಿಳೆಯನ್ನು ಕೊಂದು ಹೂತಾಕಿರುವುದು ಬೆಳಕಿಗೆ  ಮಹಿಳೆಯನ್ನು ಕೊಂದು ಹೂತಾಕಿದ ನೆರೆಹೊರೆಯವರು  ಆಕೆಯ ನೆರೆಹೊರೆಯವರ ಕೊಲೆ
ಮಗಳನ್ನು ಕೊಂದ ತಾಯಿ,

By

Published : Jun 15, 2023, 10:23 AM IST

ಲಖನೌ, ಉತ್ತರಪ್ರದೇಶ:ಉತ್ತರಪ್ರದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಕೊಲೆಗಳು ನಡೆದಿವೆ. ಪ್ರಕರಣವೊಂದರಲ್ಲಿ ನೆರೆಹೊರೆಯವರು ವಯಸ್ಸಾದ ಮಹಿಳೆಯನ್ನು ಕೊಲೆ ಮಾಡಿದ್ರೆ, ಇನ್ನೊಂದು ಪ್ರಕರಣದಲ್ಲಿ ತಾಯಿಯೇ ಮಗಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಮಹಿಳೆಯನ್ನು ಕೊಂದು ಹೂತಾಕಿದ ನೆರೆಹೊರೆಯವರು:ವಯಸ್ಸಾದ ಮಹಿಳೆಯೊಬ್ಬರನ್ನು ಆಕೆಯ ನೆರೆಹೊರೆಯವರ ಕೊಲೆ ಮಾಡಿ ಶವವನ್ನು ತಮ್ಮ ಮನೆಯ ಅಂಗಳದಲ್ಲಿ ಹೂತು ಹಾಕಿರುವ ಘಟನೆ ಲಖನೌದಲ್ಲಿ ನಡೆದಿದೆ. ಮಹಿಳೆಯ ಕುಟುಂಬ ಸದಸ್ಯರು ಸೋಮವಾರ ಪೊಲೀಸರಿಗೆ ನಾಪತ್ತೆ ದೂರು ನೀಡಿದ ಬಳಿಕ ಮಾಹಿತಿ ಬೆಳಕಿಗೆ ಬಂದಿದೆ.

ಉತ್ತರ ವಲಯದ ಡಿಸಿಪಿ ಖಾಸಿಂ ಅಬಿದಿ ಮಾತನಾಡಿ, ಸಂತ್ರಸ್ತೆಯ ಕುಟುಂಬ ಸದಸ್ಯರು ತಮ್ಮ ನೆರೆಹೊರೆಯವರಾದ ಮೊಹಮ್ಮದ್ ಖಾಸಿಮ್ ಅವರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಆಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನಮ್ಮ ಪೊಲೀಸ್​ ಸಿಬ್ಬಂದಿ ಮಹಿಳೆಯ ನಾಪತ್ತೆ ಕುರಿತು ವಿಚಾರಣೆ ನಡೆಸಿದ್ದರು ಎಂದರು. ಶಂಕಿತನು ಆರಂಭದಲ್ಲಿ ಕಥೆಗಳನ್ನು ಕಟ್ಟುವುದಕ್ಕೆ ಶುರು ಮಾಡಿದರು. ಆದರೆ, ನಂತರ ನಾವು ಮಹಿಳೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡರು. ಮಹಿಳೆ ಶಂಕಿತ ವ್ಯಕ್ತಿಯ ಮನೆಗೆ ಹೋಗುತ್ತಿರುವ ದೃಶ್ಯಾವಳಿಗಳನ್ನು ಸಿಸಿಟಿವಿ ಮೂಲಕ ಪತ್ತೆ ಮಾಡಲಾಗಿತ್ತು ಎಂದು ಡಿಸಿಪಿ ತಿಳಿಸಿದ್ದಾರೆ.

ಶಂಕಿತನ ಮನೆಯ ಅಂಗಳದಿಂದ ಶವವನ್ನು ಹೊರತೆಗೆಯಲಾಗಿದ್ದು, ಶವಪರೀಕ್ಷೆಯಲ್ಲಿ ಮಹಿಳೆಯ ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಶಂಕಿತ ವ್ಯಕ್ತಿ ಮೃತಳನ್ನು ‘ಸಹೋದರಿ’ ಎಂದು ಕರೆಯುತ್ತಿದ್ದನು. ಆರೋಪಿಯನ್ನು ಬಂಧಿಸಲಾಗಿದೆ. ಆದರೆ, ಅಪರಾಧದ ಹಿಂದಿನ ಉದ್ದೇಶ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಮಗಳನ್ನು ಕೊಂದ ತಾಯಿ: ಉತ್ತರ ಪ್ರದೇಶದ ಸುಲ್ತಾನ್‌ಪುರದ ಪೊಲೀಸರು 12 ವರ್ಷದ ಮಗಳನ್ನು ಕೊಂದ ಮಹಿಳೆಯನ್ನು ಬಂಧಿಸಿದ್ದಾರೆ. ಬಾಲಕಿ ಸಾವಿಗೆ ಸಂಬಂಧಿಸಿದಂತೆ ಮಹಿಳೆಯ ಸಹೋದರ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.

ಕತ್ತು ಸೀಳಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿದ್ದಾಳೆ. ಮಹಿಳೆಯ ಪತಿ ಮೂರು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಮಹಿಳೆಗೆ ಮತ್ತೊಂದು ಮದುವೆಯಾಗಿದ್ದು, ಆಕೆ ಪ್ರಸ್ತುತ ತನ್ನ ಎರಡನೇ ಪತಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರಿಯಾಂಕಾ ಓಜಾ (38) ಕೂಡ ಖಿನ್ನತೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ಓಜಾ ಅವರು ತಮ್ಮಿಬ್ಬರ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದರು. ಸುಲ್ತಾನಪುರ ಎಸ್ಪಿ ಸೋಮೆನ್ ಬರ್ಮಾ ಮಾತನಾಡಿ, ಪ್ರಿಯಾಂಕಾ ಚಂದಾ ಪೊಲೀಸ್ ವೃತ್ತದ ವಿವೇಕನಗರ ನಿವಾಸಿ. ಪ್ರಿಯಾಂಕಾ ಮನೆಯಲ್ಲಿ ತರಕಾರಿ ಕತ್ತರಿಸುತ್ತಿದ್ದಾಗ ಮಗಳು ಪಕ್ಕದಲ್ಲಿ ಕುಳಿತಿದ್ದಳು. ಇದ್ದಕ್ಕಿದ್ದಂತೆ ಯಾವುದೋ ವಿಚಾರಕ್ಕೆ ಪ್ರಿಯಾಂಕಾ ಆಕೆಯ ಮೇಲೆ ಕೋಪಗೊಂಡು ಬ್ಲೇಡ್‌ನಿಂದ ಕತ್ತು ಕೊಯ್ದಿದ್ದಾಳೆ ಎಂದು ಬರ್ಮಾ ಮಾಹಿತಿ ನೀಡಿದರು.

ಕಿರುಚಾಟದ ಸದ್ದು ಕೇಳಿದ ಸಂಬಂಧಿಕರು ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ನೋಡಿದ್ದಾರೆ. ಕೂಡಲೇ ಆಕೆಯನ್ನು ಚಂದಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿನ ವೈದ್ಯರು ಆಕೆಯನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ ಆಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಆಕೆಯ ಸಹೋದರ ರವಿ ಓಜಾ ಅವರ ದೂರಿನ ಮೇರೆಗೆ ಪ್ರಿಯಾಂಕಾ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರಿದಿದೆ.

ಓದಿ:ರಾತ್ರಿ ಮಲಗಿದ್ದ ವೇಳೆ ಎರಗಿದ ಜವರಾಯ, ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ 6 ಮಂದಿ ಬಲಿ

ABOUT THE AUTHOR

...view details