ಫತೇಪುರ(ಉತ್ತರ ಪ್ರದೇಶ):ಸಾಮಾನ್ಯವಾಗಿ ಪಾಸೆಂಜರ್ ಆಟೋದಲ್ಲಿ 4 ಅಥವಾ 5 ಮಂದಿ ಪ್ರಯಾಣಿಸುವುದನ್ನ ನಾವು ನೋಡಿದ್ದೇವೆ. ಆದ್ರೆ, ಮಧ್ಯ ಉತ್ತರ ಪ್ರದೇಶದ ಫತೇಪುರದಲ್ಲಿ ಆಟೋವೊಂದರಲ್ಲಿ ತೆರಳುತ್ತಿದ್ದ ಪ್ರಯಾಣಿಕರನ್ನು ಕಂಡು ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ.
ಹೌದು, ಫತೇಪುರದ ಬಿಂಡ್ಕಿ ಕೊತ್ವಾಲಿ ಪ್ರದೇಶದ ಬಳಿ ತುಂಬಾ ವೇಗವಾಗಿ ಹೋಗುತ್ತಿದ್ದ ಆಟೋವನ್ನು ತಡೆದು ಪೊಲೀಸರು ಪರಿಶೀಲಿಸಿದಾಗ ಚಾಲಕ ಸೇರಿದಂತೆ ಬರೋಬ್ಬರಿ 27 ಮಂದಿ ಪ್ರಯಾಣಿಕರು ಕಂಡುಬಂದಿದ್ದಾರೆ.