ಕರ್ನಾಟಕ

karnataka

ETV Bharat / bharat

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಆರೋಪ: ಕಿಡಿಗೇಡಿ ಮೇಲೆ ಗುಂಡು ಹಾರಿಸಿದ ಪೊಲೀಸ್​ - ಉತ್ತರಪ್ರದೇಶದ ಅಝಮ್​ಗರ್​ ಕ್ರೈಂ ಸುದ್ದಿ

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಹಿನ್ನೆಲೆ ವ್ಯಕ್ತಿಯ ಮೇಲೆ ಪೊಲೀಸರು​​ ಗುಂಡು ಹಾರಿಸಿರುವ ಘಟನೆ ಉತ್ತರಪ್ರದೇಶದ ಅಜಮ್​ಘಡ್​​ನಲ್ಲಿ ನಡೆದಿದೆ. ತನಿಖೆ ಕೈಗೊಂಡಿರುವ ಅಧಿಕಾರಿಗಳು ಪೊಲೀಸ್ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

misbehaviour
ಗುಂಡು ಹಾರಿಸಿದ ಖಾಕಿ

By

Published : Dec 2, 2020, 1:33 PM IST

ಅಜಮ್​ಘಡ್​​ (ಉತ್ತರಪ್ರದೇಶ) : ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಹಿನ್ನೆಲೆ ವ್ಯಕ್ತಿಯ ಮೇಲೆ ಪೊಲೀಸ್​​ ಗುಂಡು ಹಾರಿಸಿರುವ ಘಟನೆ ನಗರದ ಕಮಲ್​ಪುರದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿ ಕಿಶನ್​ಲಾಲ್ ಎಂಬಾತನನ್ನು ವಾರಣಾಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಮಲ್​ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆಗೆ ಮಹಿಳೆಯರು ತೆರಳುತ್ತಿದ್ದ ಸಮಯದಲ್ಲಿ, ಮದ್ಯ ಸೇವಿಸಿ ರಸ್ತೆಯಲ್ಲಿ ಹೋಗಿಬರುವ ಮಹಿಳೆಯರೊಂದಿಗೆ ಕಿಶನ್​ಲಾಲ್ ಹಾಗೂ ಸ್ನೇಹಿತರು​ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗ್ತಿದೆ. ಈ ವೇಳೆ ಪ್ರಶ್ನಿಸಲು ಹೋದ ಪೊಲೀಸರ ಜತೆ ಕಿಡಿಗೇಡಿಗಳು ವಾಗ್ವಾದ ನಡೆಸಿದ್ದು, ಮಾತುಕತೆ ವಿಕೋಪಕ್ಕೆ ತಿರುಗಿದೆ. ಆಗ ಆರೋಪಿ ಕಿಶನ್​ಲಾಲ್​​ ಮೇಲೆ ಪೊಲೀಸ್ ಸರ್ವೇಶ್ ಗುಂಡು ಹಾರಿಸಿದ್ದಾನೆ.

ಸರ್ವೇಶ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details