ಕರ್ನಾಟಕ

karnataka

ETV Bharat / bharat

ಕಳ್ಳಭಟ್ಟಿ ಸಾರಾಯಿ ಮಾಫಿಯಾ: ಕಾನ್ಸ್​ಟೇಬಲ್​ನನ್ನು ಹೊಡೆದು ಕೊಂದ ದುಷ್ಕರ್ಮಿಗಳು! - ಕಾಸ್ಗಂಜ್​ ಅಪರಾಧ ಪ್ರಕರಣ

ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಮತ್ತು ಪೊಲೀಸ್​ ಇನ್ಸ್​ಪೆಕ್ಟರ್​ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಕಾಸ್ಗಂಜ್​ನಲ್ಲಿ ನಡೆದಿದೆ.

Constable beaten to death  UP constable dead  Constable beated to death Kasganj  ಕಾನ್ಸ್​ಟೇಬಲ್​ನನ್ನು ಹೊಡೆದು ಸಾಯಿಸಿದ ದುಷ್ಕರ್ಮಿಗಳು  ಕಾಸ್ಗಂಜ್​ನಲ್ಲಿ ಕಾನ್ಸ್​ಟೇಬಲ್​ನನ್ನು ಹೊಡೆದು ಸಾಯಿಸಿದ ದುಷ್ಕರ್ಮಿಗಳು  ಕಾಸ್ಗಂಜ್​ ಅಪರಾಧ ಪ್ರಕರಣ
ಕಾನ್ಸ್​ಟೇಬಲ್​ನನ್ನು ಹೊಡೆದು ಸಾಯಿಸಿದ ದುಷ್ಕರ್ಮಿಗಳು

By

Published : Feb 10, 2021, 11:16 AM IST

ಕಾಸ್ಗಂಜ್ :ಉತ್ತರಪ್ರದೇಶದಲ್ಲಿ ಕಳ್ಳಭಟ್ಟಿ ಸಾರಾಯಿ ಮಾಫಿಯಾ ಎಗ್ಗಿಲ್ಲದೇ ಸಾಗುತ್ತಿದೆ. ಈ ಮಾಫಿಯಾದ ಕಿಂಗ್​ಪಿನ್​ ಬಂಧಿಸಲು ವಾರೆಂಟ್​ ಸಮೇತ ಪೊಲೀಸ್​ ಇನ್ಸ್​ಪೆಕ್ಟರ್​ ಮತ್ತು ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ದುಷ್ಕರ್ಮಿಗಳು ದರ್ಪ ತೋರಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಮೃತಪಟ್ಟಿರುವ ಘಟನೆ ನಾಗ್ಲಾ ಧೀಮರ್ ಗ್ರಾಮದಲ್ಲಿ ನಡೆದಿದೆ.

ನಾಗ್ಲಾ ಧೀಮರ್​ ಗ್ರಾಮಕ್ಕೆ ಮಂಗಳವಾರ ಸಂಜೆ ಕಳ್ಳಭಟ್ಟಿ ಸಾರಾಯಿ ಕಿಂಗ್​ಪಿನ್​ ಆಗಿದ್ದ ಮೋತಿಯನ್ನು ಬಂಧಿಸಲು ವಾರೆಂಟ್​ ಸಮೇತ ಪೊಲೀಸ್​ ಇನ್ಸ್​ಪೆಕ್ಟರ್​ ಅಶೋಕ್​ ಕುಮಾರ್​ ಮತ್ತು ಪೊಲೀಸ್​ ಕಾನ್ಸ್​ಟೇಬಲ್​ ದೇವೇಂದ್ರ ತೆರಳಿದ್ದರು. ಪೊಲೀಸರು ಬರುತ್ತಿದ್ದಂತೆ ಮೋತಿ ಸಹಚರರು ದಾಳಿ ಮಾಡಿ ಅವರ ಬಳಿಯಿದ್ದ ಗನ್​ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್​ ಕಾನ್ಸ್​ಟೇಬಲ್​ ದೇವೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸ್ ಇನ್ಸ್​ಪೆಕ್ಟರ್​ ಅಶೋಕ್​ ಕುಮಾರ ಗಂಭೀರವಾಗಿ ಗಾಯಗೊಂಡಿದ್ದರು. ಸುದ್ದಿ ತಿಳಿದ ಕೂಡಲೇ ಪೊಲೀಸ್​ ತಂಡ ನಾಗ್ಲಾ ಧೀಮರ್​ ಗ್ರಾಮಕ್ಕೆ ತೆರಳಿ ಅಶೋಕ್​ರನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಕಾಸ್ಗಂಜ್​ ಜಿಲ್ಲಾಧಿಕಾರಿ ಚಂದ್ರಪ್ರಕಾಶ್ ಸಿಂಗ್​​ ಹೇಳಿದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆಗಿಳಿದರು. ರಾತ್ರಿಯಿಂದಲೇ ಪರಾರಿಯಾಗಿದ್ದ ಆರೋಪಿಗಳ ಜಾಲ ಹಿಡಿಯಲು ಪೊಲೀಸ್​ ತಂಡ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಗ್ರಾಮದ ಹೊರವಲಯದ ಬಳಿಯಿರುವ ಕಾಳಿ ನದಿ ಸೇತುವೆ ಅಡಿಯಲ್ಲಿ ಆರೋಪಿಗಳು ಅಡಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಗಳ ಗುಂಡಿನ ಕಾಳಗಕ್ಕೆ ಪೊಲೀಸರು ತಕ್ಕ ಉತ್ತರವೇ ನೀಡಿದ್ದಾರೆ.

ನಡೆದ ಎನ್​ಕೌಂಟರ್​ನಲ್ಲಿ ಕಿಂಗ್​ಪಿನ್​ ಮೋತಿ ಸಹೋದರ ಎಲ್ಕಾರ್​ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಕಾಸ್ಗಂಜ್​ ಜಿಲ್ಲಾ ಎಸ್​ಪಿ ಮನೋಜ್​ ಕುಮಾರ್​ ಸೋನಾಕರ್​ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಮೃತ ವ್ಯಕ್ತಿ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಭರವಸೆಯನ್ನು ಯೋಗಿ ಆದಿತ್ಯನಾಥ್​ ಸರ್ಕಾರ ಘೋಷಿಸಿದೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸಿಎಂ ಕಚೇರಿ ಆದೇಶಿಸಿದೆ.

ABOUT THE AUTHOR

...view details