ಲಖನೌ: ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್‌ಗಾಗಿ ಭೂಮಿ ಖರೀದಿಸಿದ ಹಗರಣ ಕುರಿತಾಗಿ ಬಲಪಂಥೀಯ ನಾಯಕರನ್ನು ಗುರಿಯಾಗಿಸಿಕೊಂಡಿದ್ದ ಕಾಂಗ್ರೆಸ್ ಈಗ ತಾನೇ ಒಂದು ದೊಡ್ಡ ವಿವಾದಕ್ಕೆ ಗುರಿಯಾಗಿದೆ. ದೇಣಿಗೆ ವಿವಾದದಲ್ಲಿ ರಾಜ್ಯ ಕಾಂಗ್ರೆಸ್ ಮಾಧ್ಯಮ ಕನ್ವೀನರ್ ಲಲನ್ ಕುಮಾರ್ ಪೇಚಿಗೆ ಸಿಲುಕಿದ್ದಾರೆ.
ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ ದೇಣಿಗೆ ಮನವಿ ಜಾಹೀರಾತಿನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಲೀಡರ್ ಲಲನ್ ಕುಮಾರ್ ಅವರು, ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಅವರ ಫೋಟೋ ಹಾಕಿದ್ದಾರೆ. 'ಮದದ್ ಹಮಾರಿ ಪಹಲ್' ಹೆಸರಿನ ಅಭಿಯಾನದಡಿಯಲ್ಲಿ ಕೊರೊನಾ ಸಂತ್ರಸ್ತರಿಗೆ ನೆರವು ನೀಡುವಂತೆ ಅವರು ತಮ್ಮ ವೈಯಕ್ತಿಕ ಖಾತೆಯಲ್ಲಿಯೇ ದೇಣಿಗೆಗಾಗಿ ಮನವಿ ಮಾಡಿದ್ದಾರೆ.
ಲಲನ್ ಕುಮಾರ್ ಅವರು ಸ್ಯಾನಿಟೈಸೇಷನ್ಗಾಗಿ, ಪ್ರತಿ ಮನೆಗೆ ಪಡಿತರ ವಿತರಿಸಲು ನೆರವಾಗಲು ಸಾರ್ವಜನಿಕರಿಂದ ದೇಣಿಗೆ ಕೇಳಿದ್ದಾರೆ. ಪಕ್ಷದ ಕಾರ್ಯಕರ್ತರೊಬ್ಬರು ಲಲನ್ ಕುಮಾರ್ ತಮ್ಮ ವೈಯಕ್ತಿಕ ಖಾತೆಯಲ್ಲಿ ಹಣವನ್ನು ತೆಗೆದುಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಭಾಷಣೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರಲ್ಲಿ ಲಲನ್ ಕುಮಾರ್, ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಅಗತ್ಯ ಇರುವವರಿಗೆ ಸಹಾಯ ಮಾಡಬೇಕೆಂಬ ಪಕ್ಷದ ಆಜ್ಞೆ ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ.. ಹಾಗೆಯೇ" ದೇಣಿಗೆ ಪಡೆದ ಪ್ರತಿ ಪೈಸೆ ದಾನಿಗಳಿಗೆ ನೀಡಲಾಗುವುದು" ಎಂದು ಅವರು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಈ ವಿವಾದ ಗಂಭೀರವಾಗಿ ಪರಿಗಣಿಸಿದೆ. ಪಕ್ಷ ಇದಕ್ಕೆ ಅನುಮತಿಸಲಿಲ್ಲ, ಅಲ್ಲದೇ ಇದು ಲಲನ್ ಕುಮಾರ್ ಅವರ ವೈಯಕ್ತಿಕ ವಿಷಯವಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ನಸೀಮುದ್ದೀನ್ ಸಿದ್ದಿಕಿ ಹೇಳಿದ್ದು, ಇದಕ್ಕಾಗಿ ಪಕ್ಷದ ಹೆಸರನ್ನು ಅವರು ಬಳಸಬಾರದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ನಮ್ಮ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆಯಾಗುತ್ತಿಲ್ಲ: ಸಿದ್ದರಾಮಯ್ಯ