ಕರ್ನಾಟಕ

karnataka

ETV Bharat / bharat

ಕಾಬೂಲ್ ನದಿನೀರಿನಿಂದ ಶ್ರೀರಾಮ ಜನ್ಮಭೂಮಿಯಲ್ಲಿ ಜಲಾಭಿಷೇಕ ಮಾಡಿದ ಸಿಎಂ ಯೋಗಿ! - ಕಾಬೂಲ್ ನದಿನೀರಿನಿಂದ ಶ್ರೀರಾಮ ಜನ್ಮಭೂಮಿಯಲ್ಲಿ ಜಲಾಭಿಷೇಕ ಮಾಡಿದ ಸಿಎಂ ಯೋಗಿ

ಶ್ರೀರಾಮನ ಪವಿತ್ರ ಜನ್ಮಸ್ಥಳದಲ್ಲಿ ರಾಮ್ ಲಲ್ಲಾಗೆ ಈ ನೀರನ್ನು ಅರ್ಪಿಸುವ ಭಾಗ್ಯ ನನಗೆ ಸಿಕ್ಕಿದೆ. ಎಲ್ಲಾ ಹೆಣ್ಣುಮಕ್ಕಳ ಬಗ್ಗೆ ನನಗೆ ಸಹಾನುಭೂತಿ ಇದೆ ಎಂದು ಯೋಗಿ ಹೇಳಿದರು..

UP CM performs 'Jal Abhishek' to Ram Lalla with Kabul River water sent by a Kabul girl to PM Modi
ಕಾಬೂಲ್ ನದಿನೀರಿನಿಂದ ಶ್ರೀರಾಮ ಜನ್ಮಭೂಮಿಯಲ್ಲಿ ಜಲಾಭಿಷೇಕ ಮಾಡಿದ ಸಿಎಂ ಯೋಗಿ!

By

Published : Oct 31, 2021, 8:49 PM IST

ಲಖನೌ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕಾಬೂಲ್ ನದಿ ನೀರಿನಿಂದ ಜಲ ಅಭಿಷೇಕ ಮಾಡಿದ್ದಾರೆ.

ಆಫ್ಘಾನಿಸ್ತಾನದ ಹುಡುಗಿಯೊಬ್ಬಳು ಕಳುಹಿಸಿದ ಕಾಬೂಲ್ ನದಿಯ ನೀರನ್ನು ಗಂಗಾಜಲದೊಂದಿಗೆ ಬೆರೆಸಿ ನಂತರ ಪ್ರಧಾನಿ ಮೋದಿಯವರ ಸೂಚನೆಯಂತೆ ರಾಮಮಂದಿರ ನಿರ್ಮಾಣ ಸ್ಥಳದಲ್ಲಿ ಅಭಿಷೇಕ ಮಾಡಲಾಗಿದೆ.

ಕಾಬೂಲ್ ನದಿಯ ನೀರಿನಿಂದ ಭಗವಾನ್ ಶ್ರೀ ರಾಮ್ ಲಲ್ಲಾಗೆ ಅಭಿಷೇಕ ಮಾಡುವಂತೆ ಆಫ್ಘಾನಿಸ್ತಾನದ ಪುತ್ರಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿಗಳು ಇಂದು ತಮ್ಮ ಅಯೋಧ್ಯೆ ಪ್ರವಾಸದಲ್ಲಿ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ಕಾಬೂಲ್ ನದಿ ನೀರಿನಿಂದ ಶ್ರೀರಾಮ ಜನ್ಮಭೂಮಿಯಲ್ಲಿ ಜಲಾಭಿಷೇಕ ಮಾಡಿದ ಸಿಎಂ ಯೋಗಿ!

ಆಫ್ಘಾನಿಸ್ತಾನದ ಆ ಹುಡುಗಿ ಭಯದ ನೆರಳಿನಲ್ಲಿ ಬದುಕುತ್ತಿರುವ ಎಲ್ಲ ಹೆಣ್ಣುಮಕ್ಕಳು ಮತ್ತು ಮಹಿಳೆಯರ ನೋವನ್ನು ಈ ಮೂಲಕ ಕಳುಹಿಸಿದ್ದಾಳೆ.

ಶ್ರೀರಾಮನ ಪವಿತ್ರ ಜನ್ಮಸ್ಥಳದಲ್ಲಿ ರಾಮ್ ಲಲ್ಲಾಗೆ ಈ ನೀರನ್ನು ಅರ್ಪಿಸುವ ಭಾಗ್ಯ ನನಗೆ ಸಿಕ್ಕಿದೆ. ಎಲ್ಲಾ ಹೆಣ್ಣುಮಕ್ಕಳ ಬಗ್ಗೆ ನನಗೆ ಸಹಾನುಭೂತಿ ಇದೆ ಎಂದು ಯೋಗಿ ಹೇಳಿದರು.

ABOUT THE AUTHOR

...view details